ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ವಾಯು ಮಾಲಿನ್ಯ ಜಾಗೃತಿ ಮಾಸಾಚರಣೆ
ಬೀದರ: ವಾಹನಗಳಿಂದ ಪರಿಸರ ಮಾಲಿನ್ಯದಿಂದ ಉಂಟಾಗಿ, ಶುದ್ಧ ಗಾಳಿ ಸಿಗದ ಸ್ಥಿತಿ ನಿರ್ಮಾಣವಾಗುತ್ತಿದೆ. ಹಾಗಾಗಿ ಚಾಲಕರು ಒಂದು ವಾಹನಕ್ಕೆ ಒಂದರಂತೆ ಸಿಸಿ ನೆಟ್ಟು ಪರಿಸರ ಕಾಪಾಡಬೇಕು ಎಂದು ಬೀದರ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಕೆ.ಬಿರಾದಾರ ಕರೆ ನೀಡಿದರು.
ಮಂಗಳವಾರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ವಾಯು ಮಾಲಿನ್ಯ ಜಾಗೃತಿ ಮಾಸಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಣ್ಣ ಸಣ್ಣ ಕೆಲಸಗಳಿಗೆ ವಾಹನಗಳನ್ನು ಉಪಯೋಗಿಸಬಾರದು. ಡಿಸೆಲ್ ಹಾಗೂ ಪೆಟ್ರೋಲ್‌ನಿಂದ ಆಗುವ ವಾಯುಮಾಲಿನ್ಯ ಶ್ವಾಸಕೋಶಕ್ಕೆ ಪರಿಣಾಮ ಬಿರುತ್ತದೆ. ಆದ್ದರಿಂದ ಸಾರ್ವಜನಿಕರು ಎಲೆಕ್ಟ್ರಿಕ್ ವಾಹನಗಳನ್ನು ಉಪಯೋಗಿಸಬೇಕು ಎಂದು ಸಲಹೆ ನೀಡಿದರು.
ವಾಹನ ಚಲಾಯಿಸುವ ಚಾಲಕರು ಕಾಲಕ್ಕೆ ತಕ್ಕಂತೆ ವಾಹನಗಳ ಸರ್ವಿಸಿಂಗ್ ಮಾಡಿಸಿಕೊಳ್ಳಬೇಕು. ಆದ್ದರಿಂದ ವಾಯುಮಾಲಿನ್ಯ ಕಡಿಮೆ ಆಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಹಾಯಕ ಪರಿಸರ ಅಧಿಕಾರಿ ಜಗನ್ನಾಥ ಹುಣಜೆ ಮಾತನಾಡಿ, ಸಣ್ಣ ಸಣ್ಣ ಮಕ್ಕಳಿಗೆ ರಸ್ತೆ ಮೇಲೆ ಓಡಾಡಲು ಬಿಟ್ಟರೆ ಅವರಿಗೆ ಮಾಲಿನ್ಯದಿಂದ ಉಸಿರಾಡಲು ಹಾಗೂ ಅವರ ಶ್ವಾಸಕೋಶಕ್ಕೆ ತೊಂದರೆಯಾಗುತ್ತದೆ. ಮನೆಯಲ್ಲಿ ಮಗುವಿಗೊಂದು ಮರ ಎಲ್ಲರೂ ನೆಡಬೇಕು ಎಂದರು.
ಹಿರಿಯ ಮೋಟಾರ್ ವಾಹನ ನಿರೀಕರ ಮಾತನಾಡಿ, ಮಾಲಿನ್ಯ ಎಂಬುವುದು ಶಬ್ದ , ಜಲ ಮತ್ತು ಕೆಟ್ಟ ಗಾಳಿ ಇದೆಲ್ಲಾ ಮನುಷ್ಯನ ಶ್ವಾಸಕೋಶದಲ್ಲಿ ಸೇರಿದರೆ ಕೆಮ್ಮು, ದಮ್ಮು, ಅಸ್ತಮಾ, ಅಲರ್ಜಿ ಆಗಲು ಕಾರಣವಾಗುತ್ತದೆ ಎಂದು ಹೇಳಿದರು. ಈ ವೇಳೆ ಅನುರಾಜ್ ಸಾವಂತ ಪಬ್ಲಕ್ ಶಾಲೆ ಹಾಗೂ ಮಾತೋಶ್ರೀ ಅಂಬೇಡ್ಕರ ಪ್ರೌಢ ಶಾಲೆಯ ಮಕ್ಕಳಿಗೆ ಸಸಿ ವಿತರಿಸಲಾಯಿತು.
ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ ದಶರಥ, ಹಿರಿಯ ಮೋಟಾರ್ ವಾಹನ ನಿರೀಕ್ಷಕ ಜಿ.ನಾಗರಾಜ, ಕಚೇರಿಯ ಅಧೀಕ್ಷಕ ಮಲ್ಲಿಕಾರ್ಜುನ ಮೋಕಾಸಿ ಉಪಸ್ಥಿತರಿದ್ದರು.
ಶಿವರಾಜ ಜಮಾದಾರ ಕಾರ್ಯಕ್ರಮ ನಿರೂಪಿಸಿದರು. ಕಚೇರಿಯ ಸಿಬ್ದಂಧಿ ವಿರೇಂದ್ರ ಎಮ್ ಸ್ವಾಗತಿಸಿದರು. ಅರುಣ ಟೇಕರಾಜ್, ಶಿವಪುತ್ರ ಚವಳೆ, ಸುಧಾಕರ ಬಿರಾದಾರ, ಮೋಟಾರ್ ವಾಹನ ತರಬೇತಿ ಶಾಲೆಯ ಪ್ರಾಚಾರ್ಯರು ಹಾಗೂ ಶಾಲೆಯ ವಿದ್ಯಾರ್ಥಿಗಳು ಮತ್ತು ಕಚೇರಿಯ ಸಿಬ್ಬಂಧಿ ವರ್ಗದವರು, ಶಾಲೆಯ ಬೋಧಕ, ಬೋಧಕಿಯರು, ಹಾಜರಿದ್ದರು.