ಹುಬ್ಬಳ್ಳಿ – ಧಾರವಾಡ ಎಸ್ ಎಸ್ ಕೆ ಸಮಾಜ ಮಹಾಸಭಾ ದಿಂದ ಗದಗ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ | ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ

ಗದಗ: ಗಜೇಂದ್ರಗಡದಲ್ಲಿ ಇತ್ತೀಚೆಗೆ ಅಮಾಯಕ ವಿದ್ಯಾರ್ಥಿನಿಯೊಬ್ಬಳು ಲವ್ ಜಿಹಾದ್ ಗೆ ಬಲಿಯಾಗಿದ್ದು, ಅಮಾಯಕ ಬಾಲಕಿಯು ತನಗೆ ಆಗಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡಿ ಕಿರುಕುಳದಿಂದ ಕೊನೆ ಕ್ಷಣದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಯುವತಿ ಸಾವಿಗೆ ಕಾರಣವಾದ ದುರುಳರನ್ನು ತಕ್ಷಣ ಬಂಧಿಸಿ ಕ್ರಮವಹಿಸಬೇಕು ಎಂದು ಎಸ್ ಎಸ್ ಕೆ ಸಮಾಜದ ಪ್ರಮುಖರು ಒತ್ತಾಯಿಸಿದ್ದಾರೆ.

ಗೌರವಾಧ್ಯಕ್ಷ ವಿಠ್ಠಲಸಾ. ಪಿ ಲದ್ವಾ ಇವರ ನೇತೃತ್ವದಲ್ಲಿ  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿ, ವಿದ್ಯಾರ್ಥಿನಿ ಸಾವಿಗೆ ಕಾರಣಿ ಕರ್ತರಾದಂತಹ ಸಮಾಜ ದ್ರೋಹಿ, ಆಗುಂತಕ ರನ್ನು ಬಂಧಿಸಿ, ಅವರ ವಿರುದ್ಧ ಕಠಿಣ ಕ್ರಮ ವಹಿಸಲು ಹುಬ್ಬಳ್ಳಿ ಧಾರವಾಡ ಎಸ್ ಎಸ್ ಕೆ ಸಮಾಜ ಮಹಾಸಭಾ ಆಗ್ರಹಿಸಿ, ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಹು- ಧಾ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ನಾಗೇಶ್ ಕಲಬುರ್ಗಿ, ರಾಜ್ಯ ಎಸ್ ಎಸ್ ಕೆ ಸಮಾಜ ಅಭಿವೃದ್ಧಿ ಹೋರಾಟ ಸಮಿತಿ ಸಂಚಾಲಕ ಹನುಮಂತಸಾ C.ನಿರಂಜನ್,  ಈಶ್ವರಸಾ ಮೆಹರವಾಡೆ, ಯಲ್ಲಪ್ಪ ಬದ್ದಿ, ಕಿಶೋರ್ ಜಿತೂರಿ, ರಾಜೇಶ ಜಡಿ, ಬ್ಯಾಂಕಿನ ನಿರ್ದೇಶಕ ಪ್ರಕಾಶ ಬುರಬುರೆ,  ಗುರುನಾಥ್ ರಾಯಬಾಗಿ, ದೇವದಾಸ್ ಹಬೀಬ,  ವಿಜಯ ಕಲ್ಬುರ್ಗಿ, ಲಕ್ಷ್ಮಣ್ ಸಿಂಗ್ರಿ, ವೆಂಕಟೇಶ್ ಕಾಟವೇ,  ವಿನಾಯಕ್ ಲದ್ವಾ,  ಪ್ರವೀಣ್ ಪವಾರ್,  ಸುಧೀರ್ ಕಾಟಿಗರ್,  ಬಾಬು ಬಾಕಳೆ, ಸದು ಕಬಾಡೆ, ಅಕ್ಷಯ್ ಬದ್ದಿ,  ದೀಪಕ್ ಜಿತೂರಿ, ಸಂಜು ಖಟವಾಟೆ, ನಾರಾಯಣ ನಿರಂಜನ್, ಪ್ರಶಾಂತ ಶಿಗ್ರಿ, ಮಂಜು ಉಟವಾಲೆ, ಪವನ್ ಜರತಾರಘರ,  ನಾರಾಯಣ ಹಬೀಬ, ಅಮೃತ್ ಪವಾರ್ ಹಾಗೂ ಗದಗ,  ಬೆಟಗೇರಿ ,ಗಜೇಂದ್ರಗಡ ಪಂಚಾಯತ ಪ್ರಮುಖರು, ಯುವ ಮುಖಂಡರು ಮತ್ತು ನೂರಾರು ಸಮಾಜದವರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!