ದೀಪಾವಳಿಯ ಶುಭ ಸಂದರ್ಭದಲ್ಲಿ ಆರಂಭಗೊಂಡ ಯಾದಗಿರಿ ಧ್ವನಿ ಡಿಜಿಟಲ್ ಮಾಧ್ಯಮವು ದೀಪಾವಳಿ ವಿಶೇಷ ವರದಿ ಮಾಡಿದೆ. ದೀಪಗಳ ಹಬ್ಬ ನಾಡಿನ ಪ್ರತಿಯೊಬ್ಬರ ಕಷ್ಟಗಳನ್ನು ದೂರ ಮಾಡಿ ಬೆಳಕು ನೀಡಲಿ ಎಂದು ಹಾರೈಸುತ್ತೆವೆ….
ಯಾದಗಿರಿ: ದೀಪಾವಳಿಯನ್ನು ಹಿಂದೂ ಚಾಂದ್ರಮಾನ ತಿಂಗಳು ಅಶ್ವಿನ ಮತ್ತು ಕಾರ್ತಿಕ ಮಾಸ ಅಂದರೆ ಅಕ್ಟೋಬರ್ ಮತ್ತು ನವೆಂಬರ್ ಮಧ್ಯೆ ಆಚರಿಸಲಾಗುತ್ತದೆ.
ಇದು ಸಾಮಾನ್ಯವಾಗಿ ಅಕ್ಟೋಬರ್ ಮತ್ತು ನವೆಂಬರ್ ಮಧ್ಯದ ನಡುವೆ ಬರುತ್ತದೆ. ಈ ಬಾರಿ ಬೆಳಕಿನ ಹಬ್ಬವನ್ನು ನವೆಂಬರ್ 1 ರಂದು ಶುಕ್ರವಾರ ಆಚರಿಸಲಾಗುತ್ತದೆ. ಅ.29 ರಂದು ಧನತೇರಸ್, 31 – ನರಕ ಚತುದರ್ಶಿ ಹಾಗೂ ನವೆಂಬರ್ 1 ದೀಪಾವಳಿಯನ್ನು ನಮ್ಮ ಭಾಗದಲ್ಲಿ ಆಚರಿಸುವ ವಾಡಿಕೆಯಿದೆ.
ಹೌದು, ದೀಪಾವಳಿ ಎಂದರೆ, ಕೇವಲ ದೀಪ ಬೆಳಗಿ, ಪೂಜೆ ಮಾಡಿ, ಪಟಾಕಿ ಸಿಡಿಸುವುದು ಅಷ್ಟೇ ಅಲ್ಲ. ಇಂದಿನ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿ ರುವ ದಿನಮಾನಗಳಲ್ಲಿ ಪ್ರತಿಯೊಬ್ಬರು ಹಿಂದು ಹಬ್ಬಗಳ ಆಚರಣೆ ಮತ್ತು ಮಹತ್ವ ಮುಂದಿನ ಪೀಳಿಗೆಗೆ ಪರಿಚಯಿ ಸುವ ಅಗತ್ಯವಿದೆ ಎಂದೆನಿಸದೇ ಇರದು.
ದೀಪಾವಳಿ ಇತಿಹಾಸ: ದೀಪಾವಳಿಯು ಸಂಭ್ರಮ, ಸಡಗರದ ಬೆಳಕಿನ ಹಬ್ಬ. ಇದು ಪ್ರಾಚೀನ ಇತಿಹಾಸವನ್ನು ಹೊಂದಿರುವ ಹಬ್ಬಗಳಲ್ಲಿ ಪ್ರಮುಖವಾದುದ್ದಾಗಿದೆ. ರಾಮಾಯಣ ಕಾಲದಿಂದ ಆರಂಭವಾಯಿತೆಂದು ಹೇಳಲಾಗುತ್ತದೆ. ರಾಮ, ಲಕ್ಷ್ಮಣ ಮತ್ತು ಸೀತೆಯು 14 ವರ್ಷಗಳ ವನವಾಸವನ್ನು ಕಳೆದು ನಾಡಿಗೆ ಹಿಂದಿರುಗಿದಾಗ ಜನರು ಸಂತೋಷದಿಂದ ತಮ್ಮ ಮನೆಗಳಲ್ಲಿ ದೀಪವನ್ನು ಬೆಳಗುವ ಮೂಲಕ ಅವರನ್ನು ನಾಡಿಗೆ ಬರಮಾಡಿಕೊಂಡರು ಎಂದು ಹೇಳಲಾಗುತ್ತದೆ. ಅಂದಿನಿಂದ ದೀಪಾವಳಿಯನ್ನು ಆಚರಿಸಲಾಗುತ್ತಿದೆ.
