ಗಡಿಯಲ್ಲಿ ಸಂಭ್ರಮದ ರಾಜ್ಯೋತ್ಸವ, ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಕೆ.ನೀಲಪ್ರಭ
ಗುರುಮಠಕಲ್: ಗಡಿ ಭಾಗದಲ್ಲಿರುವ ನಾವು ವಿವಿಧತೆಯಲ್ಲಿ ಕಾಣುತ್ತೇವೆ. ಪರಸ್ಪರ ಸೌಹಾರ್ದತೆಯಿಂದ ಬಾಳುತ್ತಿರುವುದು ಗರ್ವ ಪಡುವ ವಿಷಯ ಎಂದು ತಹಸೀಲ್ದಾರ್ ಕೆ.ನೀಲಪ್ರಭ ಹೇಳಿದರು.
ಗಡಿ ತಾಲೂಕು ಗುರುಮಠಕಲ್ ಸಾರ್ವಜನಿಕರಿಗೆ ಧ್ವಜಾರೋಹಣ ಸಮಿತಿಯಿಂದ ಆಯೋಜಿಸಿದ 69ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ತಿಳಿಸಿದ ಅವರು, ಸಮೃದ್ಧ, ಸಂಪದ್ಭರಿತ ನಾಡು ನಮ್ಮದು, ಎಲ್ಲಾ ಭಾಷೆಗಳಿಗೆ ಕನ್ನಡ ತಾಯಿಯಂತೆ ಎಂದರು.
ದೇವಿಂದ್ರಪ್ಪ ಚಿಂತಕುಂಟ ವಿಶೇಷ ಉಪನ್ಯಾಸ ನೀಡಿ, 1956 ರಲ್ಲಿ ಕರ್ನಾಟಕ ಏಕೀಕರಣಕ್ಕೆ ಹೋರಾಟ ನಡೆದು,ಬಳಿಕ ಕರ್ನಾಟಕ ನಾಮಕರಣ ಆಯಿತು ಎನ್ನುವ ಇತಿಹಾಸ. 2 ಸಾವಿರಕ್ಕೂ ಹೆಚ್ಚು ಭಾಷೆಗಳಲ್ಲಿ ಕನ್ನಡ ಭಾಷೆ ಸುಲಿದ ಬಾಳೆಯ ಹಣ್ಣಿನಂತೆ ಎಂದು ಕವಿಗಳು ವರ್ಣಿಸಿದ್ದಾರೆ. ಕವಿರಾಜಮಾರ್ಗ ದ ನಾಲ್ಕು ಸಾಲು ಓದಿದರೆ ಸಾಕು ಕನ್ನಡಿಗರು ಎಂತಹವರು ಎಂದು ತಿಳಿದುಕೊಳ್ಳಬಹುದು.
ಅಕ್ಷರ ಜ್ಞಾನ ವಿಲ್ಲದಿದ್ದರೂ ಸಾಹಿತ್ಯ ರಚನೆ ಮಾಡುವ ಗತ್ತು ಕನ್ನಡಕ್ಕಿದೆ ಎಂದು ಹೇಳಿದರು.
ಕನ್ನಡ ಅದ್ಭುತವಾದ ಭಾಷೆಯಾಗಿದೆ. ಪಂಪ ದೇವರಲ್ಲಿ ಪ್ರಾರ್ಥಿಸುತ್ತರಾರೆ ಮರು ಜನ್ಮ ಕರ್ನಾಟಕದಲ್ಲಿ ನೀಡಲು ಬೇಡಿಕೊಂಡಿದ್ದರು ಎಂದರು.ಭಾಷೆಯನ್ನು ಆರಾಧಿಸುವ, ಕನ್ನಡ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿದರು. ಪಿಐ ದೇವಿಂದ್ರಪ್ಪ ಧೂಳಖೇಡ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಅಂಬ್ರೇಷ ಪಾಟೀಲ್, ಮುಖ್ಯಾಧಿಕಾರಿ ಭಾರತಿ ದಂಡೋತಿ, ಗ್ರೇಡ್ 2 ತಹಸೀಲ್ದಾರ್ ನರಸಿಂಹ ಸ್ವಾಮಿ, ಕಸಾಪ ಅಧ್ಯಕ್ಷ ಬಸರೆಡ್ಡಿ ಎಂ.ಟಿ.ಹಳ್ಳಿ, ಸಿಡಿಪಿಓ ಶರಣಬಸಪ್ಪ, ಉಪನ್ಯಾಸಕ ಪ್ರಮುಖರಾದ ಜಿ.ತಮ್ಮಣ್ಣ, ನಾಗಭೂಷಣ ಆವಂಟಿ, ನರಸರೆಡ್ಡಿ ಪಾಟೀಲ್ ಗಡ್ಡೆಸೂಗುರ, ಸರೋಜಾ, ಸೈಯದ ಬಾಬಾ, ಜಗದೀಶ ಮೇಂಗಜಿ, ಗೋಪಾಲಕೃಷ್ಣ ಮೇದಾ, ಶರಣು ಎಲ್ಹೇರಿ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಶಶಿಕಾಂತ ಜನಾರ್ಧನ ಇತರರು ಇದ್ದರು.ರವೀಂದ್ರ ಚವಾಣ ಶಿ.ಸಂ. ಸ್ವಾಗತಿಸಿದರು. ನಾರಾಯಣ ರೆಡ್ಡಿ ಪೋ.ಪಾಟೀಲ ನಿರೂಪಿಸಿದರು.ಇದೇ ವೇಳೆ ಕನ್ನಡ ಸಾಧಕ ಮಕ್ಕಳಿಗೆ ಸನ್ಮಾನ ಮಾಡಲಾಯಿತು.
