ಬೀದರನಲ್ಲಿ ಎಟಿಎಂ ಗೆ ಹಣ ಹಾಕಲು ಬಂದಿದ್ದ ಸಿಬ್ಬಂದಿ| ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು |ಗುಂಡು ಹಾರಿಸಿ ಹತ್ಯೆ | ಲಕ್ಷಾಂತರ ದೋಚಿ ಪರಾರಿ
ಬೀದರ: ಜನರು ನೋಡ ನೋಡುತ್ತಲೇ ಜ.16 ರಂದು ಬೀದರ್ ನಲ್ಲಿ ದರೋಡೆ ನಡೆದಿದ್ದು, ಎಟಿಎಂ ಗೆ ಹಣ ಹಾಕಲು ಬಂದಿದ್ದ ಸಿಬ್ಬಂದಿ ಮೇಲೆ ಗುಂಡು ಹಾರಿಸಿ, ಸಿನಿಮೀಯ ರೀತಿಯಲ್ಲಿ ಲಕ್ಷಾಂತರ ಹಣ ದರೋಡೆ ಮಾಡಿರುವ ಘಟನೆ ನಡೆದಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಪಕ್ಕದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಗೆ ಹಣ ಜಮಾ ಮಾಡಲು ಇಬ್ಬರು ಸಿಬ್ಬಂದಿ ತೆರಳಿದ್ದರು, ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದರೋಡೆಕೋರರು ಗುಂಡು ಹಾರಿಸಿದ ಪರಿಣಾಮ ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ದರೋಡೆಕೋರರು ಹಣ ತುಂಬಿದ್ದ ಡಬ್ಬಿ ಎತ್ತಿಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜನರ ಕಣ್ಮುಂದೆಯೇ ಘಟನೆ ನಡೆದಿದ್ದು ಒಬ್ಬ ವ್ಯಕ್ತಿ ದರೋಡೆಕೋರರ ಮೇಲೆ ಕಲ್ಲು ಎಸೆಯುವ ಧೈರ್ಯ ತೋರಿದ್ದು, ದರೋಡೆಗೆ ಬಂದವರು ಕೈಯಲ್ಲಿ ಗನ್ ಇರುವುದ ರಿಂದ ಪ್ರಾಣಕ್ಕೆ ಹೆದರಿ ಯಾರು ಹಿಡಿಯಲು ಮುಂದಾಗದಿರು ವುದು ವಿಡಿಯೋದಲ್ಲಿ ಕಂಡು ಬರುತ್ತಿದೆ.
ಘಟನ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.