ಕೃಷ್ಣಾ ಮೇಲ್ದಂಡೆ ನೀರಾವರಿ ಸಲಹಾ ಸಮಿತಿ ಸಭೆ
“ಜೀವ ಜಲ ಅತೀ ಅಮೂಲ್ಯ ಪೋಲು ಮಾಡಬೇಡಿ, ಜಾಗೃತಿಯಾಗಿ ಬಳಕೆ ಮಾಡಿ”
ಯಾದಗಿರಿ: ಕೃಷ್ಣಾ ಮೇಲ್ದಂಡೆ ಯೋಜನೆಯ 2024-25ನೇ ಸಾಲಿನ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯು ಅಬಕಾರಿ ಸಚಿವರು, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಆರ್.ಬಿ.ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಕೃಭಾಜನಿನಿ ಆಲಮಟ್ಟಿಯ ವ್ಯವಸ್ಥಾಪಕ ನಿರ್ದೇಶಕರ ಕಛೇರಿಯಲ್ಲಿ 2024ರ ನವೆಂಬರ್ 16 ರಂದು ಜರುಗಿಸಲಾಯಿತು ಎಂದು ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ, ಕೃಷ್ಣಾ ಮೇಲ್ದಂಡೆ ಯೋಜನೆ ಭೀಮರಾಯನಗುಡಿ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಮುಖ್ಯ ಇಂಜಿನೀಯರ ಪ್ರೇಮ್ಸಿಂಗ್ ತಿಳಿಸಿದ್ದಾರೆ.
ಹಿಂಗಾರು ಹಂಗಾಮಿಗೆ 2024-25ನೇ ಸಾಲಿನಲ್ಲಿ 2024ರ ನವೆಂಬರ್ 16 ರಂದು ಎರಡೂ ಜಲಾಶಯಗಳಲ್ಲಿ ಒಟ್ಟು ಬಳಕೆಗೆ ಲಭ್ಯವಿರುವ ಜೀವಜಲ ಪರಿಮಾಣ (104.33+10.78)=115.11 ಟಿ.ಎಂ.ಸಿ. ಇರುವದು. ಕಳೆದ ಸಾಲಿಗೆ ಹೊಲಿಸಿದಾಗ ವ್ಯತ್ಯಾಸವು (115.11–72.86 ಟಿ.ಎಂ.ಸಿ)=42.25 ಟಿ.ಎಂ.ಸಿ. ಹೆಚ್ಚಿಗೆ ಇದೆ.
ಆಲಮಟ್ಟಿ ಜಲಾಶಯದ ಅಧೀನದಲ್ಲಿ ಬರುವ ಹಂತ 1 ಮತ್ತು 2 ಕಾಲುವೆಗಳಿಗೆ ಹಾಗೂ ನಾರಾಯಣಪೂರ ಎಡದಂಡೆ ಕಾಲುವೆ ಹಾಗೂ ಉಪ-ಕಾಲುವೆಗಳಡಿ ಬೆಳೆದು ನಿಂತಿರುವ ತೊಗರಿ ಬೆಳೆಗೆ ಸದ್ಯ ಕಾಳು ಕಟ್ಟುವ ಸಮಯ ಇರುವುದರಿಂದ ನೀರಿನ ಅವಶ್ಯಕತೆಯನ್ನು ಪರಿಗಣಿಸಿ ನೀರನ್ನು ಪೂರೈಸಲು ಸಮಿತಿ ನಿರ್ಧರಸಿ 2024ರ ನವೆಂಬರ್ 17 ರಿಂದ 2024ರ ನವೆಂಬರ್ 20ರ ವರೆಗೆ ಸತತವಾಗಿ ನೀರುಹರಿಸುವುದನ್ನು ಮುಂದುವರಿಸಲಾಗುವುದು.
