ನ.4 ರಂದು ಯುವ ಜಾನಪದ ಗಾಯಕ ಹಣಮಂತ ರಿಂದ ರಸಮಂಜರಿ ಕಾರ್ಯಕ್ರಮ

ಗುರುಮಠಕಲ್: ನ.4 ಮತ್ತು 5 ರಂದು ಶ್ರೀ ಲಕ್ಷ್ಮೀ ತಿಮ್ಮಪ್ಪ ಜಾತ್ರೆ, ಕಲ್ಯಾಣ ಉತ್ಸವ ಆಯೋಜಿಸಲಾಗಿದೆ ಎಂದು ದೇವಸ್ಥಾನ ಜೀರ್ಣೋದ್ದಾರ ಸಮಿತಿ ಪ್ರಮುಖ ಮಣಿಕಂಠ ರಾಠೋಡ ಹೇಳಿದರು. ತಾಲೂಕಿನ ಬೋರಬಂಡದ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನ ಆವರಣದಲ್ಲಿ ಮಾಧ್ಯಮದವರನ್ನುದ್ದೇಶಿ ಮಾತನಾಡಿದ ಅವರು, 2ನೇ ತಿರುಪತಿ ಎಂದು ಕರೆಯಲ್ಪಡುವ ಪವಿತ್ರ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ ಎಂದು ತಿಳಿಸಿದರು.

4 ರಂದು ಬೆಳಿಗ್ಗೆ 5.30 ನಿಮಿಷಕ್ಕೆ ಸುಪ್ರಭಾತ ಸೇವೆ. 6.30 ನಿಮಿಷಕ್ಕೆ ಪಂಚಾಮೃತ ಅಭಿಷೇಕ, 9 ಗಂಟೆಗೆ ಅಲಂಕಾರ ಹೋಮ, ಸಾಯಂಕಾಲ 6 ಗಂಟೆಗೆ ಕಾರ್ತಿಕ ದೀಪೋತ್ಸವ, 8 ಗಂಟೆಗೆ ಪಲ್ಲಕಿ ಉತ್ಸವ, ತದನಂತರ ಭಜನ ಕಾರ್ಯಕ್ರಮ ಬಳಿಕ ಉತ್ತರ ಕರ್ನಾಟಕದ ಖ್ಯಾತ ಗಾಯಕ ಹಣಮಂತ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.ನ.5 ರಂದು ಬೆಳಿಗ್ಗೆ 5.30 ನಿಮಿಷಕ್ಕೆ ಸುಪಭಾತ ಸೇವೆ, 6.30 ನಿಮಿಷಕ್ಕೆ ಪಂಚಾಮೃತ ಅಭಿಷೇಕ. 8 ಗಂಟೆಗೆ ರಥಾಂಗ ಹೋಮ, 9.30 ನಿಮಿಷಕ್ಕೆ ಅಭ್ಯಂಗ ಸ್ನಾನ ಕಲ್ಯಾಣೋತ್ಸವ 11.30 ನಿಮಿಷಕ್ಕೆ ರಥೋತ್ಸವ ಸೇವಾ ಮತ್ತು ಉಂಜಲ ಸೇವಾ ತದನಂತರ ಮಹಾ ಮಂಗಳಾರತಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ತಿಳಿಸಿದರು. ಹೆಚ್ಚಿನ ಭಕ್ತರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಿಬೇಕು ಎಂದು ತಿಳಿಸಿದರು.

ಈ ವೇಳೆ ಅಯ್ಯಪ್ಪ ದಾಸ, ಕಾಶಿನಾಥ್ ರಾಠೋಡ, ರಮೇಶ ಪವಾರ್, ಶಂಕರ್, ವಾಸುರಾಮ ಕಾರಭಾರಿ. ಸುರೇಶ ಪವಾ‌ರ್, ಶಂಕರ್ ಪವಾರ್, ಶರಣು ರಾಠೋಡ, ಗೋಪಾಲ ರಾಠೋಡ, ರಾಜು ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!