ಪಶು ವಿವಿಯ ಜಾನುವಾರು ಮೇಳದ ಪ್ರಚಾರ ಅಭಿಯಾನಕ್ಕೆ ಜಿಲ್ಲೆಯ ವಿವಿಧಡೆ ಅದ್ದೂರಿ ಚಾಲನೆ

ಬೀದರ: ಮುಂಬರುವ 2025 ಜನವರಿ 17, 18, 19 ರಂದು ಕರ್ನಾಟಕ ಪಶು ವಿವಿಯ ಜಾನುವಾರು ಮೇಳದ ಪ್ರಚಾರ ಅಭಿಯಾನಕ್ಕೆ ಅದ್ದೂರಿ ಚಾಲನೆ ನೀಡಲಾಯಿತು.

ಭಾಲ್ಕಿಯಲ್ಲಿ ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ತಮ್ಮ ಮನೆಯ ಕಚೇರಿಯಲ್ಲಿ ವಿಸ್ತರಣಾ ನಿರ್ದೇಶಕ ಡಾಕ್ಟರ್ ಬಸವರಾಜ ಅವಟಿ, ಡಾ. ಎಂ ಕೆ ತಾಂಡ್ಲೆ ಹಾಗೂ ಮೇಳದ ಪ್ರಚಾರ ಸಮಿತಿಯ ಅಧ್ಯಕ್ಷರಾದ ಚನ್ನಪ್ಪ ಗೌಡ ಬಿರಾದಾರ ಅವರೊಡನೆ ಮೇಳದ ಬಿತ್ತಿ ಪತ್ರ ಬಿಡುಗಡೆ ಮಾಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವಿಡಿಯೋ ಸಂದೇಶ ನೀಡಿದ ಸಚಿವರು ಕಲ್ಯಾಣ ಕರ್ನಾಟಕದ ಎಲ್ಲ ರೈತ ಬಾಂಧವರು ಹಾಗೂ ನೆರೆ ರಾಜ್ಯದ ರೈತ ಬಾಂಧವರು ಈ ಮೇಳದ ಉತ್ಕೃಷ್ಟ ತಾಂತ್ರಿಕತೆಯ ಪ್ರದರ್ಶನದ ಲಾಭ ಪಡೆಯಬೇಕು ಎಂದು ಮನವಿ ಮಾಡಿದರು. ಪಶು ವಿಮೆ ಹೊಸ ವರ್ಷದ ಆರಂಭದಲ್ಲಿ ಅತ್ಯಂತ ಜನಪರ ಹಾಗೂ ರೈತ ಪರ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ರಾಜ್ಯದ ರೈತರಿಗೆ ಹೊಸ ವರ್ಷದ ಶುಭಾಶಯಗಳು ತಿಳಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧಡೆ ಏಕಕಾಲಕ್ಕೆ ಪ್ರಚಾರಕ್ಕೆ ಚಾಲನೆ ನೀಡಲಾಗಿದ್ದು ಪೂಜ್ಯ ಬಸವಲಿಂಗಪಟ್ಟದ್ದೇವರು ಭಾಲ್ಕಿ ಹಿರೇಮಠ ಸಂಸ್ಥಾನ ಇವರು ಮಠದಲ್ಲಿ ಬಿತ್ತಿಪತ್ರ ಅಂಟಿಸುವ ಮೂಲಕ ವಿಡಿಯೋ ಸಂದೇಶ ನೀಡಿ ಪಶು ಮೇಳಕ್ಕೆ ಶುಭ ಹಾರೈಸಿದರು. ಹೆಚ್ಚು ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವಂತೆ ಕರೆ ನೀಡಿ ತಾವು ಬರುವುದಾಗಿ ತಿಳಿಸಿದರು.

ಪಶುಸಂಗೋಪನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯಲ್ಲಿ ವಿಶ್ವವಿದ್ಯಾಲಯದ ಅಧಿಕಾರಿಗಳಾದ ಡಾ. ಬಿ. ವಿ ಶಿವಪ್ರಕಾಶ್ ಡಾ. ದಿಲೀಪ್ ಕುಮಾರ್ ಹಾಗೂ ಉಪ ನಿರ್ದೇಶಕರಾದ ಡಾ. ನರಸಪ್ಪ ಹಾಗೂ ಡಾ. ನೇತೃತ್ವದಲ್ಲಿ ಪಶುವೈದ್ಯಾಧಿಕಾರಿಗಳ ಎಲ್ಲರೂ ಸಭೆ ಮಾಡಿ ಎಲ್ಲ ಗ್ರಾಮಗಳಿಗೆ ಮುಟ್ಟಿಸುವದಾಗಿ ನಿರ್ಧರಿಸಿ ಬಿತ್ತಿಪತ್ರ ಬಿಡುಗಡೆ ಮಾಡಿದರು.

ಪಶುಮೇಳ 2025 ವಿಶೇಷತೆ:

  • ಪಶುಗಳ ವೈವಿಧ್ಯಮಯ ಪ್ರದರ್ಶನ – ದೇಸಿ ಗೋವುಗಳಿಂದ ಹಿಡಿದು ಅಂತರಾಷ್ಟ್ರೀಯ ತಳಿ ಶ್ವಾನಗಳವರೆಗೆ.
  • ಪ್ರತ್ಯೇಕ ಶ್ವಾನ ಪ್ರದರ್ಶನ – ವಿಶೇಷ ಪೊಲೀಸ್‌ ಶ್ವಾನಗಳು ಹಾಗೂ ಶ್ರೇಷ್ಟ ತಳಿಗಳ ಪ್ರದರ್ಶನ.
  • ಮೀನು ಕೃಷಿ ಪ್ರದರ್ಶನ – ವೈವಿಧ್ಯಮಯ ಮೀನು ತಳಿಗಳ ಪರಿಚಯ.
  • ಉಚಿತ ರೇಬೀಸ್ ಲಸಿಕಾ ಶಿಬಿರ – ನಿಮ್ಮ ಶ್ವಾನಗಳಿಗೆ ಆರೊಗ್ಯದ ರಕ್ಷಣೆಯತ್ತ ಹೆಜ್ಜೆ.
  • ಕೃಷಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು – ರೈತರ ಸಾಧನೆಗಳನ್ನು ಗೌರವಿಸುವ ಕ್ಷಣಗಳು.
  • ಪ್ರಶಸ್ತಿ ವಿತರಣೆ – ಪ್ರತಿ ಜಿಲ್ಲೆಯ ಶ್ರೇಷ್ಠ ರೈತ ಮತ್ತು ರೈತ ಮಹಿಳೆಗಳಿಗೆ ಗೌರವ.
Spread the love

Leave a Reply

Your email address will not be published. Required fields are marked *

error: Content is protected !!