ಸಮಾಜ ಸುಧಾರಣೆಗಾಗಿ ಈ ನಾಡಿನಲ್ಲಿ ಹಲವಾರು ಸಂತ, ಶರಣರ ಶ್ರಮ| ಸಾಮಾಜಿಕ ಅಂಕು ಡೊಂಕುಗಳನ್ನು ತಿದ್ದಿದ ಮಹಾನ ಸಂತ

ಬೀದರ: ಕರ್ನಾಟಕವು ವೈವಿದ್ಯೆತೆಗಳಿಂದ ಕೂಡಿದ ನಾಡಾಗಿದ್ದು ಇಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತೇವೆ. ಹಲವಾರು ಸಾಮ್ರಾಜ್ಯಗಳು, ರಾಜ್ಯವಂಶಸ್ಥರು, ಸಂತ ಶರಣರು ಮತ್ತು ದಾರ್ಶನಿಕರಿಗೆ ಜನ್ಮ ನೀಡಿದ ಪುಣ್ಯ ಭೂಮಿ ಇದಾಗಿದೆ. ಸಾಹಿತ್ಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ತನ್ನದೆಯಾದ ರೀತಿಯಲ್ಲಿ ಹೆಸರು ಮಾಡಿದ ನಾಡು ನಮ್ಮದೆಯಾಗಿದೆ. ಸಮಾಜ ಸುಧಾರಣೆಗಾಗಿ ಈ ನಾಡಿನಲ್ಲಿ ಹಲವಾರು ಸಂತ, ಶರಣರು ಶ್ರಮಿಸಿದ್ದಾರೆ. ಅಂತಹ ಮಹನಿಯರಲ್ಲಿ ಕನಕದಾಸರು ಒಬ್ಬರು ಎಂದು ಅರಣ್ಯ, ಪರಿಸರ ಜೀವಿಶಾಸ್ತç ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ತಿಳಿಸಿದರು.

ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಬೀದರ ವತಿಯಿಂದ ಡಾ.ಚನ್ನಬಸವ ಪಟ್ಟದೇವರ ರಂಗ ಮಂದಿರದಲ್ಲಿ ಏರ್ಪಡಿಸಿದ್ದ ಭಕ್ತ ಶ್ರೇಷ್ಠ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದಾಸ ಸಾಹಿತ್ಯದಲ್ಲಿ ಶ್ರೇಷ್ಠ ಹರಿದಾಸರಾಗಿ ತಮ್ಮ ಕೀರ್ತನೆಗಳ ಮೂಲಕ ಅಂದಿನ ಸಾಮಾಜಿಕ ಅಂಕು ಡೊಂಕುಗಳನ್ನು ತಿದ್ದಿದ ಒಬ್ಬ ಮಹಾನ ಸಂತರಾಗಿದ್ದಾರೆ ಎಂದರು.

ಪೌರಾಡಳಿತ ಹಜ್ ಸಚಿವರಾದ ರಹೀಮಖಾನ ಅವರು ಮಾತನಾಡಿ, ಎಲ್ಲ ಸಮಾಜಗಳಲ್ಲಿ ಮಹಾತ್ಮರಿದ್ದಾರೆ ಅವರ ವಿಚಾರ ಧಾರೆಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಡವ, ಸಾಹುಕಾರ ಎನ್ನದೇ ಸಮಾಜ ಒಳಿತಿಗಾಗಿ ದುಡಿದ ಮಹಾನರು ಎಂದರು.

ಕರ್ನಾಟಕ ಪದವಿ ಮಹಾವಿದ್ಯಾಲಯ ಬೀದರನ ಸಹಾಯಕ ಪ್ರಾಧ್ಯಾಪಕರಾದ ಡಾ.ಸವಿತಾ ಕೂಡ್ಲಿಕರ ಅವರು ಕನಕದಾಸರ ಜೀವನದ ಕುರಿತು ಉಪನ್ಯಾಸ ನೀಡಿದರು.ಇದೇ ಸಂದರ್ಭದಲ್ಲಿ ಮಾಜಿ ಸಚಿವರಾದ ಬಂಡೇಪ್ಪ ಖಾಶೆಂಪೂರ ಮತ್ತು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಮೃತರಾವ ಚೀಮಕೊಡ ಮಾತನಾಡಿದರು.

