ಗುರುಮಠಕಲ್ ಕ್ಷೇತ್ರದ 35 ಕೆರೆಗಳ ನೀರು ತುಂಬುವ ಯೋಜನೆಯ ಚಿನ್ನಾಕಾರ್ ಪಂಪ್ ಹೌಸ್ 2 ವೀಕ್ಷಣೆ ಮಾಡಿದ ಶಾಸಕರು…
ಗುರುಮಠಕಲ್: ಮತಕ್ಷೇತ್ರದ 35 ಕರೆಗಳಿಗೆ ನೀರು ತುಂಬವ 400 ಕೋಟಿ ವೆಚ್ಚದ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಇಲ್ಲವೇ ಉಪ ಮುಖ್ಯಮಂತ್ರಿಗಳಿಂದ ಉದ್ಘಾಟನೆ ಮಾಡಿಸಲಾಗುವುದು ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.
ತಾಲೂಕಿನ ಚಿನ್ನಾಕಾರ ಬಳಿಯಿರುವ ಕೃಷ್ಣ ಭಾಗ್ಯ ಜಲ ನಿಗಮದ ಜಾಕವೆಲ್ ಕಂ.ಪಂಪ್ ಹೌಸ್ 2ಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಬೃಹತ್ ಕಾಮಗಾರಿ 2020ರ ವೇಳೆಗೆ ಮುಗಿಯಬೇಕಿತ್ತು. ಕೊರೊನಾ ಇನ್ನಿತರ ಕಾರಣದಿಂದ ತಡವಾಗಿದೆ.
ಯೋಜನೆಯಡಿ ಸೇಡಂ ತಾಲೂಕಿನ 4, ಯಾದಗಿರಿ ಕ್ಷೇತ್ರದ 4 ಹಾಗೂ ಗುರುಮಠಕಲ್‌ನ 27 ಕೆರೆಗಳು ಒಳಗೊಂಡಿದ್ದು, ಈಗಾಗಲೇ 34 ಕೆರೆಗಳಿಗೆ ನೀರು ತುಂಬುವ ಕಾರ್ಯ ನಡೆಯುತ್ತಿದೆ ಎಂದು ವಿವರಿಸಿದರು.
ನಜರಾಪುರ, ಮಿನಾಸಪೂರ, ಕೇಶ್ವಾರ ಕೆರೆಗಳಿಗೆ ಚಂಡರಕಿ ಮಾರ್ಗವಾಗಿ ಹೋಗಬೇಕಿದ್ದು ಚಂಡರಕಿಯಲ್ಲಿ ರೈತರೊಬ್ಬರು ಪರಿಹಾರಕ್ಕೆ ಕೋರ್ಟ್ ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ. ವಿಳಂಭಕ್ಕೆ ಕಾರಣವಾದುದ್ದನ್ನು ಕೆಡಿಪಿ ಸಭೆಯಲ್ಲಿ ಪ್ರಸ್ತಾಪಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ.
ಕಾಮಗಾರಿಗೆ ಭೂಸ್ವಾಧಿನ ನಡೆಯೋದಿಲ್ಲ. ಜಮೀನಿನಲ್ಲಿ ಆಳಕ್ಕೆ ಪೈಪ್‌ಲೈನ್ ಅಳವಡಿಸಬೇಕಿರುವುದರಿಂದ ನಿಯಮದಂತೆ ಪರಿಹಾರ ವಿತರಣೆ ಮಾಡಬೇಕಿರುವುದು ನ್ಯಾಯಯುತವಾಗಿ ಒದಗಿಸಲಾಗುವುದು.
ಬಾಗಿನ ಅರ್ಪಣೆ: ಪಂಪ್ ಹೌಸ್ ಗೆ ಭೇಟಿ ನೀಡಿ ಪರಿಶೀಲನೆ ವೇಳೆ ಭೀಮಾ ನದಿಯಿಂದ ಕೆರೆಗಳಿಗೆ ಸರಬರಾಜುಗೊಳ್ಳುವ ಕಾಲುವೆ ಬಳಿ ಶಾಸಕರು ಗಂಗಾಮಾತೆಗೆ ಪೂಜೆ ಸಲ್ಲಿಸಿ,ಬಾಗಿನ ಅರ್ಪಿಸಿದರು.
ಈ ಭಾಗದ ಬೃಹತ್ ನೀರಾವರಿ ಯೋಜನೆ ರೈತರ ಮುಂದಿನ ಪೀಳಿಗೆ, ನೀರಾವರಿಗೆ ಅನುಕೂಲ ವಾಗಲಿದೆ. ಯೋಜನೆಗೆ ಅಡೆತಡೆಯಾಗುತ್ತಿ ರುವುದು ರೈತರೊಂದಿಗೆ ವೈಯಕ್ತಿವಾಗಿ ಮಾತನಾಡಿ ಸಮಸ್ಯೆ ಇತ್ಯರ್ಥಗೊಳಿಸಲು ಪ್ರಯತ್ನಿಸಲಾಗು ವುದು. ಕೆಡಿಪಿ ಸಭೆಯಲ್ಲಿ ವಿಷಯ ಚರ್ಚಿಸಲಾ ಗುವುದು – ಶರಣಗೌಡ ಕಂದಕೂರ, ಶಾಸಕರು.
ಈ ವೇಳೆ ಮುಖ್ಯ ಇಂಜಿನಿಯರ್ ಪ್ರೇಮಕುಮಾರ, ಎಇಇ ಕಲ್ಯಾಣ ಕುಮಾರ, ಎಲ್‌ಆ್ಯಂಡ್‌ಟಿ ಪ್ರೊಜೆಕ್ಟ್ ಮ್ಯಾನೇಜರ್ ಮುತ್ತುರಾಜನ್, ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಷ್ಚಂದ್ರ ಕಟಕಟೆ ಹೊನಗೇರಾ, ಶರಣು ಆವುಂಟಿ, ಮಹೇಂದ್ರರೆಡ್ಡಿ ಕಂದಕೂರ, ಈಶ್ವರ ರಾಠೋಡ, ಪಾಪಣ್ಣ ಮನ್ನೆ, ರಮೇಶ ಪವಾರ್, ಶಂಕರ ರಾಠೋಡ, ಕಾಸಿಂ ಧರ್ಮಪೂರ, ಪಿಡಿಓ ಉಮೇಶ ರಾಠೋಡ, ಗ್ರಾ,ಪಂ ಸದಸ್ಯರು ಇದ್ದರು.