100 ವರ್ಷ ಪೂರೈಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ | ಶತಮಾನೋತ್ಸವದಲ್ಲಿ ಪ್ರಧಾನಮಂತ್ರಿ ಮೋದಿ, ದೆಹಲಿ ಮುಖ್ಯಮಂತ್ರಿ ಭಾಗಿ

ದೆಹಲಿ : ರಾಷ್ಟ್ರೀಯ ಸ್ವಯಂ ಸೇವಕ ಸಂಘವು 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಆಯೋಜಿಸಿದ್ದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಶೇಷ ಅಂಚೆಚೀಟಿ ಹಾಗೂ 100ರೂಪಾಯಿ ಮುಖಬೆಲೆಯ ನಾಣ್ಯ ದಲ್ಲಿ ಒಂದೆಡೆ 100ರೂ. ಹಿಂಬದಿ ಸಂಘದ ಸ್ವಯಂಸೇವಕರು ಭಾರತ ಮಾತೆಗೆ ನಮಿಸುವ ಚಿತ್ರ ಹೊಂದಿರುವ ನಾಣ್ಯ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, 2047ರ ಭಾರತವು ತತ್ವಜ್ಞಾನ ಮತ್ತು ವಿಜ್ಞಾನ, ಸೇವೆ ಸಮೃದ್ಧವಾಗಿ ಬೇರೂರಿರುವ ಭವ್ಯ ಭಾರತವಾಗಲಿದೆ. ಇದು ಸಂಘದ ದೃಷ್ಟಿಕೋನ ಮತ್ತು ನಮ್ಮ ಸಂಕಲ್ಪವಾಗಿದೆ ಎಂದರು.

ಸಂಘವು ರಾಷ್ಟ್ರದ ಮೇಲಿನ ಅಚಲ ನಂಬಿಕೆಯೊಂದಿಗೆ ರೂಪುಗೊಂಡಿದೆ ಎಂಬುದನ್ನು ನಾವು ಯಾವಾಗಲೂ ನೆನಪಿನಲ್ಲಿಡಬೇಕು. ಸಂಘವು ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಮನೋಭಾವದಿಂದ ನಡೆಸಲ್ಪಡುತ್ತದೆ. ತ್ಯಾಗ ಮತ್ತು ತಪಸ್ಸು, ಸಂಸ್ಕೃತಿ ಮತ್ತು ಸಾಧನೆಯ ಸಂಗಮದಲ್ಲಿ ನಿಂತಿದೆ ಎಂದು ಬಣ್ಣಿಸಿದರು. ರಾಷ್ಟ್ರೀಯ ಧರ್ಮವನ್ನು ಜೀವನದ ಅಂತಿಮ ಧರ್ಮವೆಂದು ಪರಿಗಣಿಸಿ, ಭಾರತ ಮಾತೆಗೆ ಸೇವೆ ಸಲ್ಲಿಸುವ ಮಹಾನ್ ಪ್ರಯತ್ನವು ಸಂಘದ ಆದರ್ಶವಾಗಿದೆ. ಸಂಸ್ಕೃತಿಯ ಬೇರುಗಳು ಆಳವಾದ ಮತ್ತು ಬಲವಾಗಿಸುವುದು, ಆತ್ಮ ವಿಶ್ವಾಸ ಮತ್ತು ಸ್ವಾಭಿಮಾನವು ಬೆಳೆಸುವುದು ಸಂಘದ ಗುರಿಯಾಗಿದೆ.

ಪ್ರತಿಯೊಂದು ಹೃದಯದಲ್ಲಿ ಸಾರ್ವಜನಿಕ ಸೇವೆಯ ಬೆಳಕು ಪ್ರಜ್ವಲಿಸುವಂತೆ ಮಾಡುವುದು ಸಂಘದ ದೃಷ್ಟಿಕೋನವಾಗಿದೆ. ಭಾರತೀಯ ಸಮಾಜವು ಸಾಮಾಜಿಕ ನ್ಯಾಯ ಒದಗಿಸುವುದು ಅಲ್ಲದೆ ಭಾರತದ ಭವಿಷ್ಯವು ಸುರಕ್ಷಿತ ಮತ್ತು ಉಜ್ವಲವಾಗಿರಬೇಕು ಎಂಬುದು ಸಂಘದ ಸಂಕಲ್ಪವಾಗಿದೆ ಎಂದರು.

ಈ ವೇಳೆ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಸೇರಿದಂತೆ ಸಂಘದ ಪ್ರಮುಖರು, ಗಣ್ಯರು ಭಾಗವಹಿಸಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!