ನ.22 ಅರ್ಜಿ ಸಲ್ಲಿಸಲು ಕೊನೆಯ ದಿನ
ಯಾದಗಿರಿ : 2024-25ನೇ ಸಾಲಿನ ಯಾದಗಿರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆವತಿಯಿಂದ ಹೊಸದಾಗಿ ಪ್ರಾರಂಭವಾಗಿರುವ ಅಲ್ಪಸಂಖ್ಯಾತರ ಮೌಲಾನಾ ಆಜಾದ ಮಾದರಿ ಶಾಲೆಗಳಲ್ಲಿ ಶೈಕ್ಷಣಿಕ ಸಾಲಿನ ವಿವಿಧ ವಿಷಯಗಳನ್ನು ಆಂಗ್ಲ ಮಾಧ್ಯಮದಲ್ಲಿ ಬೋಧನೆಗಾಗಿ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಭಾಗ್ಯಶ್ರೀ ಕುಂಬಾರ ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ಮೌಲಾನಾ ಆಜಾದ ಮಾದರಿ ಶಾಲೆಗಳಲ್ಲಿ ಶೈಕ್ಷಣಿಕ ಸಾಲಿಗೆ ಶಾಲೆಗಳಲ್ಲಿ ಅದರ ಮುಂದೆ ತೋರಿಸಿರುವ ವಿಷಯಗಳನ್ನು ಆಂಗ್ಲ ಮಾಧ್ಯಮದಲ್ಲಿ ಬೋಧನೆಗಾಗಿ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ವಡಗೇರಾ ಮೌಲಾನಾ ಆಜಾದ ಮಾದರಿ ಶಾಲೆ ಕನ್ನಡ ಶಿಕ್ಷಕ-1, ಇಂಗ್ಲೀಷ್ ಶಿಕ್ಷಕ-1, ಉರ್ದು ಶಿಕ್ಷಕ-1, ಸಮಾಜ ವಿಜ್ಞಾನ ಶಿಕ್ಷಕ-1, ವಿಜ್ಞಾನ ಶಿಕ್ಷಕರ-1, ಗಣಿತ ಶಿಕ್ಷಕ-1, ಹುದ್ದೆಗಳಿಗೆ ಅರ್ಹತೆ ಬಿ.ಎಸ್.ಬಿಎಡ್, ಬಿ.ಎ.ಬಿಎಡ್ ಪದವಿ ಹೊಂದಿರಬೇಕು.
ಸುರಪುರ ತಾಲ್ಲೂಕಿನ ಕೆಂಭಾವಿ ಮೌಲಾನಾ ಆಜಾದ ಮಾದರಿ ಶಾಲೆಯಲ್ಲಿ ಕನ್ನಡ ಶಿಕ್ಷಕ-1, ಇಂಗ್ಲೀಷ್ ಶಿಕ್ಷಕ-1, ಉರ್ದು ಶಿಕ್ಷಕ-1, ಸಮಾಜ ವಿಜ್ಞಾನ ಶಿಕ್ಷಕ-1, ವಿಜ್ಞಾನ ಶಿಕ್ಷಕ-1, ಗಣಿತ ಶಿಕ್ಷಕ-1 ಹುದ್ದೆಗಳಿಗೆ ಅರ್ಹತೆ ಬಿ.ಎಸ್, ಬಿ.ಎಡ್, ಬಿ.ಎ ಬಿ.ಎಡ್ ಪದವಿ ಹೊಂದಿರಬೇಕು.
ಅರ್ಜಿಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ತಮ್ಮ ಬಯೋಡೇಟಾವನ್ನು ಶಾಲೆಯ ಮುಖ್ಯೋಪಾಧ್ಯಾಯರಿಗೆ ಕಛೇರಿ ವೇಳೆಯಲ್ಲಿ ನವೆಂಬರ್ 22ರ ಒಳಗೆ ಅರ್ಜಿಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ ಕಾರ್ಯಾಲಯ, ಕೋಠಡಿ ಸಂಖ್ಯೆ ಸಿ-7, ಮೊದಲನೇ ಮಹಡಿ, ಜಿಲ್ಲಾ ಕಛೇರಿಗಳ ಸಂಕೀರ್ಣ (ಮಿನಿ ವಿಧಾನ ಸೌಧ) ಚಿತ್ತಾಪೂರ ರಸ್ತೆ, ಯಾದಗಿರಿ ದೂ.ಸಂ.08473 253235, ಶಹಾಪೂರ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಮೊ.8095971486, ಸುರಪುರ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಮೊ.7795592068, ಯಾದಗಿರಿ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಮೊ.9731090143, ವಡಗೇರಾ ಮೌಲಾನಾ ಆಜಾದ ಮಾದರಿ ಶಾಲೆ ಮುಖ್ಯೋಪಾಧ್ಯಾಯರು ಮೊ.ನಂ.9964426498, ಕೆಂಭಾವಿ ಮೊ.ನಂ. 9901720962ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.