ನಂತರ, ನಾರಾಯಣಪೂರ ಬಲದಂಡೆ ಕಾಲುವೆಗಳಿಗೆ 2024ರ ನವೆಂಬರ್ 17 ರಿಂದ 2024ರ ನವೆಂಬರ್ 24ರ ವರೆಗೆ ಬಂದ ಅನುಸರಿಸಿ 2024ರ ನವೆಂಬರ್ 25 ರಿಂದ 2024ರ ನವೆಂಬರ್ 30ರ ವರೆಗೆ 06 ದಿನಗಳ ಕಾಲ ಕಾಲುವೆ ಜಾಲಕ್ಕೆ ದ್ವಿ ಋತು ಬೆಳೆಗಳಿಗಾಗಿ ನೀರು ಹರಿಸಲಾಗುವುದು.
ನವೆಂಬರ್ 21 ರಿಂದ ಡಿಸೆಂಬರ್ 8ರ ವರೆಗೆ ಆಲಮಟ್ಟಿ ಜಲಾಶಯದ ಅಧೀನದಲ್ಲಿ ಬರುವ ಹಂತ 1 ಮತ್ತು 2 ಕಾಲುವೆಗಳಿಗೆ ಹಾಗೂ ನಾರಾಯಣಪೂರ ಎಡದಂಡೆ ಕಾಲುವೆ ಹಾಗೂ ಉಪ ಕಾಲುವೆಗಳಡಿ ಹಾಗೂ 2024ರ ಡಿಸೆಂಬರ್ 1 ರಿಂದ 2024ರ ಡಿಸೆಂಬರ್ 8ರ ವರೆಗೆ 08 ದಿನಗಳ ವರೆಗೆ ನಾರಾಯಣಪುರ ಬಲದಂಡೆ ಕಾಲುವೆ ಜಾಲದಲ್ಲಿ ಬಂದ್ ಅನುಸರಿಸಲಾಗುವದು.
2024ರ ಡಿಸೆಂಬರ್ 1 ರಿಂದ 2025 ಜೂನ್ 30ರ ವರೆಗೆ ಕುಡಿಯುವ ನೀರು, ಕೆರೆಗಳನ್ನು ತುಂಬುವುದು, ಕಾಲುವೆಗಳ ಮುಖಾಂತರ ಕುಡಿಯುವ ನೀರಿನ ಯೋಜನೆಗಳಿಗೆ ನೀರು ಪೂರೈಸುವುದು, ಭಾಷ್ಪೀಕರಣ, ಉಷ್ಣ ವಿದ್ಯುತ್ ಸ್ಥಾವರಗಳಿಗೆ ಹಾಗೂ ಕೈಗಾರಿಕೆಗಳಿಗೆ, ಬ್ಯಾರೇಜ್ಗಳಲ್ಲಿ ನೀರಿನ ಸಂಗ್ರಹಣೆ, ರೈತರ ಹಿನ್ನೀರಿನ ಬಳಕೆ ಇತ್ಯಾದಿ ಸೇರಿದಂತೆ ಸಭೆಯಲ್ಲಿ ಚರ್ಚಿಸಿ ಅಂದಾಜು 44.00 ಟಿ.ಎಂ.ಸಿ. ನೀರನ್ನು ಕಾಯ್ದಿರಿಸಲಾಗಿದೆ.
ಡಿಸೆಂಬರ್ 9 ರಿಂದ ಮುಖ್ಯ ಕಾಲುವೆಯಡಿ 14 ದಿನಗಳ ಚಾಲೂ ಹಾಗೂ 10 ದಿನಗಳ ಬಂದ್ ಪದ್ಧ್ದತಿಯನ್ನು ಅನುಸರಿಸಿ ಪ್ರತಿ ದಿನ 1.00 ಟಿ.ಎಂ.ಸಿ ಬಳಕೆಯಂತೆ 2025ರ ಮಾರ್ಚ 23ರ ವರೆಗೆ ವರಗೆ ನೀರಾವರಿಗೆ ಲಭ್ಯವಿರುವ 65 ಟಿ.ಎಂ.ಸಿ. ನೀರನ್ನು ಹರಿಸಲು ತಿರ್ಮಾನಿಸಲಾಗಿದೆ. ಎಲ್ಲಾ ರೈತ ಬಾಂಧವರು ನೀರನ್ನು ಹಿತವಾಗಿ ಮಿತವಾಗಿ ಬಳಸಲು ವಿನಂತಿಸಲಾಗಿದೆ.