ಯಾದಗಿರಿ : ದೀಪಾವಳಿ ಹಬ್ಬದ ನಿಮಿತ್ಯ ಬಸ್‌ಗಳಲ್ಲಿ ಸ್ಪೋಟಕ ವಸ್ತುಗಳ ಸಾಗಾಣಿಕೆ ನಿಯಮ ಬಾಹಿರವಾಗಿದೆ ಎಂದು ಯಾದಗಿರಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಮೀಲಿಂದ ಕುಮಾರ ಎಸ್.ಎಸ್ ಅವರು ತಿಳಿಸಿದ್ದಾರೆ.
ಬಸ್ ಹಾಗೂ ಇನ್ನಿತರೆ ವಾಹನಗಳಲ್ಲಿ ಸ್ಪೋಟಕ ವಸ್ತುಗಳ ಸಾಗಾಣಿಕೆ ನಿಯಮಬಾಹಿರವಾಗಿದ್ದು, ಈಗಾಗಲೇ ಕೇಂದ್ರ ಕಛೇರಿಯಿಂದ ಆದೇಶಿಸಿರುವ ಹಿನ್ನೆಲೆಯಲ್ಲಿ ಈಗಾಗಲೇ ಕಛೇರಿ ಮೋಟಾರು ವಾಹನ ನಿರೀಕ್ಷಕರು ಪ್ರವರ್ತನ ಕಾರ್ಯ ಮುಂದುವರೆಸಿರುತ್ತಾರೆ.
ಸಾರ್ವಜನಿಕರು ನಿಯಮಬಾಹಿರವಾಗಿ ಸಾರ್ವಜನಿಕ ವಾಹನಗಳಲ್ಲಿ ಹಾಗೂ ಇನ್ನಿತರೆ ವಾಹನಗಳಲ್ಲಿ ಸ್ಪೋಟಕ ವಸ್ತುಗಳನ್ನು ನಿಯಮಬಾಹಿರವಾಗಿ ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದಲ್ಲಿ ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.