ಬೋರಬಂಡ ಲಕ್ಷ್ಮೀತಿಮ್ಮಪ್ಪ ದೇವಸ್ಥಾನದಲ್ಲಿ ಕಾರ್ತೀಕ ದೀಪೋತ್ಸವ| ಪೂಜ್ಯ ಶಾಂತವೀರ ಶ್ರೀ ಭಾಗಿ
ಶುಭಂ ಕರೋತಿ ಕಲ್ಯಾಣಮ್ ಆರೋಗ್ಯಂ ಧನ ಸಂಪದಃ ಶತ್ರು ಬುದ್ಧಿ ವಿನಾಶಾಯ ದೀಪ ಜ್ಯೋತಿರ್ ನಮೋಸ್ತುತೇ….
ಗುರುಮಠಕಲ್: ಕಾರ್ತೀಕ ದೀಪ ಆರಾಧನೆಯಿಂದ ಪಾಪಗಳಿಂದ ಮುಕ್ತರಾಗಿ ಜೀವನದಲ್ಲಿ ಸುಖ, ಸಮೃದ್ಧಿ, ನೆಮ್ಮದಿ ದೊರೆಯುತ್ತದೆ ಎಂದು ಆಚಾರ್ಯ ವಾದಿರಾಜ ನುಡಿದರು.
ತಾಲೂಕಿನ ಬೋರಬಂಡದ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದಲ್ಲಿ ಕಾರ್ತೀಕ ದೀಪೋತ್ಸವದಲ್ಲಿ ಉಪದೇಶ ನೀಡಿದ ಅವರು, ಕಾರ್ತೀಕ ಮಾಸ ಶ್ರೇಷ್ಠ ಮಾಸ. ಇದು ಸನಾತನದ 8 ನೇ ಮಾಸ ಎಂದರು.
ತಳಸಿ, ನೆಲ್ಲಿ ಗಿಡ ಮಹತ್ವ ತಿಳಿಸಿದರು. ದೀಪೋತ್ಸವದ ಪ್ರಾಮುಖ್ಯತೆ ವಿವರಿಸಿದರು. 500 ವರ್ಷಗಳ ಹಳೆಯ ದೇವಸ್ಥಾನ ತಿರುಪತಿಗೆ ತೆರಳ ಲಾಗದವರು ಇಲ್ಲಿ ದರ್ಶನ ಪಡೆಯುತ್ತಾರೆ ಎನ್ನುವದು ಅತ್ಯಂತ ಹೆಮ್ಮೆ ಎಂದರು.
ಕಾರ್ತೀಕ ದೀಪೋತ್ಸವ ಸಂಕಲ್ಪ ಮಾಡಲಾಯಿತು. ನರೇಂದ್ರ ರಾಠೋಡ ದಂಪತಿ ಕುಟುಂಬ ದವರೊಂದಿಗೆ ವಿವಿಧ ಧಾರ್ಮಿಕ ಪೂಜಾ ವಿಧಿವಿದಾನಗಳಲ್ಲಿ ಭಾಗಿಯಾದರು. ಮಂತ್ರಗಳ ಝೇಂಕಾರ ಮೊಳಗಿತು. ಲಕ್ಷ್ಮೀ ವೆಂಕಟೇಶ್ವರ ಸಹಸ್ರ ನಾಮಾವಳಿ ಜಪಿಸಲಾಯಿತು. ಬಳಿಕ ಲಕ್ಷ್ಮೀ ತಿಮ್ಮಪ್ಪ ದೇವರ ಮಂಗಳಾರತಿ ನೆರವೇರಿತು.
ಭವ್ಯ ಅಲಂಕಾರ: ದೀಪೋತ್ಸವ ಹಿನ್ನೆಲೆ ಗರ್ಭ ಗುಡಿದಲ್ಲಿ ದೇವರ ಅಲಂಕಾರ ವೈಭವಯುತ ವಾಗಿತ್ತು. ದರ್ಶನಕ್ಕೆ ಬಂದ ಭಕ್ತರ ಕಣ್ಣುಗಳೇ ಸಾಲದಾಗಿತ್ತು.
ಭಕ್ತಿಯ ಭಜನೆ : ದೇವಸ್ಥಾನದ ಆವರಣದಲ್ಲಿ ಮಹಿಳಾ ಭಜನಾ ಮಂಡಳಿಯಿಂದ ಭಕ್ತಿಯ ಭಜನೆ ನೆರವೇರಿತು.
ಪ್ರಮುಖರಾದ ನಿವೃತ್ತ ಐಪಿಎಸ್ ಕೆ. ಜಗನ್ನಾಥ ರಾವ್,ಬಿ.ವಿ.ಎಸ್ ಲಕ್ಷ್ಮೀ , ನಿವೃತ್ತ ಐಪಿಎಸ್ ಪಿ.ಎಲ್. ರವೀಂದ್ರ ನಾಯಕ್, ಅಶೋಕನಾಥ ನಾಯಕ ಸೇವಾಘಡ ಕಾರ್ಯದರ್ಶಿ, ಬಾಲಾ ನಾಯಕ ಸೇವಾಘಡ ಸಮಿತಿ ಸದಸ್ಯರು, ಮೂರ್ತಿ ಪ್ರಸಾದ್ ಸೇವಾಘಡ ಪೂಜಾರಿ, ಬಂಜಾರ ಲೇಖಕ ಕೃಷ್ಣಾ ನಾಯಕ ಸೇರಿ
ದಕ್ಷಿಣ ಕನ್ನಡ ಬಿಜೆಪಿ ಕಾರ್ಯಕಾರಿಣಿ ಸದಸ್ಯೆ ಸಂಗೀತಾ ಲಕ್ಷ್ಮಣ ಪವಾರ್, ನರೇಂದ್ರ ರಾಠೋಡ, ಅನಂತಪ್ಪ ಯಲ್ಲಾಪುರ, ಕಾಶಿನಾಥ್ ರಾಠೋಡ, ಮೋಹನ್, ರಮೇಶ ಪವಾರ್, ರಾಜು ರಾಠೋಡ ಸೇರಿ ಪ್ರಮುಖರು ತಾಂಡಾ ನಿವಾಸಿಗಳು, ಸುತ್ತಮುತ್ತಲಿನ ಭಕ್ತರು ಇದ್ದರು.