ಬೀದರ್: ಜಿಲ್ಲೆಯ ಪ್ರಜಾವಾಣಿ ದಿನಪತ್ರಿಕೆಯ ಜಿಲ್ಲಾ ವರದಿಗಾರರಾದ ಶಶಿಕಾಂತ ಶಂಬೆಳ್ಳಿ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ನಾಗಶೆಟ್ಟಿ ಧರಮಪುರ, ಕಾರ್ಯದರ್ಶಿ ಪ್ರಥ್ವಿರಾಜ್ ಎಸ್. ಸುನೀಲಕುಮಾರ ಕುಲಕರ್ಣಿ, ಕೋಶಧ್ಯಕ್ಷರಾದ ಎಂ. ಪಿ. ಮುದಾಳೆ ಚಿಕ್ಕಪೇಟ, ಸ್ವಾಗತಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ.
ಶೆಂಬೆಳ್ಳಿಯವರು ವಸ್ತುನಿಷ್ಠ, ನಿಖರವಾದ ಸುದ್ದಿ ಪ್ರಕಟಿಸುತ್ತಾ ಬೀದರ ಜಿಲ್ಲೆಯ ಜನಮನ ಗೆದ್ದಿದ್ದಾರೆ ಎಂದು ಅವರು ಹೇಳಿದ್ದಾರೆ. ಪ್ರತಿಯೊಬ್ಬ ರ ಬಾಯಲ್ಲೂ ಅವರ ಹೆಸರು ಕೇಳಿ ಬರುತ್ತಿರುವುದು ಅವರ ಪ್ರಗತಿಗೆ ವಿಶೇಷ ಮೆರಗು ಬಂದಿದೆ.
ಅಭಿವೃದ್ಧಿಯ ಸುದ್ದಿಗಳು ಸಾರ್ವಜನಿಕ ಸಮಸ್ಯೆಗಳ ಸುದ್ದಿಗಳು, ಕೈಗಾರಿಕೆಗಳ ಸುದ್ದಿಗಳು, ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಶೆಂಬೆಳ್ಳಿ ಈ ಮಹತ್ವದ ಪ್ರಶಸ್ತಿಗೆ ಆಯ್ಕೆ ಆಗಿದ್ದಕ್ಕೆ ಜಿಲ್ಲಾ ಘಟಕದ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.