ಯಾದಗಿರಿ : 2024-25ನೇ ಸಾಲಿನ ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಭತ್ತ, ಜೋಳ ಖರೀದಿಸಲು ರೈತರ ನೋಂದಣಿ ಆರಂಭವಾಗಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರಾದ ಡಾ.ಸುಶೀಲಾ.ಬಿ ತಿಳಿಸಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ಯೋಜನೆ ಯಡಿ ರೈತರಿಂದ ಭತ್ತ ಸಾಮಾನ್ಯ ಪ್ರತಿ ಕ್ವಿಂಟಾಲ್ 2300 ರೂ.ಗಳ ಹಾಗೂ ಎ ಗ್ರೇಡ್ ಪ್ರತಿಕ್ವಿಂಟಾ ಲ್‌ಗೆ 2320 ರೂ.ಗಳ ರಂತೆ ಮತ್ತು ಬಿಳಿ ಜೋಳ ಹೈಬ್ರಿಡ್ ಪ್ರತಿ ಕ್ವಿಂಟಾಲ್‌ಗೆ 3371 ರೂ.ಗಳ ಹಾಗೂ ಬಿಳಿ ಜೋಳ ಮಾಲ್ದಂಡಿ ಪ್ರತಿ ಕ್ವಿಂಟಾಲ್‌ಗೆ 3421 ರೂ.ಗಳ ಖರೀದಿಸಲು ಈ ಕೆಳಕಂಡ ತಾಲ್ಲೂಕು ಕೇಂದ್ರಗಳಲ್ಲಿ ನೊಂದಣಿ ಕೇಂದ್ರ ತೆರೆಯಲಾಗಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಆವರಣ, ಯಾದಗಿರಿ, ನೊಂದಣಿ ಕೇಂದ್ರ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ಸುರಪುರ ಸಗಟು ಮಳಿಗೆ, ವೆಂಕಟಾಪೂರ, (ನೋಂದಣಿ ಕೇಂದ್ರ), ಕೆ.ಎಫ್.ಸಿ.ಎಸ್.ಸಿ ಆವರಣ ಶಹಾಪೂರ, (ನೋಂದಣಿ ಕೇಂದ್ರ), ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ಹಾಗೂ ಟಿ.ಎ.ಪಿ.ಸಿ.ಎಂ.ಎಸ್, ಆವರಣ (ಮಹಾದೇವಪ್ಪ ಬಳೆ ಕಲ್ಯಾಣ ಮಂಟಪ ಎದುರುಗಡೆ, ತಾಳಿಕೋಟೆ ರಸ್ತೆ), (ನೋಂದಣಿ ಕೇಂದ್ರ) ಹುಣಸಗಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ನಾಯ್ಕಲ್ ಗ್ರಾಮ, (ನೋಂದಣಿ ಕೇಂದ್ರ), ಕೃಷಿ ಇಲಾಖೆಯವರು ಸಿದ್ದಪಡಿಸಿದ ಫ್ರೂಟ್ ಎಂಬ ತಂತ್ರಾಂಶದಲ್ಲಿ ನಮೂದಿಸಿರುವ ಬೆಳೆಯ ಆಧಾರದ ಮೇಲೆ ರೈತರ ಹೆಸರನ್ನು ನೊಂದಾಯಿಸಿಕೊಳ್ಳಲಾಗುವುದು.

ಒಂದು ವೇಳೆ ಫ್ರೂಟ್ ತಂತ್ರಾಂಶದಲ್ಲಿ ತೊಂದರೆ ಇದ್ದಲ್ಲಿ ಹತ್ತಿರವಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ತಂತ್ರಾಂಶದಲ್ಲಿ ಸರಿಪಡಿಸಿಕೊಂಡು ನೊಂದಣಿ ಮಾಡಿಕೊಳ್ಳಬೇಕು.

ಭತ್ತ ಖರೀದಿ ಕೇಂದ್ರ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಯಲ್ಲಿ ರೈತರಿಂದ ಭತ್ತ ಖರೀದಿಸಬೇಕಾಗಿ ರುವುದರಿಂದ ರೈತರು ನೊಂದಣಿ ಕೇಂದ್ರಗಳಲ್ಲಿ 2024ರ ನವೆಂಬರ್ 15 ರಿಂದ ಡಿಸೆಂಬರ್ 31ರ ವರೆಗೆ ನೊಂದಣಿ ಮಾಡಿಕೊಳ್ಳಬೇಕು.

2025ರ ಜನವರಿ 1 ರಿಂದ 2025ರ ಮಾರ್ಚ್ 31ರ ವರೆಗೆ ಅವಧಿಯವರೆಗೆ ಭತ್ತ ಖರೀದಿಸ ಲಾಗುವುದು ಹೆಚ್ಚಿನ ಮಾಹಿತಿ ಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತ ಯಾದಗಿರಿ ಇವರ ದೂ.ಸಂ.9449157847 ಹಾಗೂ ತಾಲ್ಲೂಕು ಖರೀದಿ ಕೇಂದ್ರಗಳ ಮೇಲ್ವಿಚಾಕರಾದ ಯಾದಗಿರಿ ತಾಲ್ಲೂಕು ವಿಠ್ಠಲ್ ಬಂದಾಳ ಮೊ.ನಂ.8971236664, ಶಹಾಪೂರ ತಾಲ್ಲೂಕು ಬಸವರಾಜ ಪತ್ತಾರ 8861819836.

ಸುರಪುರ ತಾಲ್ಲೂಕು ಆದಯ್ಯ ಹಿರೇಮಠ 8660813747, ಹುಣಸಗಿ ತಾಲ್ಲೂಕು ಸಿ.ಎಸ್ ರಾಜು ಮೊ.9632659336, ಹಾಗೂ ನಾಯ್ಕಲ್ ಹೋಬಳಿ ನಯೀಮ್ ಅಹ್ಮದ ಮೊ.6361852251 ಗೆ ಸಂಪರ್ಕಿಸಬಹುದು. ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಲು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!