ಗುರುಮಠಕಲ್: ತಾಲೂಕಿನ ಚಪಟ್ಲ ಗ್ರಾಮ ಪಂಚಾಯಿತಿ ಪಿಡಿಓ ಜನಪ್ರತಿನಿಧಿಗಳೊಂದಿಗೆ ಅಸಭ್ಯವಾಗಿ ವರ್ತಿಸಿ, ದೌರ್ಜನ್ಯ ಎಸಗುತ್ತಿದ್ದಾರೆಂದು 10 ಜನ ಸದಸ್ಯರು ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಜನಪ್ರತಿನಿಧಿಗಳು ಲೆಕ್ಕಪತ್ರ ಕೇಳಿದರೆ ನಿಮ್ಮ ಮೇಲೆ ಎಫ್ ಐ ಆರ್ ಮಾಡಿಸುವೆ ಎಂದು ಧಮ್ಕಿ ಹಾಕುತ್ತಾರೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಏಕವಚನದಲ್ಲೇ ಮಾತನಾಡಿ, ಏನಾದರೂ ಕೇಳಿದರೆ ನಿಮ್ಮ ಮನೆ ಆಳು ಎಂದು ತಿಳಿದುಕೊಂಡಿದ್ದೀರಾ ಎಂದು ಹೇಳುತ್ತಾರೆ ಎನ್ನಲಾಗಿದೆ.
ಜನಪ್ರತಿನಿಧಿಗಳು ಯಾವುದೇ ಪತ್ರ ಕೊಟ್ಟರು ಅದಕ್ಕೆ ಸ್ಪಂದನೆ ಕೂಡ ಕೊಡುತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಅಳಲು ತೋಡಿಕೊಂಡಿದ್ದಾರೆ.
ಹಾಗಾಗಿ ಪಂಚಾಯತಿ ಅಧಿಕಾರಿಯನ್ನು ಕೂಡಲೇ ಇಲ್ಲಿಂದ ವರ್ಗಾವಣೆ ಮಾಡಬೇಕೆಂದು ಸದಸ್ಯರಾದ ಶ್ರೀಶೈಲ್, ಕಾಶಪ್ಪ, ಶರಣಪ್ಪ , ಲಕ್ಷ್ಮೀ, ಜ್ಯೋತಿ, ಸಿದ್ದಲಿಂಗಮ್ಮ, ಮಾಳಮ್ಮ ,ಮಾಣಿಕ್ಯಮ್ಮ, ಲಕ್ಷ್ಮೀ , ರಾಮು ಒತ್ತಾಯಿಸಿದ್ದಾರೆ.
