ಹಿಂದೂ ಹೃದಯ ಸಾಮ್ರಾಟ ಶಿವಾಜಿ ಮಹಾರಾಜರ ಜಯಂತಿ | ಭಕ್ತಿ ಗೀತೆಗಳಿಗೆ ಜೋಶ್ ನಲ್ಲಿ ಕುಣಿದ ಯುವಕರು

ಗುರುಮಠಕಲ್: ಛತ್ರಪತಿ ಶಿವಾಜಿ ಮಹಾರಾಜರ 395 ನೇ ಜಯಂತ್ಯೋತ್ಸವ ಅಂಗವಾಗಿ ರವಿವಾರದಂದು ಪಟ್ಟಣದಲ್ಲಿ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ.

ಶೋಭಾಯಾತ್ರೆಯು ಪಟ್ಟಣದ  ನಗರೇಶ್ವರ ದೇವಸ್ಥಾನ ದಿಂದ ಆರಂಭಗೊಂಡಿದ್ದು, ನಿಜಶರಣ ಅಂಬಿಗರ ಚೌಡಯ್ಯ ವೃತ್ತದ ಮಾರ್ಗವಾಗಿ ಬಸವೇಶ್ವರ ವೃತ್ತದಲ್ಲಿ ಸಂಪನ್ನಗೊಳ್ಳಲಿದೆ.

ಸನಾತನ ಸಂಸ್ಕೃತಿಯ ವಾಗ್ಮಿ, ಪೂಜ್ಯ ಆದಿತ್ಯಪರಾಶ್ರೀಗಳು ಬಿಜ್ಜಾರಂ ಅವರು ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಕೆಲವೇ ಕ್ಷಣಗಳಲ್ಲಿ ಆಶೀರ್ವಚನ ನೀಡಲಿದ್ದಾರೆ.

ಶೋಭಾಯಾತ್ರೆಯಲ್ಲಿ ಹಿಂದೂ ಯುವ ಗರ್ಜನೆ ವೇದಿಕೆ ಅಧ್ಯಕ್ಷ ವೆಂಕಟೇಶ, ರಾಜಾ ರಮೇಶ ಗೌಡ, ವೀರಪ್ಪ ಪ್ಯಾಟಿ, ಶ್ರೀನಿವಾಸ ಗಾಳಾ, ಜಗದೀಶ ಭೂಮಾ, ಬಾಲಾಜಿ ತಗಡಘರ, ನರಸಪ್ಪ, ರಮೇಶ ಹೂಗಾರ್, ಶಂಕರ ನಾಗವೋಳ ಸೇರಿದಂತೆ ಪಟ್ಟಣದ ಹಿಂದೂಪರ ಸಂಘಟನೆ, ವಿವಿಧ ಸಮಾಜಗಳ ಮುಖಂಡರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಗುರುಮಠಕಲ್ ಪಿಐ ದೇವೀಂದ್ರಪ್ಪ ಧೂಳಖೇಡ ಅವರು ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!