ಸಂಘಕ್ಕೆ ನೂತನವಾಗಿ ಅಧ್ಯಕ್ಷರಾಗಿ ಮಹಾದೇವಮ್ಮ | ಉಪಾಧ್ಯಕ್ಷರಾಗಿ ಕಾಳಪ್ಪ ವಿಶ್ವಕರ್ಮ ಆಯ್ಕೆ

ಯಾದಗಿರಿ : ಜಿಲ್ಲೆಯ ಗುರುಮಠಕಲ್ ಮತಕ್ಷೇತ್ರದ ಬದ್ದೇಪಲ್ಲಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಹಾದೇವಮ್ಮ ರಾಮುಲು ಯಾದವ್ ನೂತನ ಅಧ್ಯಕ್ಷರಾಗಿ ಹಾಗೂ ಕಾಳಪ್ಪ ವಿಶ್ವಕರ್ಮ ದುಪ್ಪಲ್ಲಿ ನೂತನ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು ಎಂದು ಸಹಕಾರ ಇಲಾಖೆ ಚುನಾವಣೆ ಅಧಿಕಾರಿ ಪ್ರಶಾಂತ ಕುಮಾರ್ ಇಡ್ಲೂರು ಪ್ರಕಟಿಸಿದರು.

ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಜೆಡಿಎಸ್ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಡಿ. ತಾಯಪ್ಪ ಬದ್ದೇಪಲ್ಲಿ, ಯುವ ಮುಖಂಡ ನರಸಪ್ಪ ಕವಡೆ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಹೂಮಾಲೆಹಾಕಿ ಸಿಹಿ ಹಂಚಿ ಸಂಭ್ರಮಿಸಿದರು.ನಂತರ ಸಂಘಕ್ಕೆ ಆಯ್ಕೆಯಾದ ನೂತನ ಅಧ್ಯಕ್ಷ, ಉಪಾಧ್ಯಕ್ಷರು ಮಾತನಾಡಿ, ನಮ್ಮ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರ ಅವರು ಕ್ಷೇತ್ರದ ಅಭಿವೃದ್ಧಿ ಮತ್ತು ರೈತರ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಇದರ ಹಿನ್ನಲೆ ಸಹಕಾರಿ ವಲಯದಲ್ಲೂ ಜನತೆ ಜೆಡಿಎಸ್‌ಗೆ ಬೆಂಬಲ ನೀಡಿದ್ದಾರೆ. ಶಾಸಕರ ಮಾರ್ಗದರ್ಶನದಲ್ಲಿ ರೈತರಿಗೆ ಅನುಕೂಲ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಹಕಾರಿ ಸಂಘದ ಕಾರ್ಯದರ್ಶಿ ಮೋಹಿನ್, ಪ್ರಮುಖರಾದ ವಸಂತ್‌ರಾವ್, ಜಗದೀಶ್ ಕಲಾಲ್, ಬಾಲಗೌಡ, ಲಕ್ಶ್ಮಣ ಕೊತ್ತ, ಸಿದ್ರಾಮ್ ಕವಡೆ, ಚಂದ್ರಶೇಖರ ದುಪ್ಪಲ್ಲಿ, ಹೇಮರಡ್ಡಿ, ಚನ್ನಯಸ್ವಾಮಿ, ವೆಂಕಟೇಶ್ ನಾಯಕ, ರಾಮಾಚಾರಿ, ಸಂತೋಷ ಯಾದವ್, ಬುಸ್ಸನ್ನ, ನಾರಾಯಣ ಪಟ್ಟೆದರ್, ಶಿವು ಕಲಾಲ್, ಮಣಿ ಬಸಾಪುರ, ಸಹಕಾರಿ ಸಂಘದ ಸದಸ್ಯರು ಮತ್ತಿತರರು ಇದ್ದರು.

ಶಾಸಕರಿಗೆ ಸನ್ಮಾನ : ಬದ್ದೇಪಲ್ಲಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತಕ್ಕೆ ನೂತನವಾಗಿ ಅಧ್ಯಕ್ಷೆ ಮಹಾದೇವಮ್ಮ ಹಾಗೂ ಉಪಾಧ್ಯಕ್ಷ ಕಾಳಪ್ಪ ಆಯ್ಕೆಯಾದ ಹಿನ್ನೆಲೆಯಲ್ಲಿ ಯಾದಗಿರಿ ನಗರದ ಶಾಸಕರ ನಿವಾಸದಲ್ಲಿ ಶಾಸಕ ಶರಣಗೌಡ ಕಂದಕೂರ ಅವರಿಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರು ಹಾಗೂ ಜೆಡಿಎಸ್ ಮುಖಂಡರು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಜೆಡಿಎಸ್ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಡಿ. ತಾಯಪ್ಪ ಬದ್ದೇಪಲ್ಲಿ, ಯುವ ಮುಖಂಡ ನರಸಪ್ಪ ಕವಡೆ ಮತ್ತೀತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!