ಬೆಂಗಳೂರು: ಸರಕಾರದಿಂದ ಹಲವು ಪುಣ್ಯ ಪುರುಷರ ಜಯಂತಿಯನ್ನು ಆಚರಿಸುತ್ತಿದ್ದು, ಅದೇ ರೀತಿ ಸರಕಾರ ಸಹಸ್ತ್ರಾರ್ಜುನ ಮಹಾರಾಜರ ಜಯಂತಿಯನ್ನು ಆಚರಿಸಲು ಕ್ರಮವಹಿಸಬೇಕು ಎಂದು ಕರ್ನಾಟಕ ರಾಜ್ಯ ಸೋಮವಂಶೀಯ ಸಹಸ್ತ್ರಾರ್ಜುನ ಕ್ಷತ್ರಿಯ ಸಮಾಜದ ರಾಜ್ಯಾಧ್ಯಕ್ಷ ಡಾ. ಶಶಿಕುಮಾರ ಮೆಹರವಾಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಪುರಾಣಗಳಲ್ಲಿ ಸಹಸ್ರಾರ್ಜುನ ಮಹಾರಾಜರು ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಳನೇ ದಿನದಂದು ಜನಿಸಿದರು ಮತ್ತು ಸೋಮವಂಶ ಕ್ಷತ್ರಿಯರ ಮೂಲ ಪುರುಷರಾಗಿದ್ದಾರೆ.
ಮಹಾರಾಜರು ಚಂದ್ರ ವಂಶಕ್ಕೆ ಸೇರಿದವರು ಮತ್ತು ದತ್ತಾತ್ರೇಯ ಭಗವಂತನ ಆರಾಧಕರು ಪರಾಕ್ರಮಿಯಾಗಿದ್ದರು.
ಈ ಮಹಾರಾಜರ ಜಯಂತಿಯನ್ನು ದೇಶದೆಲ್ಲೆಡೆ ಅದ್ದೂರಿಯಾಗಿ ಆಚರಿಸಲಾಗಿದೆ. ಹಾಗಾಗಿ ಸರ್ಕಾರದಿಂದ ಜಯಂತಿ ಆಚರಿಸಲು ಸಂಬಂಧಿಸಿದ ಇಲಾಖೆಗೆ ನಿರ್ದೇಶನ ನೀಡಲು ಕೋರಿದ್ದಾರೆ.