ರಾಜ್ಯ ಬಂದ್ ಗೆ ಕನ್ನಡ ಪರ ಸಂಘಟನೆಗಳು ಕರೆ |  ತೆಲಂಗಾಣ ಗಡಿಯಲ್ಲಿಯೂ ಕಟ್ಟೆಚ್ಚರ | ಪೊಲೀಸ್ ಬಂದೋಬಸ್ತ್ | ಯಥಾವತ್ತಾಗಿ ನಡೆದ ಸಾರಿಗೆ ವ್ಯವಸ್ಥೆ

ಬೆಂಗಳೂರು: ರಾಜ್ಯದ ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ, ಕನ್ನಡಿಗರ ಮೇಲಿನ ದೌರ್ಜನ್ಯ ಪ್ರಕರಣ ಖಂಡಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಂಗಳೂರಿನಲ್ಲಿ ಬಂದ್ ಬಿಸಿ ಬೆಳಿಗ್ಗೆ ಕಂಡು ಬಂದು. ಬಿಸಿಲು ಕಾವೇರುತ್ತಿದ್ದಂತೆ ಸಿಲಿಕಾನ್ ಸಿಟಿಯಲ್ಲಿ ಸಾರಿಗೆ ವ್ಯವಸ್ಥೆ ಯಥಾವತ್ತಾಗಿ ಆರಂಭಗೊಂಡಿದೆ.

ಜನ ಜೀವನ ಎಂದಿನಂತೆ ಸಾಗಿದ್ದು, ಜನ ರಸ್ತೆಗಿಳಿದು ವ್ಯಾಪಾರ – ವ್ಯವಹಾರ ಶುರು ಮಾಡಿದ್ದಾರೆ. ಇನ್ನು ಮುನ್ನೆಚ್ಚರಿಕೆಯಾಗಿ ವಿವಿಧ ಗಡಿ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು ಕಂಡು ಬಂತು.

ತೆಲಂಗಾಣ ಗಡಿ ಭಾಗವಾದ ಗುರುಮಠಕಲ್ ನಲ್ಲಿಯೂ ಮುನ್ನೆಚ್ಚರಿಕೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಇಲ್ಲಿ ಬಂದ್ ಎನ್ನುವುದೇ ಭಾಸವಾಗಿಲಲ್ಲಿ. ಎಂದಿನಂತೆ ಜನ ಸಂಚಾರ, ಪರಪ್ಸರ ಗಡಿ ಸಾರಿಗೆ ಹೀಗೆ ಎಲ್ಲವೂ ಎಂದಿನಂತೆ ಸಾಗಿತ್ತು. ಅಂಗಡಿ ಮುಂಗಟ್ಟುಗಳು ತೆರೆದು ಎಂದಿನಂತೆ ವ್ಯಾಪಾರದಲ್ಲಿ ತೊಡಗಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!