ಔರಾದನ ಆರಾದ್ಯ ಅಮರವಾಡಿ ತಂಡದಿಂದ ಭಕ್ತ ಕನಕದಾಸ ಅವರ ಕುರಿತು ನೃತ್ಯ ಪ್ರದರ್ಶಿಸಲಾಯಿತು. ಕಾಳಿದಾಸ ಗೊಂಡ ಯುವಕ ಸಂಘದ ವತಿಯಿಂದ ಏರ್ಪಡಿಸಿದ ನಿಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಮಹಮ್ಮದ ಗೌಸ, ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರದೀಪ ಗುಂಟಿ, ಅಪರ ಜಿಲ್ಲಾಧಿಕಾರಿಗಳಾದ ಶಿವಕುಮಾರ ಶೀಲವಂತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಾದ ಸಿದ್ರಾಮ ಶಿಂಧೆ, ಕನಕದಾಸ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷರಾದ ಬಾಬುರಾವ ಮಲಕಾಪೂರ, ಕಾರ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬಿರಾದಾರ, ಪೀರಪ್ಪ ಯರನಳ್ಳಿ, ಪಂಡಿತರಾವ ಚಿದ್ರಿ, ಅಭಿಮಾನಿಗಳು, ಚಿಂತಕರು ಸೇರಿದಂತೆ ಸಮಾಜದ ಗಣ್ಯರು ಉಪಸ್ಥಿತರಿದ್ದರು.

ಜಾತಿ ವ್ಯವಸ್ಥೆಯಲ್ಲಿ ಮೇಲು ಕೀಳು ಭಾವನೆ ಹೋಗಲಾಡಿಸಲು ಪ್ರಯತ್ನಿಸಿದ ದಾಸರು….

ಭಕ್ತ ಶ್ರೇಷ್ಠ ಕನಕದಾಸರು 15, 16ನೇ ಶತಮಾನದಲ್ಲಿ ಕೀರ್ತನೆ, ಕಾವ್ಯಗಳ ಮುಖಾಂತರ ಅನೇಕ ಕೃತಿಗಳನ್ನು ರಚನೆ ಮಾಡಿ ಅದರ ಮುಖಾಂತರ ಸಮಾಜದಲ್ಲಿ ಸಮ ಸಮಾಜ ನಿರ್ಮಾಣ, ಸಮಾಜ ಸುಧಾರಣೆ, ಜಾತ್ಯಾತಿಥ ಸಮಾಜ ಮಾಡಲು ಅಂದಿನ ಜಾತಿ ವ್ಯವಸ್ಥೆಯಲ್ಲಿ ಮೇಲು ಕೀಳು ಎಂಬ ಭಾವನೆ ಹೋಗಲಾಡಿಸಲು ಪ್ರಯತ್ನಿಸಿದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಹೇಳಿದರು.

ಭೋಮ್ಮಗೊಂಡೇಶ್ವರ ವೃತ್ತದಲ್ಲಿ ಭಕ್ತ ಶ್ರೇಷ್ಠ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಮೆರವಣಿಗೆ ಚಾಲನೆ ನೀಡಿ ಮಾತನಾಡಿದರು.

