ಯಾದಗಿರಿ : ಜಿಲ್ಲೆಯ ಯಾದಗಿರಿ, ಶಹಾಪೂರ ಹಾಗೂ ಸುರಪುರ ತಾಲ್ಲೂಕುಗಳ ಕೆಲವು ಗ್ರಾಮ ಪಂಚಾಯತಗಳ ಉಪ ಚುನಾವಣೆಯು ಜರುಗಲಿರುವ ಹಿನ್ನೆಲೆ 2024ರ ನವೆಂಬರ್ 21 ರಂದು ಸಂಜೆ 5 ರಿಂದ ನ.23 ರಂದು ಸಂಜೆ 5 ಗಂಟೆಯ ವರೆಗೆ ಮದ್ಯಪಾನ ಹಾಗೂ ಮದ್ಯಮಾರಾಟ ನಿಷೇಧಾಜ್ಞೆ ಜಾರಿಗೊಳಿಸಿ ಡಾ.ಸುಶೀಲಾ.ಬಿ ಅವರು ಆದೇಶ ಹೊರಡಿಸಿದ್ದಾರೆ.

ಯಾದಗಿರಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಗಳಲ್ಲಿ ಸದಸ್ಯರ ರಾಜೀನಾಮೆ, ನಿಧನ ಇತ್ಯಾದಿ ಕಾರಣಗಳಿಂದ ತೆರವಾಗಿರುವ ಸ್ಥಾನಗಳಿಗೆ ಉಪ ಚುನಾವಣೆ ನಿಮಿತ್ಯ ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ದೃಷ್ಠಿಯಿಂದ, ಮಧ್ಯಪಾನ ಮತ್ತು ಮಧ್ಯಮಾರಾಟ ನಿಷೇಧಿಸಿದೆ.

ಕರ್ನಾಟಕ ಅಬಕಾರಿ ಕಾಯ್ದೆ 1967ರ ಕಲಂ 10 (ಬಿ) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, 2024ರ ನವೆಂಬರ್ 21 ರಂದು ಸಂಜೆ 5 ರಿಂದ ನ.23 ರಂದು 5 ಗಂಟೆಯ ವರೆಗೆ ಗ್ರಾಮ ಪಂಚಾಯತಗಳ ಉಪ ಚುನಾವಣೆ ನಿಮಿತ್ಯ ಈ ಗ್ರಾಮ ಪಂಚಾಯತಗಳ ಕ್ಷೇತ್ರ ವ್ಯಾಪ್ತಿಗಳೊಂದಿಗೆ ಗ್ರಾಮವೂ ಸೇರಿದಂತೆ ಎಲ್ಲಾ ವೈನ್‌ಶಾಪ್, ಬಾರ್‌ಗಳು, ದಾಬಾಗಳು ಹಾಗೂ ಹೆದ್ದಾರಿಯ ದಾಬಾಗಳಲ್ಲಿ ಯಾವುದೇ ರೀತಿಯ ಮದ್ಯವನ್ನು ಮಾರಾಟ ಮತ್ತು ಸೇವನೆಯನ್ನು ನಿರ್ಬಂಧಿಸಿದೆ ಹಾಗೂ ಸಗಟು ಮತ್ತು ಚಿಲ್ಲರೆ ಮದ್ಯ ಮಾರಾಟವನ್ನು ನಿಷೇಧಿಸಿ ತಿದ್ದುಪಡಿ ಆದೇಶ ಹೊರಡಿಸಿದ್ದಾರೆ.

ಸೂಚನೆಗಳು : ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ನೀತಿ ಸಂಹಿತೆಯ ಜಾರಿಯಲ್ಲಿರುವ ಪ್ರದೇಶಗಳಲ್ಲಿರುವ ಎಲ್ಲಾ ಮದ್ಯದ ಅಂಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಅದರ ಮಾಲೀಕರು, ಅಧಿಭೋಗದಾರರು, ಮತ್ತು ಸಂದರ್ಭನುಸಾರ ವ್ಯವಸ್ಥಾಪಕರು ಮುಚ್ಚತಕ್ಕದ್ದು, ಹಾಗೂ ಮೊಹರು ಮಾಡಿ ಅದರ ಕೀ ಯನ್ನು ಜಿಲ್ಲಾಧಿಕಾರಿಗಳಿಗೆ ಅಥವಾ ಅಧಿಕಾರ ವ್ಯಾಪ್ತಿಯುಳ್ಳ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ರಿಗೆ ಒಪ್ಪಿಸಬೇಕು.

ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಯಾರಾದರೂ ಮದ್ಯವನ್ನು ಸ್ವಾಧೀನದಲ್ಲಿ ಇಟ್ಟುಕೊಂಡಿರುವುದು ಅಥವಾ ಮದ್ಯವನ್ನು ಸೇವಿಸಿ ಬೀದಿಯಲ್ಲಿ ರಂಪಾಟ ಮಾಡುತ್ತಿರುವುದು ಕಂಡುಬAದರೆ ಮುನ್ನೆಚ್ಚರಿಕೆ ಕ್ರಮವಾಗಿ ಚುನಾವಣೆ ಮುಕ್ತಾಯವಾಗುವ ವರೆಗೆ ಅಂತರವನ್ನು ಕಸ್ಟಡಿಯಲ್ಲಿ ಇಡಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!