ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಪುಸ್ತಕ ಬಿಡುಗಡೆ

ಬೀದರ್ : ಇಂದಿನ ಆಧುನಿಕ ಕಾಲಘಟ್ಟದಲ್ಲಿ ಯುವ ಸಮುದಾಯದಲ್ಲಿ ಅಕ್ಷರ ಪ್ರೀತಿ, ಸಂಸ್ಕೃತಿ ಬೆಳೆಸುವ ಅಗತ್ಯತೆವಿದೆ ಎಂದು ಬೀದರ್ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಎಸ್.ಬಿರಾದಾರ್ ಹೇಳಿದರು.

ನಗರದ ಘಾಳೆ ಫಂಕ್ಷನ್ ಹಾಲ್ ನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ವಿಜನ್ ಟೂಲ್ಸ್ ಮತ್ತು ಟೆಕ್ನಾಲಜಿ ಪುಣೆ ಸಹಯೋಗದಲ್ಲಿ ಶರಣ ಅಭಿನವ, ವಿರಾಟ ಪಾಟೀಲ್ ಬಲ್ಲೂರ ಅವರ ಶರಣ ತತ್ವದ ಶಾಲು ಹೊದಿಸುವ ನಿಮಿತ್ತ ಪಂಚಾಕ್ಷರಿ ಪುಣ್ಯಶೆಟ್ಟಿ ಅವರು ಬರೆದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸಾಮಾನ್ಯವಾಗಿ ಜೀವನ ಚರಿತ್ರೆ ವ್ಯಕ್ತಿ ಜೀವನ ಆಧರಿತವಾಗಿರುತ್ತವೆ. ಆದರೆ ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ ಅವರು ಬರೆದ ಪುಸ್ತಕ ಭಿನ್ನವಾಗಿ ಸಮಕಾಲಿನ ಒಡನಾಡಿಗಳ ಅಭಿಪ್ರಾಯ ಕೇಂದ್ರಿತ ಜೀವನ ಚರಿತ್ರೆ ಆಗಿರುತ್ತವೆ.

ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಪುಸ್ತಕ ಅಪರೂಪದ ಮಹಾತ್ವಕಾಂಕ್ಷಿ ಕೃತಿ ಆಗಿದೆ. ಇಂತಹ ಕೃತಿ ಇನ್ನಷ್ಟು ಹೊರಬರಲಿ ಎಂದು ಆಶಿಸಿದರು.

ಶಾಲು ಹೊದಿಸುವ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸ್ಪರ್ಶ ನೀಡಿರುವುದು ಸಂತಸ ತರಿಸಿದೆ. ಈ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಸಾನ್ನಿಧ್ಯ ವಹಿಸಿದ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ನ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಹಣ ಗಳಿಕೆ ಮಾಡುವುದು ಎಲ್ಲರಿಗೂ ಗೊತ್ತಿದೆ. ಆದರೆ ಖರ್ಚು ಮಾಡುವ ಮನಸ್ಸು ಎಲ್ಲರಿಗೂ ಇರುವುದಿಲ್ಲ. ಆದರೂ ಕೂಡ ಬಸವರಾಜ ಪಾಟೀಲ್ ಬಲ್ಲೂರ ಅವರು ಪುಸ್ತಕ ಪ್ರಕಟಣೆಗೆ ದಾಸೋಹ ನೀಡುವ ಮೂಲಕ ಶಾಲು ಹೊದಿಸುವ ಕಾರ್ಯಕ್ರಮ ಅರ್ಥಪೂರ್ಣವನ್ನಾಗಿಸಿದ್ದಾರೆ. ಇಂತಹ ಅಕ್ಷರ ಪ್ರೀತಿ ಎಲ್ಲರಲ್ಲಿ ಬೆಳೆಯಲಿ ಎಂದು ಆಶಿಸಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಅಧ್ಯಕ್ಷತೆ ವಹಿಸಿದರು. ಸಾಹಿತಿ ಈಶ್ವರಯ್ಯ ಕೊಡಂಬಲ್ ಪುಸ್ತಕ ಪರಿಚಯ ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಬೀದರ್ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ, ಅಭಿಯಂತ ಶಿವರಾಜ ಪಾಟೀಲ್ ಬಲ್ಲೂರ, ಡೈಮಂಡ್ ಕಾಲೇಜಿನ ಪ್ರಾಚಾರ್ಯ ಗಣೇಶ ಜೋಜನೆ, ಶರಣಪ್ಪ ಬಲ್ಲೂರ, ಶಿವಕುಮಾರ ಕಟ್ಟೆ, ಕಾವೇರಿ ಪಾಟೀಲ್ ಬಲ್ಲೂರ, ಅಭಿನವ, ವಿರಾಟ ಬಲ್ಲೂರ, ಡಾ.ಭತಮೂರ್ಗೆ ಚಂದ್ರಪ್ಪ, ಕಲಾವಿದ ಡಿ.ಕೆ.ಬಡಿಗೇರ್ ಸೇರಿದಂತೆ ಹಲವರು ಇದ್ದರು

ಬಸವರಾಜ ಪಾಟೀಲ್ ಬಲ್ಲೂರ ಸ್ವಾಗತಿಸಿದರು. ಟಿ.ಎಂ.ಮಚ್ಚೆ, ವೈಜಿನಾಥ ಸಜ್ಜನಶೆಟ್ಟಿ ನಿರೂಪಿಸಿದರು. ಶಿವಶಂಕರ ಟೋಕರೆ ವಂದಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!