ಕಲ್ಯಾಣ ಕರ್ನಾಟಕ ಯುವ ನೇತಾರ ಶರಣಗೌಡ ಕಂದಕೂರ ರಿಂದ ಮನವಿ | ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾಗಿ ಚರ್ಚಿಸಿದ ಶಾಸಕ
ಬೆಂಗಳೂರು: ಕಲ್ಯಾಣ ಕರ್ನಾಟಕ ಶೈಕ್ಷಣಿಕ ಅಭಿವೃದ್ಧಿಗೆ ಈ ಭಾಗದ ಶಿಕ್ಷಕರ ಬಡ್ತಿ ಪ್ರಕ್ರಿಯೆ ಮುಂದುವರೆಸಲು ಅನುಮತಿ ನೀಡುವುದು ಸೇರಿದಂತೆ ಹಲವು ವಿಷಯಗಳ ಕುರಿತು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾಗಿ ಚರ್ಚಿಸಿದರು.
ನೇರ ನೇಮಕಾತಿಯಿಂದ ಭರ್ತಿ ಮಾಡಬೇಕಾದ 3313 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಶಾಸಕರ ಚರ್ಚೆ ಮಾಡಿದ್ದಾರೆ.
ಗುರುಮಠಕಲ್ ತಾಲೂಕು ಕೇಂದ್ರವಾಗಿದೆ. ಆದರೆ ಪ್ರತಿ ಕೆಲಸಕ್ಕೂ ಯಾದಗಿರಿಗೆ ಅಲೆದಾಡುವುದು ತಪ್ಪುತ್ತಿಲ್ಲ. ಶೀಘ್ರವೇ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆರಂಭಕ್ಕೆ ಕ್ರಮವಹಿಸಲು ಸಚಿವರನ್ನು ಒತ್ತಾಯಿಸಿದ್ದಾರೆ.
ಶಿಕ್ಷಕರು ಪಾಠ ಮಾಡುವುದಕ್ಕಿಂತ ಹೆಚ್ಚು ಸಭೆ ಎಂದು ಯಾದಗಿರಿಗೆ ಅಲೆಯುವುದೇ ಹೆಚ್ಚಾಗಿದೆ. ಇದರಿಂದ ಪಾಠ ಮಾಡುವ ಶಿಕ್ಷಕರ ಸಮಯ ವ್ಯರ್ಥವಾಗುತ್ತಿದೆ ಎನ್ನುವುದು ಸಾರ್ವಜನಿಕರ ಮಾತು.
ನಿನ್ನೆಯಷ್ಟೇ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನು ಭೇಟಿಯಾಗಿ ಗುರುಮಠಕಲ್ ಕ್ಷೇತ್ರದ ಕಡೇಚೂರು – ಬಾಡಿಯಾಳ ಕೈಗಾರಿಕೆಗಳಿಂದ ಜನರಿಗೆ ಆಗುತ್ತಿರುವ ತೊಂದರೆಗಳು ಕುರಿತು ಗಮನ ಸೆಳೆದಿದ್ದರು.
ಅಭಿವೃದ್ಧಿ, ಶಿಕ್ಷಣದ ಪರ ಕಾಳಜಿ ಇರುವ ದೂರದೃಷ್ಟಿ ಹೊಂದಿರುವ ಯುವ ನಾಯಕ ಶರಣಗೌಡ ಕಂದಕೂರ ಮಾದರಿಯಾಗಿದ್ದಾರೆ.