ದಕ್ಷಿಣ ಭಾರತದಲ್ಲಿ ದೀಪಾವಳಿಯು ನರಕಾಸುರನ ಮೇಲೆ ಶ್ರೀಕೃಷ್ಣನ ವಿಜಯವನ್ನು ಸೂಚಿಸುತ್ತದೆ. ಅವನ ಸೋಲು ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯವನ್ನು ಪ್ರತಿನಿಧಿಸುತ್ತದೆ ಮತ್ತು ನಕಾರಾತ್ಮಕತೆಯನ್ನು
ಜಯಿಸಿದ ನಂತರ ಹೊಸ ಆರಂಭವನ್ನು ಸೂಚಿಸುತ್ತದೆ. ಈ ಕಾರಣಕ್ಕಾಗಿ ಈ ದಿನದಂದು ದೀಪವನ್ನು ಬೆಳಗುವ ಸಂಪ್ರದಾಯ ಆರಂಭವಾಯಿತು.
ಭಾರತದಾದ್ಯಂತ, ದೀಪಾವಳಿಯು ವಿಷ್ಣುವಿನ ದೈವಿಕ ಪತ್ನಿ ಮತ್ತು ಸಮೃದ್ಧಿ, ಅದೃಷ್ಟ ಮತ್ತು ಧನ, ಧಾನ್ಯದ ಸಾಕಾರಳಾದ ಲಕ್ಷ್ಮಿ ದೇವಿಗೆ ಸಂಬಂಧಿಸಿದೆ. ದೀಪಗಳನ್ನು ಬೆಳಗುವುದರಿಂದ ಲಕ್ಷ್ಮಿ ದೇವಿಯು ಮನೆಯನ್ನು ಪ್ರವೇಶಿಸುತ್ತಾಳೆ. ಧನಾತ್ಮಕತೆ ಮತ್ತು ಸಮೃದ್ಧಿಯು ಮನೆಯನ್ನು ಸೇರಿಕೊಳ್ಳುತ್ತದೆ ಎನ್ನುವ ನಂಬಿಕೆಯಿದೆ.
ಪ್ರಪಂಚದಾದ್ಯಂತ ಜನರು ಬೆಳಕಿನ ಹಬ್ಬವಾದ ದೀಪಾವಳಿಯನ್ನು ಬಹಳ ಸಂಭ್ರಮ – ಸಡಗರದಿಂದ ಆಚರಿಸುತ್ತಾರೆ. ಪ್ರತಿ ಮನೆಯಲ್ಲೂ ಜನರು ಬೆಲೆಬಾಳುವ ವಸ್ತುಗಳ ಜೊತೆಗೆ ಗಣೇಶ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ. ಪೂಜೆ ಮುಗಿದ ನಂತರ, ಭಕ್ತರು ತಮ್ಮ ನೆರೆಹೊರೆಯವರು ಮತ್ತು ಸ್ನೇಹಿತರಿಗೆ ಸಿಹಿತಿಂಡಿ ಮತ್ತು ಉಡುಗೊರೆಗಳನ್ನು ವಿತರಿಸುತ್ತಾರೆ. ಮಕ್ಕಳು ಮತ್ತು ಹಿರಿಯರು ಪಟಾಕಿಗಳನ್ನು ಸಿಡಿಸುತ್ತಾರೆ, ದೀಪಗಳನ್ನು ಬೆಳಗಿಸುತ್ತಾರೆ.
ದೀಪಾವಳಿಯ ಸಂದರ್ಭದಲ್ಲಿ ಮಹಾಲಕ್ಷ್ಮಿ ವಿಶೇಷ ಮಂತ್ರ ಜಪಿಸಿ ಶ್ರೀ ಲಕ್ಷ್ಮೀ ದೇವತೆ ಕೃಪೆಗೆ ಪಾತ್ರರಾಗಲು ಹುಕ್ಕೇರಿಯ ಆಧ್ಯಾತ್ಮಿಕ ಚಿಂತಕರಾದ ಶ್ರೀ ಶಿವಾಜಿ ಎನ್.ಬಾಲೇಶಗೋಳ ಅವರು ಯಾವ ರಾಶಿಯವರು ಯಾವ ಮಂತ್ರ ಪಠಿಸಬೇಕು ಎನ್ನುವುದನ್ನು ತಿಳಿಸಿದ್ದಾರೆ. ದೀಪಾವಳಿ ಹಬ್ಬವು ಪ್ರತಿಯೊಬ್ಬರ ಬಾಳು ಬೆಳಗಲಿ ಎಂದು ಹಾರೈಸಿದ್ದಾರೆ.
ದೀಪಾವಳಿ ದಿವಸ ಯಾವ ರಾಶಿಯವರು ಯಾವ ಮಂತ್ರ ಹೇಳಬೇಕು, ಯಾವ ವಸ್ತು ದಾನ ಮಾಡಬೇಕು…?
ಮೇಷ ರಾಶಿ : ಓಂ ಶ್ರೀ ಮಹಾಲಕ್ಷ್ಮಿ ನಮಃ
ವಸ್ತುದಾನ : 5 ಕೆಂಪು ಗುಲಾಬಿ ಹೂವನ್ನು ದಾನ ಮಾಡಬೇಕು ದೇವಸ್ಥಾನಕ್ಕೆ.
