ಬೀದರ : 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ FAQ ಗುಣಮಟ್ಟದ ಹೆಸರುಕಾಳು ರೈತರ ನೋಂದಣಿ ಅವಧಿಯನ್ನು ನವೆಂಬರ್ 18 ರವರೆಗೆ ವಿಸ್ತರಿಸಿ ಆದೇಶಿಸಿದೆ ಎಂದು ಬೀದರ ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಬೀದರ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಬೀದರ ಜಿಲ್ಲೆಯಲ್ಲಿ ಹೆಸರುಕಾಳು ಖರೀದಿಗಾಗಿ ಒಟ್ಟು 30 ಕೇಂದ್ರಗಳನ್ನು ತೆರೆಯಲಾಗಿತ್ತು. ಜಿಲ್ಲೆಯಲ್ಲಿ ಹೆಸರುಕಾಳು ಖರೀದಿಗಾಗಿ ನೋಂದಣಿ ಅವಧಿ ವಿಸ್ತರಿಸಲು ರೈತರ ಸಮುದಾಯದಿಂದ ಸಾಕಷ್ಟು ಬೇಡಿಕೆ ಇತ್ತು. ಹಾಗಾಗಿ ಸರ್ಕಾರವು ಬೆಂಬಲ ಬೆಲೆ ಯೋಜನೆಯಡಿ ಈಂಕಿ ಗುಣಮಟ್ಟದ ಪ್ರಮಾಣವನ್ನು 22215 ಎಂಟಿ ರಿಂದ 38320 ಎಂಟಿಗೆ ಹೆಚ್ಚಿಸಿ, ರೈತರ ನೋಂದಣಿ ಕಾಲಾವಧಿಯನ್ನು ವಿಸ್ತರಿಸಿ, ರೈತರ ನೋಂದಣಿ ಕಾರ್ಯದ ಜೊತೆಗೆ ಖರೀದಿ ಪ್ರಕ್ರಿಯೆಯನ್ನು ಸಹ ಕೈಗೊಳ್ಳಲು ಆದೇಶಿಸಿದೆ.
ಪ್ರಯುಕ್ತ ಹೆಸರುಕಾಳು ಬೆಳೆದ ರೈತರು ಕೂಡಲೇ ಸಮೀಪದ ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಿಕೊಂಡು FAQ ಗುಣಮಟ್ಟದ ಹೆಸರು ಕಾಳನ್ನು ಬೆಂಬಲ ಬೆಲೆ ದರ ರೂ. 8682-00 ಗಳಂತೆ ಮಾರಾಟ ಮಾಡಿ ಸದರಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.