ರಾಜ್ಯದಲ್ಲಿ ಏಕಾಏಕಿ ರೈತರು, ಮಠ – ಮಾನ್ಯಗಳ ಜಮೀನು ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನು ಬಿಜೆಪಿ ಪ್ರಭಲ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ರೈತರು- ಮಠಾಧೀಶರು ರಸ್ತೆಗಿಳಿದು ಹೋರಾಟ ನಡೆಸುತ್ತಿರುವುದು ಕಂಡು ಬರುತ್ತಿದೆ.
ವಿಜಯಪುರದಲ್ಲಿ ಹಿಂದು ಫೈರ್ ಬ್ರಾಂಡ್ ಯತ್ನಾಳ ಅವರು ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿರುವುದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಹಲವು ನಾಯಕರು ಹಾಗೂ ಮಠಾಧೀಶರು ಧರಣಿಯಲ್ಲಿ ಭಾಗವಹಿಸಿ ಸಾಥ್ ನೀಡಿದ್ದಾರೆ.
ವಿಜಯಪುರ: ನ.7ರಂದು (ವಕ್ಫ್ ತಿದ್ದುಪಡಿ ಮಸೂದೆ) ಜಗದಾಂಬಿಕ ಪಾಲ್ ಅಧ್ಯಕ್ಷತೆಯ ಸಂಸದೀಯ ಜಂಟಿ ಸಮಿತಿ ನವದೆಹಲಿಯಿಂದ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸ್ಥಳಕ್ಕೆ ಆಗಮಿಸಲಿದೆ.
ಮಾರಕ ವಕ್ಫ್ ಕಾಯ್ದೆ ನಿರ್ಮೂಲನೆಗಾಗಿ ರಾಜ್ಯದಾದ್ಯಂತ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಬಳಿ, ವಿಜಯಪುರ. ಬೀದರ್, ಕಲಬುರ್ಗಿ, ಯಾದಗಿರಿ, ಬಳ್ಳಾರಿ, ರಾಯಚೂರು, ಬಾಗಲಕೋಟೆ, ಕೊಪ್ಪಳ ಜಿಲ್ಲೆ ಸೇರಿದಂತೆ ಜಿಲ್ಲೆಗಳಲ್ಲಿ ವಕ್ಫ್ ಕರಾಳ ಕಾಯ್ದೆಯಿಂದ ಹಾನಿಗೊಳಗಾದ ರೈತರು, ದೇವಸ್ಥಾನಗಳು, ಧಾರ್ಮಿಕ ಸಂಸ್ಥೆಗಳು, ಸಂಘಟನೆಗಳು ದಾಖಲೆಗಳ ಸಮೇತ ಮನವಿ ಸ್ವೀಕರಿಸಿ ಅಹವಾಲು ಸ್ವೀಕರಿಸಲಿದ್ದಾರೆ.
ಇದರಲ್ಲಿ ಸಂಸದರು, ಶಾಸಕರು, ಮಾಜಿ ಶಾಸಕರು ಭಾಗವಹಿಸಲಿದ್ದಾರೆ.
ವ್ಯಾಪಕ ಬೆಂಬಲ: ರೈತರು, ಮಠ ಮಾನ್ಯಗಳ ಜಮೀನುಗಳ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದ್ದು, ಮಾರಕ ಕಾಯ್ದೆ ನಿರ್ಮೂಲನೆಗಾಗಿ ಶಾಸಕ ಯತ್ನಾಳ್ ಕರೆ ನೀಡಿರುವ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಅವರ ಬೆಂಬಲಕ್ಕೆ ವಿವಿಧ ದಲಿತಪರ ಸಂಘಟನೆ, ರೈತ ಸಂಘಟನೆಗಳು ಕೈಜೋಡಿಸಿವೆ.