ಪ್ರಾಂಗಣದಲ್ಲಿ ನೀರಿನ ಟ್ಯಾಂಕ್ ಬೇಕು ಎಂದ ಹಿರಿಯ ಕಾಂಗ್ರೆಸ್ ಮುಖಂಡ | ಅಭಿವೃದ್ಧಿಗೆ ಸಹಕರಿಸಿ, ಕಾಲೆಳೆಯುವುದು ಬಿಡಿ | 1 ಕೋಟಿ ವೆಚ್ಚದ ಮುಚ್ಚು ಹರಾಜು ಕಟ್ಟೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕರು
ಗುರುಮಠಕಲ್: 50 ವರ್ಷಗಳಿಂದ ಆಗದ ಅಭಿವೃದ್ಧಿ ಕಾಮಗಾರಿಗಳು ಮಾಡಲಾಗುತ್ತಿದೆ. ಅಭಿವೃದ್ಧಿಗೆ ಸಹಕರಿಸುವ ಬದಲು ಕಾಲೆಳೆಯುವ ಕಾರ್ಯ ಮಾಡಬಾರದು. ಎಲ್ಲರೂ ಸಹಕರಿಸಬೇಕು ಎಂದು ಶಾಸಕ ಶರಣಗೌಡ ಕಂದಕೂರ ಮನವಿ ಮಾಡಿದರು.
ಪಟ್ಟಣದ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಮುಚ್ಚು ಹರಾಜು ಕಟ್ಟೆ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
2023-24ನೇ ಸಾಲಿನ ನಬಾರ್ಡ್ ಯೋಜನೆಯಡಿ 1 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.

ತಮ್ಮ ತಂದೆ ಮಾಜಿ ಶಾಸಕರಾದ ದಿ. ನಾಗನಗೌಡ ಕಂದಕೂರ ಅವರ ಅವಧಿಯಲ್ಲಿ ಸಾಕ ಷ್ಟು ಅಭಿವೃದ್ಧಿ ಮಾಡಲಾಗಿದೆ. ₹ 5 ಕೋಟಿ ವೆಚ್ಚದ ವೇ ಬ್ರಿಡ್ಜ್ ಬೇಡಿಕೆ ಇದೆ. ಗುರುಮಠಕಲ್, ಸೈದಾಪುರದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ನಮ್ಮ ಭಾಗದ ರೈತರಿಗೆ ಅನುಕೂಲ ಆಗುವ ದೃಷ್ಟಿಯಿಂದ ಶ್ರಮ ವಹಿಸಲಾಗುತ್ತದೆ. ಹಿಂದೆ ರೈತ ಭವನ ಮಾಡಿದ್ದಾರೆ. ವ್ಯಾಪಾರಿಗಳ ಸಲಹೆ ಪಡೆದು ಅಭಿವೃದ್ಧಿ ಕಾರ್ಯ ಮಾಡಲಾಗುವುದು. ರೈತರ ಅನುಕೂಲಕ್ಕಾಗಿ ಏನು ಬೇಕೋ ಮಾಡುವೆ ಎಂದರು.
ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಶುಭಾಷ ಕಟಕಟೆ, ಪುರಸಭೆ ಅಧ್ಯಕ್ಷೆ ಜಯಶ್ರೀ ಪಾಟೀಲ್, ಜಿ. ತಮ್ಮಣ್ಣ, ಶರಣು ಆವಂಟಿ, ಮಲ್ಲಿಕಾರ್ಜುನ ಅರುಣಿ, ಪ್ರಕಾಶ ನೀರೆಟಿ, ಅಶೋಕ ಕಲಾಲ್, ಆಶನ್ನ ಬುದ್ಧ, ರವಿ ಪಾಟೀಲ್, ಅಂಬಾದಾಸ ಜೀತ್ರಿ, ಈಶ್ವರ ನಾಯಕ, ಪಿಐ ದೇವೀಂದ್ರಪ್ಪ ಧೂಳಖೇಡ, ಭಾರತಿ ದಂಡೋತಿ, ಶಿವಕುಮಾರ ಕಾರ್ಯದರ್ಶಿ, ಎಸ್. ಎಸ್ ಜಾಗಿರದಾರ ಕಾರ್ಯನಿರ್ವಾಹಕ ಅಭಿಯಂತರ, ಪಂಡಿತ ವಾಘ್ಮೋರೆ, ರಾಕೇಶ್, ನರಸಿಂಹಲು, ರಿಯಾಜ್ ಉಲ್ ರೆಹಮಾನ್ ಅನ್ಸಾರಿ, ಇತರರು ಇದ್ದರು.
