ಪ್ರಧಾನಿ ನರೇಂದ್ರ ಮೋದಿರಿಂದ ನೈಜೀರಿಯಾ, ಬ್ರೆಜಿಲ್ ಮತ್ತು ಗಯಾನಾಗೆ ಐತಿಹಾಸಿಕ 3 ರಾಷ್ಟ್ರಗಳ ಪ್ರವಾಸ
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೈಜೀರಿಯಾ, ಬ್ರೆಜಿಲ್ ಮತ್ತು ಗಯಾನಾಗೆ ಐತಿಹಾಸಿಕ 3 ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದಾರೆ.
ಪ್ರಧಾನಿ ಮೋದಿ ಅವರು, ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಎರಡೂ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು, ವಿವಿಧ ರಾಷ್ಟ್ರಗಳೊಂದಿಗೆ ಭಾರತದ ಉತ್ತಮ ಬಾಂಧವ್ಯದ ಸಂಕೇತವಾಗಿದೆ.
ಬ್ರೆಜಿಲ್‌ನಲ್ಲಿ ನಡೆಯುವ ಜಿ 20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದು, ಗಯಾನಾದಲ್ಲಿ ಕೆರಿಬಿಯನ್ ನಾಯಕರನ್ನು ಭೇಟಿ ಮಾಡಲಿದ್ದಾರೆ.
ಶನಿವಾರ ರಾತ್ರಿ ನೈಜೀರಿಯಾದ ಅಬುಜಾಗೆ ಪ್ರಧಾನಿ ನರೇಂದ್ರ ಮೋದಿ ತಲುಪಿದ್ದಾರೆ. ಈ ವೇಳೆ ಭಾರತೀಯ ಸಮುದಾಯ ದದಿಂದ ಭವ್ಯ ಸ್ವಾಗತ ಕೋರಲಾಯಿತು.
ಫೆಡರಲ್ ಕ್ಯಾಪಿಟಲ್ ಟೆರಿಟರಿಯ ಸಚಿವ ನೈಸೋಮ್ ಎಜೆನ್ವೊ ವೈಕ್ ಅವರು ಅಬುಜಾದ ‘ನಗರದ ಕೀ’ ಯನ್ನು ಪ್ರಧಾನ ಮಂತ್ರಿಗಳಿಗೆ ನೀಡಿ ಸ್ವಾಗತಿಸಿದರು.
ಕೀಲಿಯು ಜನರಿಂದ ಪ್ರಧಾನ ಮಂತ್ರಿಯವರ ಮೇಲೆ ಇಟ್ಟಿರುವ ನಂಬಿಕೆ ಮತ್ತು ಗೌರವದ ಸಂಕೇತವಾಗಿದೆ ಎನ್ನಲಾಗಿದೆ.