ಚುನಾವಣಾ ಆಯೋಗ ಸಮಗ್ರ ಕರಡು ಮತದಾರರ ಪಟ್ಟಿ ಪ್ರಕಟ

ಯಾದಗಿರಿ : ಭಾರತ ಚುನಾವಣಾ ಆಯೋಗ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಯಾದಗಿರಿ ರವರ ನಿರ್ದೇಶನದಂತೆ, ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2025ರ ಹಕ್ಕು ಮತ್ತು ಆಕ್ಷೆಪಣೆಗಳನ್ನು ಯಾದಗಿರಿ ಜಿಲ್ಲೆಯ 36-ಸುರಪೂರ 37-ಶಹಾಪೂರ 38-ಯಾದಗಿರಿ ಮತ್ತು 39-ಗುರುಮಠಕಲ್ ಒಟ್ಟು 4 ವಿಧಾನಸಭಾ ಮತಕ್ಷೇತ್ರಗಳಿಗೆ ಸಂಬಂಧಿಸಿದಂತೆ 2024ರ ಅಕ್ಟೋಬರ್ 29 ರಂದು ಮಂಗಳವಾರ ಚುನಾವಣಾ ಆಯೋಗ ಸಮಗ್ರ ಕರಡು ಮತದಾರರ ಪಟ್ಟಿಗಳನ್ನು ಪ್ರಕಟಿಸಿದ್ದು, ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಯಾದಗಿರಿ ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ್ ಅವರು ತಿಳಿಸಿದ್ದಾರೆ.

ಜಿಲ್ಲೆಯ ಎಲ್ಲಾ ತಾಲ್ಲೂಕಿನ ತಹಸೀಲ್ದಾರರಿಗೆ ಈಗಾಗಲೇ ನೀಡಲಾಗಿರುತ್ತದೆ ಹಾಗೂ ಎಲ್ಲಾ ತಾಲ್ಲೂಕಿನ ತಹಸೀಲ್ದಾರರು ಹಾಗೂ ಉಪ ತಹಸೀಲ್ದಾರರು ತಮ್ಮ ತಮ್ಮ ತಹಸೀಲ್ ಕಛೇರಿ ಮತ್ತು ನಾಡಕಛೇರಿಗಳಲ್ಲಿ ಎಲ್ಲಾ ಮತಗಟ್ಟೆಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಕಛೇರಿಯ ಸೂಚನಾ ಫಲಕಕ್ಕೆ ಪ್ರಚೂರ ಪಡಿಸಲಾಗಿದೆ.

2024ರ ಅಕ್ಟೋಬರ್ 29 ರಂದು ಪ್ರಚೂರ ಪಡಿಸಿದ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ತಮ್ಮ ಹೆಸರನಲ್ಲಿ ಆಥವಾ ವಿಳಾಸದಲ್ಲಿ ಏನಾದರೂ ಬದಲಾವಣೆಗಳಾದರೆ ಅಥವಾ ತಮ್ಮ ಹೆಸರು ಮತದಾರರ ಪಟ್ಟಿಯಿಂದ ಕೈಬಿಟ್ಟರೆ ಕೂಡಲೇ ಹಕ್ಕು ಮತ್ತು ಆಕ್ಷೇಪಣೆಗಳಿಗೆ ಕಾಲಾವಕಾಶವಿದ್ದು, ತಮ್ಮ ಹೆಸರಗಳನ್ನು ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.

2025ರ ಜನವರಿ 06 ರಂದು ಅಂತಿಮ ಮತದಾರರ ಪಟ್ಟಿಗಳನ್ನು ಪ್ರಕಟಿಸಲಾಗುವುದರಿಂದ ಅದಕ್ಕಾಗಿ ತಮ್ಮ ತಾಲ್ಲೂಕಿನ ತಹಸೀಲ್ದಾರರಿಗೆ ಕಚೇರಿಗೆ ಅಥವಾ ತಮ್ಮ ಊರಿನ ಗ್ರಾಮ ಆಡಳಿತಾಧಿಕಾರಿಗಳಿಗೆ ಅಥವಾ ಮತಗಟ್ಟೆ ಮಟ್ಟದ ಅಧಿಕಾರಿಗಳ ಮೂಲಕ ಹಕ್ಕು ಮತ್ತು ಆಕ್ಷೇಪಣೆ ಅರ್ಜಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!