ಗುರುಮಠಕಲ್: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ವಿಭಾಗದಲ್ಲಿ ೧೯೮೪-೮೫ ಸಾಲಿನ ಎಸ್‌ಎಸ್‌ಎಲ್‌ಸಿ ಬ್ಯಾಚ್ ವಿದ್ಯಾರ್ಥಿಗಳಿಂದ ಆಯೋಜಿಸಿದ ಗುರುವಂದನಾ ಕಾರ್ಯಕ್ರಮ ಮತ್ತು ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಹೆಚ್. ಓ. ಮಂಜುನಾಥ ಉದ್ಘಾಟಿಸಿದರು.
ಪೂಜ್ಯ ಶಾಂತವೀರ ಗುರುಮುರುಘರಾಜೇಂದ್ರ ಶ್ರೀಗಳು ಸಾನಿಧ್ಯವಹಿಸಿದ್ದರು. ಪ್ರಮುಖರಾದ ಸಿಪಿಐ ದೇವಿಂದ್ರಪ್ಪ ಧೂಳಖೇಡ, ಕೃಷ್ಣಾರೆಡ್ಡಿ ಪಾಟೀಲ್, ಬಸವರಾಜ ಬೂದಿ, ಅಖಂಡೇಶ್ವರ ಸ್ವಾಮಿ ಹಿರೇಮಠ, ಕಾರ್ಯಕ್ರಮದ ಅಧ್ಯಕ್ಷತೆ ಪಾಪಣ್ಣ ಮನ್ನೆ ವಹಿಸಿದ್ದರು. ಪ್ರಮುಖರಾದ ನರಸರೆಡ್ಡಿ ಪಾಟೀಲ್ ಗಡ್ಡೇಸೂಗೂರ, ವೆಂಕಟಪ್ಪ ಕಲಾಲ್, ಬುಡ್ಡಪ್ಪ ಜನಾರ್ಧನ, ನಾಗಭೂಷಣ ಆವುಂಟಿ ಇನ್ನಿತರರಿದ್ದರು.