ಕಾಶ್ಮೀರದ ಉಗ್ರ ದಾಳಿ | ಹಿಂಸಾತ್ಮಕ ಘಟನೆಗಳಿಗೆ ಕ್ಷಮೆ ಕೊಡದಿರಲು ಒತ್ತಾಯ
ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿರುವ ಕ್ರೂರ ಉಗ್ರ ದಾಳಿ ದೇಶದ ಶಾಂತಿ ಮತ್ತು ಏಕತೆಗೆ ಅಡ್ಡಿಯುಂಟುಮಾಡುವ ಅಮಾನುಷ ಕೃತ್ಯವಾಗಿದೆ. ಈ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ದೇಶಭಕ್ತ ನಾಗರಿಕರ ಅಗಲಿಕೆಯ ನೋವು ದೇಶದ ಜನತೆಯನ್ನು ವಿಷಾದದಲ್ಲಿ ಮುಳುಗಿಸಿದೆ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಉಪಾಧ್ಯಕ್ಷ ಕೆ.ಬಿ. ವಾಸು ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, AIBSP ಈ ದಾಳಿಯನ್ನು ತೀವ್ರವಾಗಿ ಖಂಡಿಸುತ್ತಿದೆ. ಇಂತಹ ಗೊಂದಲ ಹಾಗೂ ಹಿಂಸಾತ್ಮಕ ಘಟನೆಗಳಿಗೆ ಯಾವುದೇ ರೀತಿಯ ಕ್ಷಮೆ ನೀಡಲಾಗದು. ಕೇಂದ್ರ ಸರ್ಕಾರವು ಕೂಡಲೇ ಈ ಘಟನೆಯಲ್ಲಿ ಭಾಗಿಯಾದ ಉಗ್ರರು ಹಾಗೂ ಅವುಗಳ ಬೆಂಬಲಿಗರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅವರನ್ನು ಶೀಘ್ರ ಪತ್ತೆಹಚ್ಚಿ ಕಾನೂನು ವಿಧಿಯಾದ ಶಿಕ್ಷೆ ನೀಡಬೇಕು ಎಂದಿದ್ದಾರೆ.
ಇದೇ ಸಂದರ್ಭದಲ್ಲಿ, ತಮ್ಮ ಕುಟುಂಬದವರನ್ನು ಈ ದಾಳಿಯಲ್ಲಿ ಕಳೆದುಕೊಂಡ ದುಃಖಿತ ಕುಟುಂಬಗಳಿಗೆ ಸರ್ಕಾರ ತಕ್ಷಣ ಪರಿಹಾರ ಘೋಷಿಸಬೇಕು ಮತ್ತು ಅಗತ್ಯ ಪುನರ್ವಸತಿ ಸೇವೆಗಳನ್ನು ಒದಗಿಸಬೇಕು ಎಂದು ಪಕ್ಷ ಮನವಿ ಮಾಡಿದೆ.
ಈ ದೇಶದಲ್ಲಿ ಶಾಂತಿ ಮತ್ತು ಭದ್ರತೆ ಬಲವಾಗಿರಬೇಕಾದರೆ, ಭದ್ರತಾ ವ್ಯವಸ್ಥೆಯನ್ನು ತಕ್ಷಣ ಬಲಪಡಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಇದರತ್ತ ಗಂಭೀರವಾಗಿ ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ.
