15ನೇ ಯುವ ಜನೋತ್ಸವ ಕಾರ್ಯಕ್ರಮ ಉದ್ಘಾಟನೆ
ಯುವಕರು ತಪ್ಪು ಹೆಜ್ಜೆ ಇಡದೆ ದೇಶಕ್ಕೆ ಉತ್ತಮ ಸೇವೆ ಸಲ್ಲಿಸಲು ಕರೆ
ಬೀದರ : ಮೊಬೈಲ್ ದುನಿಯಾದಲ್ಲಿ ಚಮಕ ತರಿಸುವ ಜನರನ್ನು ಸೆಳೆಯುವ ಗುಣ ಜಾನಪದ ಕಲೆಗಿದೆ. ಸೋಲು-ಗೆಲವು ಅವತ್ತಿನ ಸ್ಥಿತಿಗೆಯಿರುವ ಶ್ರಮದ ಮೇಲೆ ಅವಲಂಬನೆಯಾಗಿದ್ದು ಯುವ ಜನೋತ್ಸವದಲ್ಲಿ ಭಾಗವಹಿಸುವಿಕೆ ಬಹುಮುಖ್ಯವಾಗಿದೆ ಎಂದು ನಾಡಿನ ಖ್ಯಾತ ಜಾನಪದ ಕಲಾವಿದ, ಚಿತ್ರ ನಟರಾದ ಗುರುರಾಜ ಹೊಸಕೋಟೆ ಹೇಳಿದರು.
ಬೀದರನ ಪೂಜ್ಯ ಡಾ. ಚನ್ನಬಸವ ಪಟ್ಟದೇವರುರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ 15ನೇ ಯುವಜನೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನನ್ನ ಹುಚ್ಚು ಜಾನಪದ ಸಾಹಿತ್ಯವನ್ನು ಶ್ರೀಮಂತವಾಗಿ ಸುವುದಾಗಿದೆ. ಯುವಕರು ತಪ್ಪು ಹೆಜ್ಜೆ ಇಡಬಾರದು, ತಪ್ಪು ಮಾಡಿದವ ಉಪ್ಪು ತಿನ್ನಲೇಬೇಕು, ತಪ್ಪು ಮಾಡಬೇಡಿ ದೇಶಕ್ಕೆ ಸೇವೆ ಸಲ್ಲಿಸುವ ಒಳ್ಳೆಯ ಪ್ರಜೆಗಳಾಗಿ ಎಂದು ಹೇಳಿದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ “ಕಲಾ ಬಿದರಿ ಸಂಗಮ” ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿ, ಈ ಸಭಾಂಗಣ ಯುವಶಕ್ತಿಯಿಂದ ತುಂಬು ತುಳುಕುತ್ತಿದ್ದು, ನಿಮ್ಮ ಶಕ್ತಿ ನಮಗೂ ಬಂದಂತಾಗಿದೆ. ಯುವಕರ ನಾವಿನ್ಯತೆ, ಹೊಸತನ ವಿಚಾರ ಹೆಚ್ಚಿನ ಅಭಿವೃದ್ಧಿಗೆ ಒಳ್ಳೆಯದು, ಯುವಕರ ಹಲವಾರು ಹೊಸ ವಿಚಾರಗಳು ನಾಡಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಸಾಧ್ಯವಾಗಿದೆ ಎಂದು ಹೇಳಿದರು.
ಬಾಗಲಕೋಟನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ವಿಷ್ಣುವರ್ಧನ ಅವರು ಮಾತನಾಡಿ, ಮಕ್ಕಳು ಉತ್ತಮ ಸಂಸ್ಕಾರ ಮೈಗೂಡಿಸುವುದು ಬಹಳ ಮುಖ್ಯವಾಗಿದ್ದು, ಯುವಜನೋತ್ಸವ ಒಳ್ಳೆಯ ಸಂಸ್ಕಾರ ಬೆಳೆಸುವ ವೇದಿಕೆಯಾಗಿದೆ. ಈ ಯುವಜನೋತ್ಸವದಲ್ಲಿ ಕೋಲಾರದಿಂದ ಬೀದರನವರೆಗೆ ಇರುವ ವಿವಿಧ ಸಂಸ್ಕೃತಿಗಳ ಪ್ರದರ್ಶಗಳನ್ನು ನೋಡಿದರೆ ಇದೊಂದು ವಿಶ್ವವಿದ್ಯಾಲಯದ ಕುಟುಂಬದಂತೆ ಎತ್ತಿತೋರಿಸುತ್ತದೆ.