ವೃಷಭ : ಓಂ ಹ್ರೀಂ ಕ್ಲಿಂ ವಿತ್ತೆಶ್ವರಾಯ ನಮಃ
ವಸ್ತುದಾನ : ಸುಗಂಧವಾದ ಅಗರಬತ್ತಿಯನ್ನು ದೇವಸ್ಥಾನಕ್ಕೆ ಕೊಡಬೇಕು.
ಮಿಥುನ : ಓಂ ಗಂ ಗಣಪತಿಯೇ ನಮಃ
ವಸ್ತುದಾನ : ಒಂದು ಕೆ. ಜಿ. ಕಲ್ಲು ಉಪ್ಪವನ್ನು ದೇವಸ್ಥಾನಕ್ಕೆ ದಾನ ಮಾಡಬೇಕು.
ಕರ್ಕ : ಓಂ ಶ್ರೀ ಮಹಾಲಕ್ಷ್ಯೆ ಚ ವಿದ್ಮಹೆ ವಿಷ್ಣು ಪತ್ರೈ ಚ ಧಿಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್ ಓಂ.
ವಸ್ತುದಾನ : ಕೆಂಪು ಗುಲಾಬಿ ಹೂವಿನ ಹಾರವನ್ನು ದಾನ ಮಾಡಬೇಕು.
ಸಿಂಹ : ಓಂ ಶ್ರೀ ಶ್ರೀಯೇ ನಮಃ
ವಸ್ತುದಾನ : ಅರಶಿಣ ಕುಂಕುಮ ಮತ್ತು ಚಂದನದ ಅಗರಬತ್ತಿ ದಾನ ಮಾಡಬೇಕು.
ಕನ್ಯಾ : ಓಂ ಹ್ರೀಂ ಶ್ರೀಂ ಕ್ಲಿಂ ಮಹಾಲಕ್ಷ್ಮಿ ನಮಃ
ವಸ್ತುದಾನ : ಕೇಸರಿ ಡಬ್ಬಿಯನ್ನು ದಾನ ಮಾಡಬೇಕು ದೇವಸ್ಥಾನಕ್ಕೆ.
ತುಲಾ : ಓಂ ಹ್ರೀಂ ಶ್ರೀಂ ಲಕ್ಷ್ಮಿಭ್ಯೋ ನಮಃ
ವಸ್ತುದಾನ : ಕೆಂಪು ಗುಲಾಬಿ ಹೂವನ್ನು ದೇವಸ್ಥಾನಕ್ಕೆ ದಾನ ಮಾಡಬೇಕು ಸುಗಂಧಿತವಾದ ಅಗರಬತ್ತಿ ಕೊಡಬೇಕು.
ವೃಶ್ಚಿಕ : ಓಂ ಶ್ರೀ ಮಹಾಲಕ್ಷ್ಮಿಯ್ಯ ನಮಃ
ವಸ್ತುದಾನ : ಕಲ್ಲು ಉಪ್ಪುವನ್ನು ದೇವಸ್ಥಾನಕ್ಕೆ ದಾನ ಮಾಡಬೇಕು.
ಧನುಷ : ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸಿದ ಪ್ರಸಿದ ಓಂ ಶ್ರೀಂ ಹ್ರೀಂ ಶ್ರೀಂ ಮಹಾ ಲಕ್ಷ್ಮಯೇ ನಮಃ
ವಸ್ತುದಾನ : 5 ಗುಲಾಬಿ ಹೂವನ್ನು ದೇವಸ್ಥಾನಕ್ಕೆ ಕೊಡಬೇಕು.
ಮಕರ : ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸಿದ ಪ್ರಸಿದ ಸಕಲ ಸೌಭಾಗ್ಯಂ ದೇಹಿ ದೇಹಿ ಓಂ ಹ್ರೀಂ ಶ್ರೀಂ ಓಂ ಮಹಾ ಲಕ್ಷ್ಮಿಯ್ಯ ನಮಃ
ವಸ್ತುದಾನ : ಒಂದು ಕೆ. ಜಿ. ಉದ್ದಿನ ಬೆಳೆ, ಒಂದು ಕೆ. ಜಿ. ಕಡಲೆ ಬೆಳೆ ಮತ್ತು 11 ರೂಪಾಯಿಯನ್ನು ದೇವಸ್ಥಾನಕ್ಕೆ ದಾನ ಮಾಡಬೇಕು.
ಕುಂಭ : ಓಂ ಶ್ರೀಂ ಶ್ರೀಯೇ ನಮಃ
ವಸ್ತುದಾನ : ಅಡಿಕೆ ಎಲೆ ಮತ್ತು ಸುಗಂಧ ಬರಿತ ಅಗರಬತ್ತಿಯನ್ನು ದಾನ ಮಾಡಬೇಕು.
ಮೀನ : ಶ್ರೀಂ ಮಂತ್ರ ಪಠಿಸಬೇಕು.