ಜನಪ್ರಿಯತೆ ಕುಗ್ಗಿಸಲು ತಂತ್ರ | ಜನ ಎಲ್ಲವನ್ನು ಜಾಣ್ಮೆ ಯಿಂದ ನೋಡುತ್ತಿದ್ದಾರೆ
ಗುರುಮಠಕಲ್: ಬೀದರ್ ಜಿಲ್ಲೆಯ ಗುತ್ತಿಗೆದಾರ ಸಚಿನ್ ವಿಷಯದಲ್ಲಿ ರಾಜಕೀಯ ತಂತ್ರಗಾರಿಕೆ ನಡೆಯುತ್ತಿದೆಯೇ ಎನ್ನುವ ಅನುಮಾನ ಮೂಡಿದೆ. ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲದ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ಕಡೆಡಿಸುವ ತಂತ್ರಗಾರಿಕೆ ನಡೆಯುತ್ತಿದೆ ಎಂದು ಮಾಜಿ ಬ್ಲಾಕ್ ಅಧ್ಯಕ್ಷ ಸಾಯಬಣ್ಣ ಬೋರಬಂಡ ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಚಿವ ಪ್ರಿಯಾಂಕ ಖರ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಂಪುಟದಲ್ಲಿ ಐಟಿ ಬಿಟಿ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರಾಗಿ ಉತ್ತಮ ವಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಯುವ ನಾಯಕ ಪ್ರಿಯಾಂಕ ಖರ್ಗೆ ಹೆಸರನ್ನು ಕಡೆಸಿಲು ಬಿಜೆಪಿಗರು ಇಲ್ಲದ ಸುಳ್ಳು ಹುಟ್ಟಿಸುತ್ತಿದ್ದಾರೆ. ಪ್ರಕಣದ ಕುರಿತು ಸಿಬಿಐ ತನಿಖೆ ನಡೆಸಲು ಸ್ವತಾ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಗಳು, ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಚಿವರ ಜನಪ್ರೀಯತೆ ಕುಗ್ಗಿಸಲು ರಾಜಕೀಯ ಷಡ್ಯಂತ್ರ ರಚಿಸಿದ್ದಾರೆ. ಆದರೇ ರಾಜ್ಯದ ಜನರು ಎಲ್ಲವನ್ನು ಗಮನಿ ಸುತ್ತಿದ್ದಾರೆ ಎಂದು ವ್ಯಾಖ್ಯಾನಿಸಿದ್ದಾರೆ.
