ಬೆಂಗಳೂರು: ಮಾಚಿ ಸಚಿವ, ಹಿಂದು ಫೈರ್ ಬ್ರಾಂಡ್ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಡಿ.1 ರಂದು ನೋಟಿಸ್ ನೀಡಿದೆ.
ರಾಜ್ಯ ನಾಯಕತ್ವ ಮತ್ತು ಪಕ್ಷದ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆಗಳು ಇತರೆ ವಿಷಯಗಳನ್ನು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ನಿಮ್ಮ ಮೇಲೆ ಏಕೆ ಪಕ್ಷ ಕ್ರಮ ಕೈಗೊಳ್ಳಬಾರದು ಎಂದು ನೋಟಿಸ್ ನಲ್ಲಿ ಹೇಳಲಾಗಿದ್ದು, 10 ದಿನಗಳಲ್ಲಿ ಉತ್ತರ ನೀಡುವಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.
ನೋಟಿಸ್ ವಿಚಾರವಾಗಿ ದೆಹಲಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಯತ್ನಾಳ್, ವಕ್ಫ್ ಬಗ್ಗೆ ಹೋರಾಟ ಮಾಡಬಾರದಾ? ರಾಜ್ಯದಾದ್ಯಂತ ವ್ಯಾಪಕ ರೈತರು ಮಠಾಧೀಶರು ಬೆಂಬಲ ಕೊಡುತ್ತಿದ್ದಾರೆ. ವಿಜಯೇಂದ್ರ ಏನು ಕೆಲಸ ಮಾಡುತ್ತಿಲ್ಲ. ಮಠ ಮಾನ್ಯಗಳ ಜಮೀನು ವಕ್ಫ್ ಹೆಸರಿಗೆ ಆಗುತ್ತಿವೆ.
ಮುಡಾ ಪಾದಯಾತ್ರೆ ಬಿಟ್ಟರೆ, ಅದ್ಜೆಸ್ಟಮೆಂಟ್ ಪಾಲಿಟಿಕ್ಸ್ ನಿಂದ ಡಿಕೆಶಿ ಮೇಲೆ ಗಂಭೀರ ಆರೋಪ ಬಂದಾಗಲು ಪ್ರತಿಕ್ರಿಯೆ ನೀಡಿಲ್ಲ ಎಂದಿದ್ದಾರೆ.
ಯಾವ ಹಿಂದೂ ಕಾರ್ಯಕರ್ತರ ಕೊಲೆಯಾದಾಗ, ಮಂಡ್ಯ ಜಿಲ್ಲೆಯ ಗಣಪತಿಯನ್ನು ಪೊಲೀಸರು ಓಯ್ಯುವಾಗ, ವಕ್ಫ್ ಬಗ್ಗೆಯೂ ತಂಡ ಕಳಿಸಿದ್ದಾರೆ ತಾವು ಎಲ್ಲಿ ಹೋಗಿಲ್ಲ ಎಂದು ಹೇಳಿದ್ದಾರೆ.