ನಿಜಶರಣ ಅಂಬಿಗರ ಚೌಡಯ್ಯನವರ 905 ನೇ ಜಯಂತಿ | ಸ್ಪೂರ್ತಿದಾಯಕ ವಚನಗಳ ಮೂಲಕ ಸಮಾಜ ತಿದ್ದುವ ಕಾರ್ಯ

ಗುರುಮಠಕಲ್: ನೇರ ನುಡಿಯ ವಚನಕಾರರಾಗಿದ್ದ ನಿಜಶರಣ ಅಂಬಿಗರ ಚೌಡಯ್ಯ ಅವರ ಕೊಡುಗೆ ಅಪಾರವಾಗಿದೆ ಎಂದು ಯುವ ಮುಖಂಡ ಮಹೇಶ ಬಂಗಿ ಹೇಳಿದರು.

ತಾಲೂಕಿನ ಚಪೆಟ್ಲಾ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಅವರ 905 ನೇ ಜಯಂತಿ ಕಾರ್ಯಕ್ರಮ ಹಿನ್ನೆಲೆ ಸ್ತಬ್ದ ಚಿತ್ರದ ಮೆರವಣಿಗೆ ನಡೆಯಿತು.ಬಳಿಕ ಮಾತನಾಡಿದ ಅವರು, 12ನೇ ಶತಮಾನದ ಸಂತ ಕವಿ ಮತ್ತು ಸಾಮಾಜಿಕ ವಿಮರ್ಶಕ ಅವರೇ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ, ಅವರ ಜನನ 1120 ರಲ್ಲಿ (12ನೇ ಶತಮಾನ) ತಂದೆ ವಿರುಪಾಕ್ಷ ತಾಯಿ ಪಂಪಾ ದೇವಿಯ ಉದರದಲ್ಲಿ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಚೌಡದಾನಪುರದಲ್ಲಿ ಜನಿಸಿದರು.

ತಂದೆ ತಾಯಿಯ ವೃತ್ತಿಯನ್ನು ಆಯ್ದುಕೊಂಡ ಚೌಡೇಶ (ಮೂಲ ಹೆಸರು) ದೋಣಿಗರಾಗಿದ್ದರು, ನದಿಯಲ್ಲಿ ದೋಣಿ ಯನ್ನು ನಡೆಸುವ ವೃತ್ತಿಯನ್ನು ಮೆಚ್ಚಿಕೊಂಡಿದ್ದು, ಜಗಜ್ಯೋತಿ ಬಸವಣ್ಣನವರ ಚಳುವಳಿಯಿಂದ ಪ್ರಭಾವಿತರಾಗಿ ಕಲ್ಯಾಣಕ್ಕೆ ಹೋದರು. ಅಲ್ಲಿ ನಡೆದಿರುವ ಸಾಮಾಜಿಕ ಚಳುವಳಿಗೆ ಸೇರಿಕೊಂಡರು.

ಅವರ ವಚನಗಳ ವಸ್ತು ಭಾಷೆ ಶೈಲಿ ಗಮನಿಸಿದರೆ ಅವರೊಬ್ಬ ಕೆಚ್ಚದೆಯ ಹಾಗೂ ಗ್ರಾಮ್ಯ ಮನೋ ಧರ್ಮದ ವಚನಕಾರ ಎಂದು ಹೇಳಬಹುದು. ಜನರು ಸಮಾಜದಲ್ಲಿ ಹೇಗೆ ಇದ್ದರೂ ಟೀಕೆ ಮಾಡುವುದು ಬಿಡುವುದಿಲ್ಲ. ತನ್ನ ವಚನದ ಮೂಲಕ ಮಾರ್ಮಿಕವಾಗಿ ತಿಳಿಸುತ್ತಾನೆ ಊರುಳಗಿದ್ದರೆ ಸಂಸಾರಿ ಎಂಬುವರು ಅಡವಿಯೊಳಗಿದ್ದರೆ ಮೃಗ ಜಾತಿ ಎಂಬುವವರು’ ಎಂದು ಸಮಾಜದಲ್ಲಿ ಜನರ ಯಾವ ರೀತಿ ಇದ್ದರೂ ಹೆಸರಿಡುವ ಜನರ ಮನಸ್ಥಿತಿಯನ್ನ ವಚನದ ಮೂಲಕ ತಿಳಿಸುತ್ತಾರೆ ಎಂದರು.

ಈ ವೇಳೆ ಮಹೇಶ್ ನಾಯ್ಕೋಡಿ, ಮಹದೇವಪ್ಪ ಬುಡಂಗಿರ್,  ಮಹದೇವಪ್ಪ ಬಂಗಿ, ರಮೇಶ್ ನಾಯ್ಕೋಡಿ, ನರಸಪ್ಪ ಗಜ್ಜಿ, ಉಮೇಶ್ ಮಳ್ಳಿ, ನರಸಪ್ಪ ಕುಪ್ಪಾಗಿರಿ, ಮೈಯಪ್ಪ, ಮಹೇಶ್ ಮಳ್ಳಿ ಇತರರು ಜಯಂತಿಯಲ್ಲಿ ಪಾಲ್ಗೊಂಡಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!