ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅನ್ವರ ಶೇಕ್ ಅವರಿಂದ ಮಾಧ್ಯಮಗೋಷ್ಟಿ | ಮಕ್ಕಳ ಉಜ್ವಲ ಭವಿಷ್ಯಕ್ಕೆ ಹಾರೈಕೆ

ಗುರುಮಠಕಲ್: ಇಲ್ಲಿನ ಎಸ್ ಎಲ್ ಟಿ ಪಬ್ಲಿಕ್ ಸ್ಕೂಲ್ 2024-25ನೇ ಸಾಲಿನ ಸಿಬಿಎಸ್ ಸಿ 10ನೇ ತರಗತಿ ಫಲಿತಾಂಶ ಶೇ.100 ರಷ್ಟು ಸಾಧನೆಯಾಗಿದೆ ಎಂದು ತಾಹೇರಾ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಅನ್ವರ ಶೇಕ್ ಹೇಳಿದರು.

ಪಟ್ಟಣದ ಎಸ್ ಎಲ್ ಟಿ ಪಬ್ಲಿಕ್ ಸ್ಕೂಲ್ ನಲ್ಲಿ ಸಾಧಕ ಮಕ್ಕಳನ್ನು ಸತ್ಕರಿಸಿ, ಪ್ರೋತ್ಸಾಹಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 10ನೇ ತರಗತಿಯ ಒಟ್ಟು 32 ವಿದ್ಯಾರ್ಥಿಗಳಲ್ಲಿ ಅಂಕುಶ ರೆಡ್ಡಿ ಶೇ.91, ರೋಹನ್ ಶೇ.83 ಹಾಗೂ ರಶ್ಮಿತಾ ಶೇ.81.4 ರಷ್ಟು ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇಷ್ಟಾರ್ಥ ಶೇ.76, ಬಿಂದುರೆಡ್ಡಿ ಶೇ.75 ರಷ್ಟು ಫಲಿತಾಂಶ ತಂರುವ ಮೂಲಕ ಶಿಕ್ಷಣ ಸಂಸ್ಥೆ ಮತ್ತು ಪಾಲಕರಿಗೆ ಕೀರ್ತಿ ತಂದಿದ್ದಾರೆ ಎಂದರು. ಉಳಿದಂತೆ 15 ಪ್ರಥಮ, 14 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಆಗಿದ್ದಾರೆ.

ಗಡಿ ಭಾಗ ಗುರುಮಠಕಲ್ ನಲ್ಲಿ ಉತ್ತಮ ಶಿಕ್ಷಣ ನೀಡಲು ಸಂಸ್ಥೆ ಶ್ರಮಿಸುತ್ತಿದೆ ಎಂದರು. ಇನ್ನೂ ಹೆಚ್ಚಿನ ಸಾಧನೆ ಮಾಡಿ ಮಕ್ಕಳು ಜೀವನದಲ್ಲಿ ಯಶಸ್ಸು ಸಾಧಿಸಲಿ ಎಂದು ಹಾರೈಸಿದರು.

ಇದೇ ವೇಳೆ ಸಾಧಕ ಮಕ್ಕಳು ಮತ್ತು ಪಾಲಕರನ್ನು ಸನ್ಮಾನಿಸಿದರು. ಎಸ್ ಎಲ್ ಟಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ  ನದೀಮ್ ಅಹ್ಮದ್, ತೌಸಿಫ್ ಅಹ್ಮದ್, ಪಿಯು ಕಾಲೇಜು ಪ್ರಾಂಶುಪಾಲ ಡಿ. ನಾಗರಾಜ, ಹಫೀಜ್ ಅಹ್ಮದ್ ಸೇರಿದಂತೆ ಸಿಬ್ಬಂದಿಗಳು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!