ಭಕ್ತಿಯ ಕಲ್ಯಾಣ ಉತ್ಸವ | ಅದ್ಧೂರಿ ರಥೋತ್ಸವ | ಅಪಾರ ಸಂಖ್ಯೆಯ ಜನರು ಭಾಗಿ
ಗುರುಮಠಕಲ್ : ಐತಿಹಾಸಿಕ ಹಿನ್ನೆಲೆ ಹೊಂದಿರುವ ಸುಕ್ಷೇತ್ರ ಬೋರಬಂಡ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದ 16ನೇ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
ಈ ವೇಳೆ ಮಾತನಾಡಿದ ಚಿತ್ತಾಪುರದ ಪೂಜ್ಯ ಸಿದ್ದಲಿಂಗಸ್ವಾಮಿ, ಜೀವನದಲ್ಲಿ ಶದ್ಧಾಭಕ್ತಿಯಿಂದ ಕೈಗೊಂಡ ಧಾರ್ಮಿಕ ಕಾರ್ಯದಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು. ಮಾನವ ಜೀವನ ಶ್ರೇಷ್ಟ. ಬದುಕಿರುವಷ್ಟು ದಿನ ವೈವಿಕಾರ್ಯ ಮಾಡುತ್ತಾ ಸನ್ಮಾರ್ಗದಲ್ಲಿ ಸಾಗಿದರೆ ಜೀವನದಲ್ಲಿ ಮೋಕ್ಷ ಪಾತ್ರಯಾಗುತ್ತದೆ ಎಂದರು.
ಧಾರ್ಮಿಕ ಸೇವೆಯಲ್ಲಿ ತೊಡಗಿರುವ ದೇಗುಲ ವ್ಯವಸ್ಥಾಪಕ ನರೇಂದ್ರ ರಾಠೋಡ ಅವರ ಕುಟುಂಬ ಹಾಗೂ ಗ್ರಾಮಸ್ಥರು ವಿಜೃಂಭಣೆಯಿಂದ ದೇವರ ಜಾತೆ, ದೀಪೋತ್ಸವ ಆಚರಿಸಿದ್ದು, ಐತಿಹಾಸಿಕ ಹಿನ್ನೆಲೆಯುಳ್ಳ ಕ್ಷೇತ್ರದಲ್ಲಿ ಸುತ್ತಲಿನ ಭಕ್ತರು ದರ್ಶನ ಪಡೆದು ಪಾವನರಾಗುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು. ಪರೋಪಕಾರಿ ಜೀವನ ನಡೆಸಿ ಜನ್ಮ ಸಾರ್ಥಕ ಮಾಡಿಕೊಳ್ಳಲು ಹೇಳಿದರು.
ಬೆಳಿಗ್ಗೆಯಿಂದಲೇ ಸುಪ್ರಭಾತ ಸೇವೆ, ಪಂಚಾಮೃತಾಭಿಷೇಕ, ಅಲಂಕಾರ ಸೇವೆ ಶ್ರೀಲಕ್ಷ್ಮಿ ತಿಮಪ್ಪ ದೇವರ ಕಲ್ಯಾಣೋತ್ಸವ. ರಥೋತ್ಸವ ಹಾಗೂ ಉಂಜಲು ಸೇವೆ ಕಾರ್ಯಕ್ರಮ ನೆರವೇರಿತು. ಪೂಜ್ಯ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿ, ಬಿಜೆಪಿ ಮುಖಂಡ ಮಣಿಕಂಠ ರಾಠೋಡ, ಅಯ್ಯಪ್ಪ ದಾಸ್, ರಾಜು ರಾಠೋಡ, ಆನಂದ ಬೋಯಿನಿ, ಕಾಶಿನಾಥ ರಾಠೋಡ, ರಮೇಶ ಪವಾರ್, ರಾಜು ರಾಠೋಡ ಸೇರಿ ಪ್ರಮುಖರು ತಾಂಡಾ ನಿವಾಸಿಗಳು. ಸುತ್ತಮುತ್ತಲಿನ ಭಕ್ತರು ಇದರು.
