ಮಾರ್ಚ್ 9 ರ ಸಂಜೆ ಆಗಮನ | ಅಲೆಮಾರಿ ಬುಡ್ಗಜಂಗಮ ಯುವತಿಯರ ಕುಟುಂಬಕ್ಕೆ ಸಾಂತ್ವಾನ

ಗುರುಮಠಕಲ್: ಫೆ.12ರಂದು ನೀಲಹಳ್ಳಿ ಕೆರೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವಗಳಾಗಿ ಪತ್ತೆಯಾಗಿರುವ ಗುರುಮಠಕಲ್ ಇಂದಿರಾನಗರದ ಇಬ್ಬರು ಯುವತಿಯರ ಕುಟುಂಬಗಳನ್ನು ರಾಜ್ಯ ಪ.ಜಾ.ಪ.ಪಂ.ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ. ಜಿ ಭೇಟಿ ಮಾಡಲಿದ್ದಾರೆ.

ಅಧ್ಯಕ್ಷರ ಅಧಿಕೃತ ಪ್ರವಾಸ ನಿಗದಿಯಾಗಿದ್ದು, ಶಿವಮೊಗ್ಗ ದಿಂದ ಹೊರಟು  ಮಾರ್ಚ್ 9 ರಂದು ಸಂಜೆ 4 ಗಂಟೆಗೆ ಆಗಮಿಸಿ ಕುಟುಂಬಕ್ಕೆ ಸಾಂತ್ವಾನ ಹೇಳುವರು. ಬಳಿಕ ತಾಲೂಕಿನ ಯಲಸತ್ತಿ ಗ್ರಾಮದ ಹಲ್ಲೆಗೊಳಗಾದ ಕುಟುಂಬವನ್ನು ಭೇಟಿ ಮಾಡಲಿದ್ದಾರೆ.

ಯಾದಗಿರಿಯಲ್ಲಿ ವಾಸ್ತವ್ಯ ಹೂಡಿ ಮರುದಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಮುದಾಯ ಅಹವಾಲು ಸ್ವೀಕಾರ ಮಾಡುವುದು, ನಂತರ ನಿಗಮದಿಂದ ಜಾರಿಯಾದ ಯೋಜನೆಗಳು ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸುವರು. ಬಳಿಕ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!