ಚಿಂಚೋಳಿ: ಪಟ್ಟಣದ ನಿವಾಸಿ ಅರ್ಕಿಟೆಕ್ಟ್ ಸಂತೋಷ ಕುಮಾರ್ ಸುಂಕದ ಅವರು ಸತತ ಐದನೇ ಬಾರಿಯು ಅತ್ಯುತ್ತಮ ಕಟ್ಟಡ ವಿನ್ಯಾಸಕ್ಕಾಗಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರತಿಷ್ಠಿತ ಇನಿಂಡಿಯನ್ ಕಾಂಕ್ರೀಟ್ ಇನ್ಸ್ಟಿಟ್ಯೂಟ್ ಹಾಗೂ ಅಲ್ಟ್ರಾಟಕ್ ಸಿಮೆಂಟ್ ವತಿಯಿಂದ ಆಯೋಜಿಸಲಾಗಿರುವ ಅತ್ತ್ಯುತ್ತಮ ಕಟ್ಟಡ ವಿನ್ಯಾಸಕ್ಕೆ ಪ್ರಶಸ್ತಿ ಸಂದಿದೆ.

ಇತ್ತೀಚೆಗೆ ಹುಬ್ಬಳ್ಳಿ ಯಲ್ಲಿ ಪ್ರಶಸ್ತಿ ಸ್ವೀಕರಿಸಿದರು. ಉತ್ತರ ಕರ್ನಾಟಕದ 16 ಜಿಲ್ಲೆಯ ಆರ್ಕಿಟೆಕ್ಟ್ ಹಾಗೂ ಅಭಿಯಂತರರು, ಗುತ್ತಿಗೆದಾರರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಅರ್ಕಿಟೆಕ್ಟ್ ಸುಂಕದ ಅವರು ಸತತವಾಗಿ 2017-18-19 ರಲ್ಲಿ ಪಡೆದ ಹ್ಯಾಟ್ರಿಕ್ ನಂತರದ ಅವಾರ್ಡ್ ಇದಾಗಿದ್ದು, ಇವರ ವಿಭಿನ್ನ ವಿನ್ಯಾಸ ಗಳು ಜನಮನ ಸೆಳೆಯುತ್ತವೆ. ಪ್ರಕೃತಿ ದತ್ತವಾದ ವಿನ್ಯಾಸವು ಗಾಳಿ ಬೆಳಕು ಪಂಚತಂತ್ವಗಳ ಆಧಾರದ ಮೇಲೆ ರೂಪುಗೊಂಡಿದ್ದು, ಬರಿ ಮನೆಗಳು ಅಲ್ಲದೆ, ವಾಣಿಜ್ಯ ಕಟ್ಟಡ. ಎಜುಕೇಷನ್ ಇನ್ಸ್ಟಿಟ್ಯೂಟ್, ಕಲ್ಯಾಣ ಮಂಟಪ ಇತ್ಯಾದಿ ಕಟ್ಟಡ ಗಳ ವಿನ್ಯಾಸ ದಲ್ಲಿ ತೊಡಗಿಸಿ ಕೊಂಡಿದ್ದಾರೆ.

ಸಂತೋಷ್ ಸುಂಕದ ಅವರು ಬೀದರ್ ಅಲ್ಲದೆ ನೆರೆಯ ರಾಜ್ಯ ಹಾಗೂ ನೆರೆಯ ದ್ವೀಪ ರಾಷ್ಟ್ರ ವಾದ ಶ್ರೀಲಂಕಾದಲ್ಲಿ ಕೂಡ ತಮ್ಮ ವಿನ್ಯಾಸದ ಕೊಡುಗೆಯನ್ನು ನೀಡಿದ್ದಾರೆ. ಸೈ ಎನಿಸಿಕೊಂಡಿದ್ದಾರೆ.

ಅವಳಿ ಪಟ್ಟಣದ ಜನತೆ ಹರ್ಷ :ಹಿಂದುಳಿದ ಕ್ಷೇತ್ರದ ಯುವ ಪ್ರತಿಭೆ ರಾಜ್ಯ,ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಕ್ಷೇತ್ರದ ಗರಿಮೆ, ಹಿರಿಮೆ ಹೆಚ್ಚಿಸುತ್ತಿದ್ದು, ಇಂತಹ ನೂರಾರು ಪ್ರಶಸ್ತಿಗಳು ಲಭಿಸಲಿ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರಥಮ ಪ್ರಶಸ್ತಿಗೆ ಸಾಕ್ಷಿ:  ಪ್ರಸ್ತುತ ಬೀದರ್ ನಗರದಲ್ಲಿ ವಿನ್ಯಾಸ ಮಾಡಿರುವ ಅಶೋಕ್ ಭೈರ ಅವರ ಮನೆಗೆ ಪ್ರಶಸ್ತಿ ದೊರೆತಿದೆ. ಅವರು ಮನೆಯ

ಅಂದ ಹಾಗೂ ಒಳಾಂಗಣ ವಿನ್ಯಾಸವು. ಸುಂದರವಾಗಿ ಮೂಡಿಬಂದಿದ್ದು,ಸೂರ್ಯಾಸ್ತ ವಾಗುವರೆಗೆ ಮನೆಯಲ್ಲಿ ವಿದ್ಯುತ ದೀಪಗಳ ಅಗತ್ಯ ವಿರುವುದಿಲ್ಲ. ಹವಾನಿಯಂತ್ರತ ವ್ಯವಸ್ಥೆ (corbon emmision)ಆದಷ್ಟು ಕಡಿಮೆ ಯಾಗುವಂತೆ ವಿನ್ಯಾಸ ಗೊಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!