ಪಟ್ಟಣದ ಟೌನ್ ಹಾಲ್ ಕಟ್ಟಡ ಪರಿಶೀಲನೆ | ನ್ಯಾಯಾಲಯ ಸ್ಥಾಪನೆಗೆ ಬಹು ವರ್ಷಗಳ ಬೇಡಿಕೆ
ಗುರುಮಠಕಲ್ : ಪಟ್ಟಣದಲ್ಲಿ 2021ರಲ್ಲಿ ನಿರ್ಮಾಣವಾದ ಟೌನ್ ಹಾಲ್ ಭವ್ಯ ಕಟ್ಟಡದಲ್ಲಿ ತಾಲೂಕು ನ್ಯಾಯಾಲಯ ಸ್ಥಾಪನೆಗಾಗಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮರುಳಸಿದ್ದರಾಧ್ಯ ಹೆಚ್.ಜೆ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದರು.
ಶನಿವಾರ ಪಟ್ಟಣದ ಹೊರವಲಯದ ಗಣೇಶ ನಗರದಲ್ಲಿರುವ ಟೌನ್ ಹಾಲ್ ಕಟ್ಟಡ ವೀಕ್ಷಿಸಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದರು.
ಗುರುಮಠಕಲ್ ವ್ಯಾಪ್ತಿಯ ಜನರು ಸಣ್ಣ ಪುಟ್ಟ ಕೆಲಸಕ್ಕೂ ಜನರು ಸುಮಾರು 40 ಕಿ.ಮೀ. ದೂರದ ಯಾದಗಿರಿಯನ್ನು ಅವಲಂಭಿಸಿದ್ದು, ಗುರುಮಠಕಲ್ ನಲ್ಲಿ ನ್ಯಾಯಾಲಯ ಸ್ಥಾಪನೆಯಿಂದ ಗಡಿ ಭಾಗದ ಜನರಿಗೆ ಅನುಕೂಲವಾಗಲಿದೆ. ಶೀಘ್ರವೇ ನ್ಯಾಯಾಲಯ ಸ್ಥಾಪನೆಯಾಗುವ ನಿರೀಕ್ಷೆಯಲ್ಲಿ ಜನರಿದ್ದಾರೆ.
ಪರಿಶೀಲನೆ ವೇಳೆ ಪುರಸಭೆ ಅಧ್ಯಕ್ಷೆ ಜಯಶ್ರೀ ಪಾಟೀಲ್, ವಕೀಲರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್ ಪಾಟೀಲ್, ಸಾಬಣ್ಣ ಗಣಪೂರ, ರಾಜರಮೇಶ ಗೌಡ, ಸಾಬಣ್ಣ ಇಮಲಾಪುರ. ಕೃಷ್ಣಾ ಮೇದಾ, ದೇವಿಂದಪ್ಪ ಎಂ. ಗುರುನಾಥರೆಡ್ಡಿ ಅನಪೂರ, ಮೋಹನ ಗಜರೆ, ಪಿಡಬ್ಲೂಡಿ ಎಇಇ ಪರಶುರಾಮ, ಸುನೀಲ್, ಪುರಸಭೆ ವ್ಯವಸ್ಥಾಪಕ ಮಲ್ಲಿಕಾರ್ಜುನ ಸೇರಿದಂತೆ ಹಲವರು ಇದರು.
