ಬೆಂಗಳೂರು : ಅಮೇರಿಕಾದ ಗ್ರ್ಯಾಂಡ್ ಟೆಟಾನ್ ರಾಷ್ಟ್ರೀಯ ಉದ್ಯಾನವನದಲ್ಲಿನ 28 ವರ್ಷದ ಪ್ರಸಿದ್ಧ ಹೆಣ್ಣು ಕರಡಿ ಗ್ರಿಜ್ಲಿ , ಕಾರು ಅಪಘಾತದಲ್ಲಿ ಇತ್ತೀಚೆಗೆ ಸಾವನ್ನಪ್ಪಿದೆ ಎಂದು ವರದಿಯಾಗಿದೆ.
ಅಲ್ಲಿನ ಇತಿಹಾಸದಲ್ಲಿಯೇ ಹಿರಿಯ ವಯಸ್ಸಿನ ತಾಯಿ ಕರಡಿ ಇದಾಗಿದ್ದು, 18 ಕ್ಕೂ ಹೆಚ್ಚು ಮರಿಗಳಿಗೆ ಜನ್ಮ ನೀಡಿದೆ. ತಾಯಿ ಕರಡಿ ಆಗಾಗ ತನ್ನ ಮರಿಗಳೊಂದಿಗೆ ಕಾಣಿಸಿಕೊಳ್ಳುತ್ತಿತ್ತು. ಅಪಘಾತದ ಸಂದರ್ಭದಲ್ಲಿ 1 ವರ್ಷದ ಮರಿಯೂ ತಾಯಿ ಜತೆಗಿತ್ತು ಎನ್ನಲಾಗಿದೆ.
ಇತರೆ ಕರಡಿಗಳ ದಾಳಿಯಿಂದ ತನ್ನ ಮಕ್ಕಳ ಜೀವ ರಕ್ಷಿಸಲು, ಆ ತಾಯಿ ಕರಡಿ ಸದಾ ಹೋರಾಡುತ್ತಿತ್ತು ಎಂದು ಪ್ರಕೃತಿ ಛಾಯಾಗ್ರಹಕ ಥಾಮಸ್ ಡಿ.ಮ್ಯಾಂಗಲ್ ಸೆನ್ ವರ್ಣನೆ ಬಗ್ಗೆ ನ್ಯಾಷನಲ್ ಜಿಯೋಗ್ರಾಫಿಕ್ ವರದಿ ಮಾಡಿದೆ. ಕಾಡು ಪ್ರಾಣಿಗಳು ವಾಹನದಿಂದ ಕೊಲ್ಲಲ್ಪಡುತ್ತಿರುವುದು ಅವುಗಳ ಜೀವಕ್ಕೆ ಸುರಕ್ಷತೆಯ ಅಗತ್ಯವಿದೆ ಎಂದು ಅಲ್ಲಿನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.