ಸಾಮಾಜಿಕ ವ್ಯವಸ್ಥೆಯಲ್ಲಿ ಶೋಷಣೆಯನ್ನು ನಿವಾರಣೆ ಮಾಡಿ ಮನುಕುಲವನ್ನು ಒಂದೇ ಮಾಡಿ, ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನ್ನು ಬಲ್ಲಿರಾ, ಜೀವಕ್ಕೆ ಕುಲವಿದೆಯಾ, ಆತ್ಮಕ್ಕೆ ಕುಲವಿದೆಯಾ ಎಂದು ತಮ್ಮ ಸಂಪತ್ತು, ಸಂಸಾರ ತ್ಯಾಗ ಮಾಡಿ ಕೀರ್ತನೆ ಮೂಲಕ ರಾಜ್ಯಾದ್ಯಂತ ಸುತ್ತಾಡಿ ಧಾರ್ಮಿಕ ಜಾಗೃತೆ ಮಾಡಿ ಸಮಾಜ ಸುಧಾರಣೆ ಮಾಡಿ ನಮಗೆಲ್ಲರಿಗೂ ಆದರ್ಶಗಳನ್ನು ನೀಡಿದ್ದಾರೆ. ಅವರು ಕೊಟ್ಟಂತಹ ವಿಚಾರ ಧಾರೆಗಳನ್ನು ನಾವೇಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳೋಣ್ಣ ಎಂದರು.

ಕಾರ್ಯಕ್ರಮಕ್ಕೂ ಮುಂಚೆ ಭಕ್ತ ಶ್ರೇಷ್ಠ ಕನಕದಾಸರ ಭಾವಚಿತ್ರದ ಮೆರವಣಿಗೆಯು ಬಸವೇಶ್ವರ ವೃತ್ತ, ಭಗತಸಿಂಗ ವೃತ್ತ, ಅಂಬೇಡ್ಕರ ವೃತ್ತ, ಹರಳಯ್ಯ ವೃತ್ತ, ರೋಟರಿ ವೃತ್ತ ಮಾರ್ಗವಾಗಿ ರಂಗಮಂದಿರದವರೆಗೆ ನಡೆಯಿತು.

ಕಾರ್ಯಕ್ರಮದಲ್ಲಿ ಪೌರಾಡಳಿತ ಹಜ್ ಸಚಿವರಾದ ರಹೀಮಖಾನ, ಬೀದರ ದಕ್ಷಿಣ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ಮಾಜಿ ಸಚಿವರಾದ ಬಂಡೆಪ್ಪಾ ಕಾಶಂಪೂರ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಮೃತರಾವ ಚೀಮಕೋಡ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅದಿಕಾರಿ ಡಾ.ಗಿರೀಶ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಸಹಾಯಕ ಆಯುಕ್ತರಾದ ಎಂ.ಡಿ.ಶಕೀಲ್, ನಗರಸಭೆ ಅಧ್ಯಕ್ಷರಾದ

ಎಂ.ಡಿ.ಗೌಸ್, ಮುಖಂಡರಾದ ಬಾಬುರಾವ ಮಲ್ಕಾಪೂರೆ, ಮಲ್ಲಿಕಾರ್ಜುನ ಪರಿಹಾರ, ಮಾಳಪ್ಪ ಅಡಸಾರೆ, ಪಂಡಿತ ಚಿದ್ರಿ, ಶಶಿ ಹೊಸಳ್ಳಿ, ಈಶ್ವರಸಿಂಗ ಠಾಕೂರ, ನಗರಸಭೆ ಸದಸ್ಯರಾದ ಹಣಮಂತ ಮಲ್ಕಾಪೂರ, ಬಸವರಾಜ ಹೆಡೆ, ಪೀರಪ್ಪ ಯರನಳ್ಳಿ, ಲಲಿತಾ ಕರಂಜಿ, ರಾಜಕುಮಾರ ಕಂದಗೋಳ, ಸೋಮಶೇಖರ ಚಿದ್ರಿ, ತುಕಾರಾಮ ಚಿದ್ರಿ, ಗಣಪತರಾವ ಸೋಲಪುರ, ನಾಗರಾಜ ನಂದಗಾಂವ, ವಿಜಯಕುಮಾರ ಖಾಸೆಂಪುರ, ಬಸವರಾಜ ಮಾಳಗೆ, ಚಂದ್ರಕಾಂತ ಹಿಪ್ಪಳಗಾಂವ ಸೇರಿದಂತೆ ಭಕ್ತ ಕನಕದಾಸರ ಅಭಿಮಾನಿಗಳು, ಮುಖಂಡರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!