ಗುರುಮಠಕಲ್: ತಾಲ್ಲೂಕು ಕನ್ನಡಸಾಹಿತ್ಯ ಪರಿಷತ್ತು ಗುರುಮಠಕಲ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗುರುಮಠಕಲ್‌ನ ಕನ್ನಡ ವಿಭಾಗದ ಸಹಯೋಗದಲ್ಲಿ ನವೆಂಬರ್ ಅಂತ್ಯದ ವೇಳೆಗೆ ತಾಲ್ಲೂಕು ಮಟ್ಟದ ಕವಿಗೋಷ್ಠಿಯನ್ನು ಆಯೋಜಿಸಿರುವುದಾಗಿ ತಾಲ್ಲೂಕು ಕಸಾಪ ಅಧ್ಯಕ್ಷ ಬಸರೆಡ್ಡಿ ಪಾಟೀಲ ಎಂ.ಟಿ.ಪಲ್ಲಿ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವದ ಅಂಗವಾಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗೋಷ್ಠಿ ಜರುಗಲಿದ್ದು, ನವೆಂಬರ್ 20ರೊಳಗಾಗಿ ಕವಿಗಳು ತಮ್ಮ ಕವನಗಳನ್ನು ಕಳುಹಿಸಿ ನೋಂದಾಯಿಸಿ ಕೊಳ್ಳುವುದು ಕಡ್ಡಾಯ ಎಂದು ಹೇಳಿದರು.
ವಾಟ್ಸ್‌ಅಪ್ ಮೂಲಕ ಡಾ.ಬಾಬುರಾಯ ದೊರೆ (7406116980), ಕೃಷ್ಣಪ್ರಿಯ (9663322909) ಮೂಲಕ ಕವನಗಳನ್ನು ಕಳುಹಿಸುವಂತೆ ಮತ್ತು ಹೆಸರು ನೋಂದಾಯಿಸದ ಕವಿಗಳಿಗೆ ಕವನ ವಾಚನಕ್ಕೆ ಅವಕಾಶವಿಲ್ಲ ಎಂದು ತಿಳಿಸಿದರು.
ಉಪನ್ಯಾಸಕರಾದ ಡಾ.ಬಾಬುರಾಯ ದೊರೆ, ಮಹೇಶ ಚಂದಾಪುರ ಉಪಸ್ಥಿತರಿದ್ದರು.