ದೇಶದಲ್ಲಿ ಕರ್ನಾಟಕಕ್ಕೆ 3 ನೇ ಸ್ಥಾನ
ಬೆಂಗಳೂರು: ಬಳ್ಳಾರಿ ಎಂದರೆ ಸಾಕು, ದೇಶ ವಿದೇಶಗಳಲ್ಲಿಯೂ ಗಣಿಗಾರಿಕೆಗೆ ಹೆಸರುವಾಸಿಯಾದ ಜಿಲ್ಲೆ. ಇದೀಗ ಪರೋಪಕಾರಿ ಜೀವನದ ಭಾಗವಾಗಿ ರಾಜ್ಯದ ಗಣಿ ಜಿಲ್ಲೆಯ ಸಹೃದಯಿ ಕನ್ನಡಿಗರು ಅಂಗಾಂಗ ದಾನ ನೋಂದಣಿಯಲ್ಲಿ ಪ್ರಥಮ ಸ್ಥಾನದಲ್ಲಿರುವುದು ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶದಿಂದ ಬಯಲಾಗಿದ್ದು, ಇದಕ್ಕೆ ಸರ್ಕಾರ ಶ್ಲಾಘನೆ ವ್ಯಕ್ತಪಡಿಸಿದೆ.
ಇನ್ನು ಧಾರವಾಡ ಜಿಲ್ಲೆಯು ಅಗ್ರ ಐದು ಜಿಲ್ಲೆಗಳ ಪಟ್ಟಿಯಲ್ಲಿದೆ. ದೇಶದಲ್ಲಿ ಕರ್ನಾಟಕವು ಮೂರನೇ ಸ್ಥಾನದಲ್ಲಿದೆ. ಅಂಗಾಂಗ ದಾನ ನೋಂದಣಿಯಲ್ಲಿ ಮಹಿಳೆಯರು ಮತ್ತು ಯುವ ಸಮೂಹ ಅಗ್ರ ಸ್ಥಾನದಲ್ಲಿದ್ದಾರೆ.
ರಾಜ್ಯದಲ್ಲಿ ಒಟ್ಟು 24,372 ಮಂದಿ ಅಂಗಾಂಗ ದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ನೀವೂ ಕೂಡ ಅಂಗಾಂಗ ದಾನ ಮಾಡುವ ಸಂಕಲ್ಪವನ್ನು ಕೈಗೊಳ್ಳಬಹುದು. ಅಂಗಾಂಗ ದಾನ ಮಾಡಿ, ಸಾವಿನಲ್ಲೂ ಸಾರ್ಥಕತೆ ಮೆರೆಯಲು ವೆಬ್ ಸೈಟ್ (https://notto.abdm.gov.in/) ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.