ವಿಶ್ವ ಮಧುಮೇಹ ದಿನ, ಸ್ತನ ಕ್ಯಾನ್ಸರ್ ಅರಿವು ಕಾರ್ಯಕ್ರಮ

ಯಾದಗಿರಿ : ಜೀವನ ಶೈಲಿಯಲ್ಲಿ ಬದಲಾವಣೆ, ವ್ಯಾಯಾಮ ಮಾಡದೇ ಇರುವುದು, ತಂಬಾಕು ಹಾಗೂ ಸರಾಯಿ ಕುಡಿತದ ಚಟ, ಅಪೌಷ್ಠಿಕಾಂಶಯುಕ್ತ ಆಹಾರ ಸೇವನೆಗಳಿಂದ ಮಧುಮೇಹ ಬರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಮ್,ಎಸ್, ಪಾಟೀಲ್ ಹೇಳಿದರು.

ರಾಷ್ಟೀಯ ಆರೋಗ್ಯ ಅಭಿಯಾನದಡಿಯಲ್ಲಿ ಎನ್,ಪಿ, ಎನ್,ಸಿ,ಡಿ , ಇಂಡಿಯನ್ ಕ್ಯಾನ್ಸರ್ ಸೊಸೈಟಿ ಕಲಬುರಗಿ ವಿಭಾಗ ಹಾಗೂ ಎಲ್ ಮತ್ತು ಟಿ ತಂತ್ರಜ್ಞಾನ ಸೇವೆಗಳ ಸಂಯುಕ್ತಾಶ್ರಯದಲ್ಲಿ “ವಿಶ್ವ ಮಧುಮೇಹ ದಿನಾಚರಣೆ ಮತ್ತು ಸ್ತನ ಕ್ಯಾನ್ಸರ್ ಅರಿವು ಕಾರ್ಯಕ್ರಮವನ್ನು ಮಧುಮೇಹ ಮತ್ತು ಯೋಗ ಕ್ಷೇಮ ಎಂಬ ಘೋಷವಾಕ್ಯದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿಯಿಂದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲೆಯಲ್ಲಿ 30 ವರ್ಷದ ಮೇಲ್ಪಟ್ಟ ಎಲ್ಲ ಸಾರ್ವಜನಿಕರ ತಪಾಸಣೆಗಾಗಿ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಸೌಲಭ್ಯ ಇದ್ದು, ಸಾರ್ವಜನಿಕರು ತಮ್ಮ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿವಹಿಸುವ ಕುರಿತು ಅವಶ್ಯಕ ಮಾಹಿತಿ ನೀಡಿದರು.

ಯಾದಗಿರಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಹಣಮಂತರೆಡ್ಡಿ ಮಾತನಾಡಿ, ಮಧುಮೆಹ ಹೇಗೆ ಬರುವುದು ಮತ್ತು ಅದನ್ನು ಹೇಗೆ ತಡೆಗಟ್ಟುವುದು ಹಾಗೂ ಚಿಕಿತ್ಸಾ ವಿಧಾನಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿ, ಯಾವುದೇ ರೋಗದ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ತಪಾಸಣೆ ಮಾಡಿಸಿಕೊಂಡು ರೋಗ ಬರದಂತೆ ತಡೆಗಟ್ಟುವಂತೆ ಸಲಹೆ ನೀಡಿದರು.

ಕಲಬುರಗಿ ವಿಭಾಗ ಇಂಡಿಯನ್ ಕ್ಯಾನ್ಸರ್ ಸೋಸೈಟಿ ಹಾಗೂ ಎಲ್.ಟಿ ತಂತ್ರಜ್ಞಾನ ಸೇವೆಗಳ, ವಿಭಾಗಿಯ ವ್ಯವಸ್ಥಾಪಕರು ಡಾ.ಗುರುರಾಜ ಕುಲಕರ್ಣಿ, ಕ್ಯಾನ್ಸರ್ ಎಂದರೆ ದೇಹದ ಒಂದು ಭಾಗದ ಅಸಹಜ ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆಯಿಂದ ಉಂಟಾಗುವ ಒಂದು ರೋಗವಾಗಿದ್ದು, ಅದನ್ನು ಬೇಗನೆ ಪತ್ತೆ ಹಚ್ಚುವುದರಿಂದ ಖಂಡಿತವಾಗಿಯು ಗುಣಮುಖರಾಗುತ್ತಾರೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ಪದ್ಮಾನಂದ ಗಾಯಕವಾಡ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಮಲ್ಲಪ್ಪ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜ್ಯೋತಿ ಕಟ್ಟಿಮನಿ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಮುಬಾಶೀರ್ ಅಹ್ಮದ್ ಸಾಜೀದ್, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಸಂಜೀವ್ ಕುಮಾರ್ ರಾಯಚೂರಕರ್, ಜಿಲ್ಲಾ ಸರ್ವೇಕ್ಷಣ ಅಧಿಕಾರಿ,ಎನ್.ಸಿ.ಡಿ. ಕೋಶದ ಡಾ.ರಶೀದ್, ಶ್ರೀ ಯಾದವ್ ಕುಲಕರ್ಣಿ, ಡಾ.ಗೋವಿಂದ, ಡಾ.ಅರುಣ, ಆರ್.ಸಿ.ಹೆಚ್ ವಿಭಾಗದ ಮನೋಹರ ಪಾಟೀಲ್, ಸಹನಾ, ಮಹಾಲಕ್ಷ್ಮೀ, ವಿಜಯ ಕುಮಾರ, ವೆಂಕಟೇಶ ಜಿ, ಮತ್ತು ಎನ್.ಸಿ.ಡಿ, ವೈದ್ಯಾಧಿಕಾರಿಗಳು, ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!