ಗುರುಮಠಕಲ್, ಸೈದಾಪುರ ಬ್ಲಾಕ್ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ | ಬಿಜೆಪಿ ವಿರುದ್ಧ ಮಾಜಿ ಸಚಿವ ಚಿಂಚನಸೂರ ವಾಗ್ದಾಳಿ

ಗುರುಮಠಕಲ್: ರಾಜ್ಯದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ಬಿಜೆಪಿ ಕುತಂತ್ರ ರೂಪಿಸುತ್ತಿದೆ ಎಂದು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರೂ ಆಗಿರುವ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ವಾಗ್ದಾಳಿ ನಡೆಸಿದರು.

ಗುರುಮಠಕಲ್ ನ ಎರಡು ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಿಜೆಪಿ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಗುತ್ತಿಗೆದಾರ ಸಚಿನ್ ಪ್ರಕರಣಕ್ಕೆ ಸಚಿವರಿಗೆ ಯಾವುದೇ ಸಂಬಂಧವಿಲ್ಲ. ಆದರೇ ಇದರಲ್ಲಿ ರಾಜಕೀಯ ಮಾಡುವ ಮೂಲಕ ಹೊಟ್ಟೆ ಕಿಚ್ಚಿನಿಂದ ಪ್ರಿಯಾಂಕ್ ಖರ್ಗೆ ಹೆಸರು ಎಳಿದು ತರಲಾಗುತ್ತಿದೆ ಎಂದರು.

ಅಭಿವೃದ್ಧಿ ಇನ್ನೊಂದು ಹೆಸರೇ ಪ್ರಿಯಾಂಕ್ ಖರ್ಗೆ. ಅವರ ಅಭಿವೃದ್ಧಿ ಸಹಿಸುವುದು ಆಗುತ್ತಿಲ್ಲ. ಖರ್ಗೆ ಅವರನ್ನು ಬೆಳೆಯಲು ಬಿಡಬಾರದು ಎಂದು ಕಳಂಕ ತರುವ ಕಾರ್ಯ ಮಾಡುತ್ತಿದೆ ಎಂದರು.

ಕೆಪಿಸಿಸಿ ಹಿಂದುಳಿದ ವರ್ಗಗಳ ಮುಖಂಡ ಶರಣಪ್ಪ ಮಾನೇಗಾರ ಮಾತನಾಡಿ, ಬಿಜೆಪಿ ತಪ್ಪುಗಳನ್ನು ಮುಚ್ಚಿಕೊಳ್ಳಲು ಪ್ರಿಯಾಂಕ ಖರ್ಗೆ ಹೆಸರು ಕೆಡಿಸಲು ಷಡ್ಯಂತ್ರ ಮಾಡುತ್ತಿದೆ ಇದನ್ನು ಕಾರ್ಯಕರ್ತರು ಎಂದಿಗೂ ಸಹಿಸುವುದಿಲ್ಲ ಎಂದರು.

ಮುಖಂಡ ಸಾಯಬಣ್ಣ ಬೋರಬಂಡ ಮಾತನಾಡಿ, ಬಿಜೆಪಿ ಅದೆಷ್ಟೋ ನಾಯಕರ ಮೇಲೆ ಅತ್ಯಾಚಾರದಂತಹ ಹಲವು ಪ್ರಕರಣಗಳಿವೆ. ಯಾರು ಪ್ರಾಮಾಣಿಕರು ಎಂದು ಜನರಿಗೆ ಗೊತ್ತಿದೆ. ಕಾಂಗ್ರೆಸ್ ಮತ್ತು ಪ್ರಿಯಾಂಕ್ ಮೇಲೆ ಬಿಜೆಪಿ ತಂತ್ರ ನಡೆಸುತ್ತಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಪೂರ ಮಾತನಾಡಿ, ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ ವಸ್ತುಸ್ಥಿತಿ ಬೆರೆಯೇ ಇದೆ. ಇದರಲ್ಲಿ ಪ್ರಿಯಾಂಕ್ ಅವರಿಗೆ ಏನು ಸಂಬಂಧ ಇಲ್ಲ. ಖರ್ಗೆ ರಾಜೀನಾಮೆ ಯಾಕೆ ಕೊಡಬೇಕು ಎಂದು ಪ್ರಶ್ನಿಸಿದರು.

ಯಾರೋ ತಪ್ಪು ಮಾಡಿದ್ರೇ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕಾ. ವಿಪಕ್ಷವಾಗಿ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಸರ್ಕಾರಕದ ಗಮನಕ್ಕೆ ತಂದು ಹೋರಾಡಲಿ ಈ ರೀತಿ ರಾಜಕೀಯ ಮಾಡುವದು ಸರಿಯಲ್ಲ ಎಂದರು.

ಇದಕ್ಕೂ ಮುನ್ನ ಗಾಂಧಿ ಮೈದಾನದಿಂದ ಪ್ರಮುಖ ಬೀದಿಗಳಲ್ಲಿ ಬಿಜೆಪಿ ವಿರುದ್ಧ ಘೋಷಣೆ ಕೂಗುತ್ತ ಬಸ್ ನಿಲ್ದಾಣ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಗುರುಮಠಕಲ್ ಬ್ಲಾಕ್ ಅಧ್ಯಕ್ಷ ಕೃಷ್ಣ ಚಪೆಟ್ಲಾ, ಸೈದಾಪುರ ಬ್ಲಾಕ್ ಅಧ್ಯಕ್ಷ ನಿರಂಜನ ರೆಡ್ಡಿ, ಚಿದಾನಂದಪ್ಪ ಕಾಳಬೆಳಗುಂದಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಲಕ್ಷ್ಮೀಕಾಂತ ರೆಡ್ಡಿ ಪಲ್ಲಾ, ವಿಶ್ವನಾಥ ನೀಲಹಳ್ಳಿ, ಸೈಯದ್ ಮೈನೋದ್ದೀನ್, ವಿಜಯ ನೀರೆಟಿ, ಸಂಜಯ ಚಂದಾಪುರ, ಅಕ್ತರ್ ಪ್ಯಾರೆ, ಹೊನ್ನೇಶ್ ದೊಡ್ಡಮನಿ,ವಸಂತ ಹಬೀಬ್, ಯಶವಂತ ಚೌದರಿ, ಸೈಯದ್ ಬಾಬಾ ಸೇರಿದಂತೆ ಪುರಸಭೆ ಸದಸ್ಯರು, ಜನಪ್ರತಿನಿಧಿಗಳು ಕಾರ್ಯಕರ್ತರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!