ಗುರುಮಠಕಲ್ : ಪರಿಶಿಷ್ಟ ಜಾತಿಗಳ ಒಳ ಮೀಸಲಿಗೆ ಮೇ.5 ರಿಂದ ಪ್ರಾರಂಭವಾಗುವ ಜಾತಿ ಗಣತಿಯಲ್ಲಿ ಮಾದಿಗ ಸಮುದಾಯ ಜನರು ಬೇರೆ ಬೇರೆ ಹೆಸರುಗಳನ್ನು ನಮೂದಿಸಿದೇ ಮಾದಿಗ ಎಂದು ಕಲಂ 61ರಲ್ಲಿ ನಮೂದಿಸಬೇಕೆಂದು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಉಪಾಧ್ಯಕ್ಷ ಆಶನ್ನ ಬುದ್ಧ  ಮನವಿ ಮಾಡಿದರು.

ಮಾಧ್ಯಮಗೋಷ್ಟಿ ಉದ್ದೇಶೀಸಿ ಮಾತನಾಡಿ, ಮಂದಕೃಷ್ಣ ಮಾದಿಗ ನೇತೃತ್ವದಲ್ಲಿ ಕಳೆದ 30 ವರ್ಷಗಳಿಂದ ನಡೆಸಿದ ಹೋರಾಟ ಫಲವಾಗಿ ಒಳಮೀಸಲು ಜಾತಿ ಸಮೀಕ್ಷೆಗೆ ಸುಪ್ರಿಂಕೋರ್ಟ ತೀರ್ಪಿನ ಮೇರೆಗೆ ರಾಜ್ಯ ಸರ್ಕಾರ ಮುಂದಾಗಿದೆ.

ನ್ಯಾಯಮೂರ್ತಿ ನಾಗಮೋಹನ ದಾಸ್ ನೇತೃತ್ವದ ಏಕ ಸದಸ್ಯ ಆಯೋಗದಿಂದ ಜಾತಿ ಸಮೀಕ್ಷೆ

ಮೇ.5 ರಿಂದ 17 ವರೆಗೆ ನಡೆಯಲಿದೆ. ಸಮಾಜ ಬಾಂಧುವರು ಆದಿ ದ್ರಾವಿಡ, ಆದಿ ಕರ್ನಾಟಕ, ಹರಿಜನ, ಎಸ್ಸಿ ಎಂದೆಲ್ಲ ಬರೆಸದೆ ಬರಿ ಮಾದಿಗ ಎಂದು ನಮೂದಿಸಬೇಕು ಸಮಾಜದ ಬಂದವರಲ್ಲಿ ಮನವಿ ಮಾಡಿದ್ದಾರೆ

ಅಧಿಕಾರಿಗಳು ಮನೆ ಮನೆಗೆ ಬರುವ ಗಣತಿದಾರರಿಗೆ ಸಮಾಜದ ವಿದ್ಯಾರ್ಥಿಗಳು, ವಿದ್ಯಾವಂತರು ಸರಿಯಾದ ಮಾಹಿತಿ ದಾಖಲಿಸಲು ಸಹಕರಿಸಬೇಕೆಂದು

ಮನವಿ ಮಾಡಿದರು. ಈಗಾಗಲೇ ಸಮಿತಿಯಂದ ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುವಕೆಲಸ ಮಾಡಲಾಗುತ್ತಿದೆ. ಗಣತಿ ನಡೆಯುವರೆಗೆ ಗ್ರಾಮಗಳ ಲ್ಲಿಯೇ ಇದ್ದು ಮಾಹಿತಿ ನೀಡಬೇಕೆಂದು ಮನವಿ ಮಾಡಿದರು.

ಗುರುಮಠಕಲ್ ಮಾದಿಗ ದಂಡೋರ ತಾಲೂಕು ಅಧ್ಯಕ್ಷ ರವಿ ಬುರನೋಳ್, ಬಾಬು ಜಗಜೀವನ್ ರಾಮ್ ಅಧ್ಯಕ್ಷ ಭೀಮಶಪ್ಪ ಕೆಳಮನಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!