ಬೀದರ : ಬೀದರ್ ರೈಲ್ವೆ ಪೊಲೀಸರು ಭರ್ಜರಿ ಬೇಟೆ ಯಾಡಿದ್ದಾರೆ. ಬೀದರ್ ರೈಲ್ವೆ ನಿಲ್ದಾಣದಲ್ಲಿಂದು ರೈಲು ಗಾಡಿ ಸಂಖ್ಯೆ 17647 ಹೈದರಾಬಾದ್ – ಪೂರ್ಣ ಎಕ್ಸ್ಪ್ರೆಸ್ ರೈಲುಗಾಡಿಯು ಬೀದರ್ ರೈಲ್ವೆ ನಿಲ್ದಾಣದಲ್ಲಿ ಬಂದಾಗ ರೈಲು ಗಾಡಿಯ ಹಿಂದಿನ ಜನರಲ್ ಬೋಗಿಗಳನ್ನು ಚಕ್ ಮಾಡುವಾಗ ದಾಳಿ ಮಾಡಿ 15 ಕೆಜಿ 200 ಗ್ರಾಂ ಗಾಂಜಾ ಅಂ.ಕಿ. 1,52,000 ರೂ. ವನ್ನು ವಂ ಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬೀದರ ರೈಲ್ವೆ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 30/2025 ಕಲಂ 20 b (II)(ಃ) ಏನ್. ಡಿ. ಪಿ.ಎಸ್. ಪ್ರಕರಣ ದಾಖಲು ಮಾಡಿಕೊಂಡು ಆರೋಪಿತರ ಪತ್ತೆ ಕುರಿತು ತನಿಖೆ ಕೈಗೊಳ್ಳಲಾಗಿದೆ ಎಂದು ಬೀದರ ರೈಲ್ವೆ ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯತೀಶ್ ಎನ್.ಐಪಿಎಸ್. ಎಸ್ಪಿ ರೈಲ್ವೇಸ್ ಬೆಂಗಳೂರು, ಸೋಮಶೇಖರ್ ಜುಟಲ್ ಡಿವೈಎಸ್ಪಿ ರೈಲ್ವೆ ಉಪ ವಿಭಾಗ ಹುಬ್ಬಳ್ಳಿ ಅವರ ಮಾರ್ಗದರ್ಶನದಲ್ಲಿ ಮತ್ತು ಬಸವರಾಜ್ ತೇಲಿ, ಸಿಪಿಐ ರೈಲ್ವೆ ವೃತ್ತ ರಾಯಚೂರ್ ಅವರ ನೇತೃತ್ವದಲ್ಲಿ ಬೀದರ ರೈಲ್ವೆ ಪೊಲೀಸ್ ಠಾಣೆಯ ಮಹಮ್ಮದ್ ಪಾಷಾ ಪಿ.ಎಸ್.ಐ, ಅಧಿಕಾರಿ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ.
