ಗುರುಮಠಕಲ್: ಯಾದಗಿರಿ ಜಿಲ್ಲೆಯ ಗುರುಮಠಕಲ್ ಪುರಸಭೆ ಆಶ್ರಯ ಸಮಿತಿಗೆ ನಾಮನಿರ್ದೇಶಿತ ಸದಸ್ಯರಾಗಿ 4 ಜನ ಸದಸ್ಯರು ಆಯ್ಕೆಯಾಗಿದ್ದಾರೆ.

ಇವರಲ್ಲಿ ಸಾಮಾನ್ಯ ವರ್ಗದ ಮಹಿಳಾ ಕೋಟದಡಿ ವಸಂತರಾವ ಹಬೀಬ ಅವರ ಪತ್ನಿ ಅನಿತಾ ಅವರನ್ನು ಆಯ್ಕೆಗೊಳಿಸಿ ವಸತಿ ಇಲಾಖೆಯ ಸರ್ಕಾರದ ಆಧಿನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಸೋಮವಂಶ ಸಹಸ್ತ್ರಾರ್ಜುನ ಕ್ಷತ್ರೀಯ ಸಮಾಜದ ಕಾಂಗ್ರೆಸ್ ಹಿರಿಯ ಕಾರ್ಯಕರ್ತರಾದ ವಸಂತರಾವ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್ ಅವರಿಗೆ ಅತ್ಯಾಪ್ತರಾಗಿದ್ದಾರೆ.

ಸನ್ಮಾನ: ಆಶ್ರಯ ಸಮಿತಿಗೆ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಅನಿತಾ ಹಬೀಬ ಅವರಿಗೆ ಎಸ್ ಎಸ್ ಕೆ ಸಮಾಜದ ಯುವಕರು, ಪ್ರಮುಖರು ಪಕ್ಷಾತೀತವಾಗಿ ಸನ್ಮಾನಿಸಿ ಅಭಿನಂದಿಸಿದರು. ಈ ವೇಳೆ ಡಾ. ಯಶವಂತ ಮೇಂಗಜಿ, ನರೇಶ್ ಗೊಂಗಲೆ, ಯಶವಂತ ರಾವ್ ಚೌಧರಿ, ಸತೀಶ್ ಜೀತ್ರಿ, ಹಣಮಂತರಾವ ಶ್ರೀಗಿರಿ, ವಿಜಯ ಮೇಂಗಜಿ, ಸಂಜೀವ ಕುಮಾರ್ ಹಬೀಬ್, ಶ್ರೀನಿವಾಸ ಅರಸಿದ್, ನರೇಶ್ ಗೊಂಗಲೆ, ಪತ್ರಕರ್ತ ಅನೀಲ ಬಸೂದೆ, ನರಸಿಂಗರಾವ್ ಜೀತ್ರಿ, ಭರತ ಜೀತ್ರಿ, ಮಹೇಶ್ ಹಬೀಬ್ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!