ಪುರಸಭೆ ಕಾರ್ಯಾಲಯದಲ್ಲಿ ರಾಜ್ಯೋತ್ಸವ ಆಚರಣೆ: ಇಲ್ಲಿನ ಪುರಸಭೆ ಕಾರ್ಯಾಲಯದಲ್ಲಿ ಮುಖ್ಯಾಧಿಕಾರಿ ಭಾರತಿ ದಂಡೋತಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ಈ ವೇಳೆ ಪುರಸಭೆ ಮಾಜಿ ಅಧ್ಯಕ್ಷ ಪಾಪಣ್ಣ ಮನ್ನೆ ಮಾತನಾಡಿ, ರಾಜ್ಯದಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಸ್ವಾತಂತ್ರ್ಯ ದ ಬಳಿಕ ಭಾಷಾ ಆಧಾರದಲ್ಲಿ ರಾಜ್ಯ ವಿಂಗಡಣೆಯಾಗಿತ್ತು. 1956ರಲ್ಲಿ ಕರ್ನಾಟಕ ಏಕೀಕರಣಕ್ಕೆ ಹೋರಾಟ ದೇಶಪಾಂಡೆ, ಆಲೂರು ವೆಂಕಟರಾಯರು, ಕುವೆಂಪು ಸೇರಿ ಹಲವಾರು ಸಾಕಷ್ಟು ಶ್ರಮಿಸಿದ್ದಾರೆ ಎಂದರು.
ಮೈಸೂರು ಪ್ರಾಂತ್ಯದಲ್ಲಿನ ಏಕೀಕರಣ ಮಾಡಿ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಅವರು 1973 ಕರ್ನಾಟಕ ನಾಮಕರಣ ಮಾಡಿದರು ಎಂದರು. ಇದೇ ವೇಳೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಸ್ಮರಿಸಲಾಯಿತು.
ಭಾರತಿ ದಂಡೋತಿ ಮಾತನಾಡಿ, ತಾಯಿ ಭುವನೇಶ್ವರಿ, ಗಾಂಧಿಜೀ, ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅರ್ಥ ಗರ್ಭಿತ ರಾಜ್ಯೋತ್ಸವ ಆಚರಣೆ ಮಾಡಲಾಗಿದೆ.
ಮುಂದಿನ ಪೀಳಿಗೆಗೆ ನಾಡು ಉಳಿಸಿಕೊಳ್ಳುವ ರೀತಿಯಲ್ಲಿ ತಯಾರಿಸಬೇಕು. ಗಡಿ ಭಾಗವಾಗಿರುವುದರಿಂದ ಎಲ್ಲರೂ ತಾಯಿ ಭಾಷೆಗೆ ಗೌರವಿಸಿ ಕನ್ನಡದಲ್ಲಿಯೇ ವ್ಯವಹರಿಸಲು ಹೇಳಿದರು.
ಮುಖಂಡರಾದ ಜಿ.ತಮ್ಮಣ್ಣ, ಚಂದುಲಾಲ ಚೌಧರಿ, ಅಂಬಾದಾಸ ಜೀತ್ರಿ, ಸೈಯದ್ ಬಾಬಾ, ರವೀಂದ್ರ ರೆಡ್ಡಿ ಪೋತುಲ, ಫಯಾಜ್ ಅಹ್ಮದ್, ವೆಂಕಟರಾಮುಲು, ಮರಿಲಿಂಗಪ್ಪ, ವ್ಯವಸ್ಥಾಪಕ ಮಲ್ಲಿಕಾರ್ಜುನ ಎಸ್, ರಾಮುಲು ಗೌಡ, ವೀರಭದ್ರಪ್ಪ ಸೇರಿದಂತೆ ಸಿಬ್ಬಂದಿಗಳು ಇದ್ದರು.