ವಿದ್ಯಾರ್ಥಿಗಳಲ್ಲಿ ಪಠ್ಯತರ ಚಟುವಟಿಕೆಗಳ ಪ್ರೋತ್ಸಾಹಿಸಲು ಉತ್ತಮ ಹೊರ ಹೊಗುವ ವಿದ್ಯಾರ್ಥಿ ಎಂಬ ಸ್ವರ್ಣ ಪದಕವನ್ನು ಪ್ರತಿವರ್ಷ ನೀಡಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುಂಚೆ ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ವಿಷ್ಣುವರ್ಧನ ಅವರು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟದಲ್ಲಿ ಬರುವ 9 ಕಾಲೇಜುಗಳ ಯುವ ವಿದ್ಯಾರ್ಥಿಗಳ ಸಾಮರ್ಥ್ಯ ಪ್ರದರ್ಶಿಸಲು ಬೀದರ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ 15ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಯುವ ಜನೋತ್ಸವವನ್ನು “ಕಲಾ ಬಿದರಿ ಸಂಗಮ-2024” ಎಂಬ ಹೆಸರಿನಲ್ಲಿ ಚಿಗುರುವ ಕನಸುಗಳಿಗೆ ಹೆದ್ದಾರಿ ಎಂಬ ಪೀಠಿಕೆಯೊಂದಿಗೆ ಸಾಂಸ್ಕೃತಿಕ ಮೆರವಣಿಗೆಗೆ ಹಸಿರು ಧ್ವಜ ಹಾರಿಸುವ ಮೂಲಕ ವಿದ್ಯುತಕ್ತವಾಗಿ ಚಾಲನೆ ನೀಡಿದರು.
ಈ ಸಾಂಸ್ಕೃತಿ ಮೆರವಣಿಗೆಯಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಡಿಯ ಬೀದರ, ಅರಭಾವಿ, ಮುನಿರಾಬಾದ, ಬೆಂಗಳೂರು, ಬಾಗಲಕೋಟ, ಕೋಲಾರ, ಮೈಸೂರು, ದೇವಿಹೋಸೂರ ಹಾಗೂ ಶಿರಸಿ ತೋಟಗಾರಿಕೆ ಮಹಾವಿದ್ಯಾಲಯಗಳಿಂದ ಸುಮಾರು 300 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಸಾಂಸ್ಕೃತಿಕ ಮೆರವಣಿಗೆಯ ಫಲಿತಾಂಶದ : ಕೊಪ್ಪಳ ತೋಟಗಾರಿಕೆ ಮಹಾವಿದ್ಯಾಲಯಕ್ಕೆ ಪ್ರಥಮ ಸ್ಥಾನ, ಶಿರಸಿ ತೋಟಗಾರಿಕೆ ಮಹಾವಿದ್ಯಾಲಯಕ್ಕೆ ದ್ವಿತೀಯ ಸ್ಥಾನ, ಬೆಂಗಳೂರು ತೋಟಗಾರಿಕೆ ಮಹಾವಿದ್ಯಾಲಯಕ್ಕೆ ತೃತೀಯ ಸ್ಥಾನ, ಡಿಎಸ್‌ಎಲ್‌ಡಿಚೆಫ್ಟ್ದೇವಿ ಹೊಸುರು ಮತ್ತು ತೋ.ಮ.ವಿ. ಕೋಲಾರಕ್ಕೆ ಚತುರ್ಥಿ ಸ್ಥಾನ ದೊರಕಿರುತ್ತದೆ.
ಈ ಕಾರ್ಯಕ್ರಮದಲ್ಲಿ ಬೀದರ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ಜಿಯಾವುಲ್ಲಾ ಕೆ. ಬೀದರ ತೋಟಗಾರಿಕೆ ಉಪನಿರ್ದೇಶಕರಾದ ಡಾ.ವಿಶ್ವನಾಥ ಝಿಳ್ಳೆ, ಹಾಗೂ ವಿವಿಯ ವಿವಿಧ ಮಹಾವಿದ್ಯಾಲಯಗಳ ಡೀನ್‌ಗಳಾದ ಡಾ. ಬಾಲಾಜಿ ಕುಲಕರ್ಣಿ, ಡಾ.ವೆಂಕಟೇಶಲು, ಡಾ.ಎಮ್. ಜಿ. ಕೆರುಟಗಿ, ಡಾ. ಸಿ. ಎನ್. ಹಂಚಿನಮನಿ, ಡಾ. ಜಿ.ಎಸ್.ಕೆ. ಸ್ವಾಮಿ, ಡಾ.ತಮ್ಮಯ್ಯ ಎನ್. ಸೇರಿದಂತೆ ಇತರರು ಉಪಸ್ಥಿತರಿದ್ದರು.
ಯುವ ಜನೋತ್ಸವದ ಸಂಘಟನಾ ಅಧ್ಯಕ್ಷ ಡಾ. ರಾಮಚಂದ್ರ ನಾಯಕ, ಡೀನ-ವಿದ್ಯಾರ್ಥಿ ಕಲ್ಯಾಣ, ತೋಟಗಾರಿಗೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟ ಪ್ರಾಸ್ತವಿಕ ಮಾತನಾಡಿದರು.
ಸಂಘಟನಾ ಕಾರ್ಯದರ್ಶಿ ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಎಸ್. ವಿ. ಪಾಟೀಲ ಅತಿಥಿಗಳ ಪರಿಚಯದೊಂದಿಗೆ ಸ್ವಾಗತಿಸಿದರು.
ಡಾ. ಎಸ್. ಎಂ. ಪ್ರಸನ್ನ ಹಾಗೂ ಡಾ.ಶಶಿಕಲಾ ಎಸ್. ರುಳಿ ಸಹಾಯಕ ಪ್ರಾಧ್ಯಾಪಕರು, ನಿರೂಪಿಸಿದರು. ಡಾ. ವಿಜಯ ಮಹಾಂತೇಶ ವಂದಿಸಿದರು.