ಬೀದರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೀದರ ವಿಭಾಗೀಯ ನಿಯಂತ್ರಣಾಧಿಕಾರಿ ಮತ್ತು ಆಡಳಿತಾಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಕೊಳ್ಳುವಂತೆ ಭಾರತೀಯ ಮಜ್ದೂರ್ ಸಂಘದ ಬೀದರ್ ವಿಭಾಗದ ಕಾರ್ಯದರ್ಶಿ ಗಣಪತಿ ಸಕ್ರಪ್ಪನೋರ್ ಒತ್ತಾಯಿಸಿದ್ದಾರೆ.
ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು, ಸಂಸ್ಥೆಯ ಬೀದರ ವಿಭಾಗೀಯ ನಿಯಂತ್ರಣಾ ಧಿಕಾರಿ ಮತ್ತು ಆಡಳಿತಾಧಿಕಾರಿ ಭೇಟಿಯಾಗಿ ಸಂಸ್ಥೆಯ ಚಾಲಕ, ನಿರ್ವಾಹಕರ ತೀವ್ರ ಸಮಸ್ಯೆಗಳ ಕುರಿತು ಮಾಹಿತಿ ನೀಡಿ ರಜೆಗಳಿಗಾಗಿ ಕೋರಲಾಗಿತ್ತು.
ಆದರೆ ಮನವಿಗೆ ಸ್ಪಂದಿಸದ ಸದರಿ ಅಧಿಕಾರಿಗಳು ಭಾರತೀಯ ಮದ್ದೂರ ಸಂಘದ ಬೀದರ ಜಿಲ್ಲಾ ಪ್ರತಿನಿಧಿಗಳೊಂದಿಗೆ ಮನಬಂದಂತೆ ವರ್ತಿಸಿ, ಅವಮಾನಿಸಿ, ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಈ ಬಗ್ಗೆ ಅ.7 ರಂದು ಮನವಿ ಸಲ್ಲಿಸಲಾಗಿದೆ.
ಆದರೆ ಇದುವರೆಗೂ ಸದರಿಯವರ ವಿರುದ್ಧ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಕೊಂಡಿರುವುದಿಲ್ಲ ಮತ್ತು ನ್ಯಾಯ ಕೊಡಿಸಲಿಲ್ಲ.
ಹೀಗಾಗಿ ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಕಛೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ಮತ್ತು ಬೀದರ ಜಿಲ್ಲೆಯಾದ್ಯಂತ ಮುಷ್ಕರ ನಡೆಸಲಾಗುವುದು ಎಂದು ಹೇಳಿದ್ದಾರೆ.
ಈ ವೇಳೆ ಜಾನಸನ್ ಜನವಾಡಕರ್, ಗುಂಡಪ್ಪ ವಲ್ಲೂರೆ, ಧನಶೆಟ್ಟಿ ಮನ್ನಾಳೆ, ಕವಿರಾಜ ಮೂಳೆ, ಮಲ್ಲಿಕಾರ್ಜುನ ಪಾಟೀಲ, ಪಂಡಿತ ರತ್ನಾಪುರೆ, ಸಾಗರ, ಮಹಾದೆವ, ರುಬೇನ, ವಿಜಯ, ರಮೇಶ ಮತ್ತು ಸಂಘದ ಪದಾಧಿಕಾರಿಗಳು ಇದ್ದರು.