ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸರ್ಕಾರಿ ನೌಕರರದಿಂದ ಉಚಿತ ಆರೋಗ್ಯ ಚಿಕಿತ್ಸೆ ಶಿಬಿರ | ಹೃದಯ ರೋಗ, ನರರೋಗ, ಮೂತ್ರಕೋಶ ಸಂಬಂಧಿತ ರೋಗಗಳು, ಕ್ಯಾನ್ಸರ್ ತಪಾಸಣೆ, ಸುಟ್ಟ ಗಾಯಗಳ ಚಿಕಿತ್ಸೆ | ಮಕ್ಕಳ ಹೃದಯ ಸಂಬಂಧಿ ಖಾಯಿಲೆಗಳಿಗೆ ಚಿಕಿತ್ಸೆ

ಗುರುಮಠಕಲ್ : ತಾಲೂಕು ಸರ್ಕಾರಿ ನೌಕರರ ಸಂಘ ವರ್ಷ ಪೂರೈಸಿದ ಹಿನ್ನಲೆಯಲ್ಲಿ ಬಡ ಜನರಿಗಾಗಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ಆಯೋಜಿಸಲಾಗಿದೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ್ ನೀರೆಟಿ ತಿಳಿಸಿದರು. ಪಟ್ಟಣದ ನೌಕರರ ಸಂಘದ ಕಚೇರಿಯಲ್ಲಿ  ಮಾಧ್ಯಮದವರನ್ನು ಮಾತನಾಡಿದ ಅವರು, ನ.17ರಂದು ಗುರುಮಠಕಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ  ಬೆಳಿಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ  ಶಿಬಿರ ನಡೆಯಲಿದೆ. ಸಮುದಾಯ ಆರೋಗ್ಯ ಕೇಂದ್ರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಗುರುಮಠಕಲ್ ಘಟಕ ಹಾಗೂ ವೈದೇಹಿ ಆಸ್ಪತ್ರೆ (EPIP Area, ವೈಟ್‍ಫೀಲ್ಡ್, ಬೆಂಗಳೂರು) ಇವರ ಸಂಯುಕ್ತಾಶ್ರಯದಲ್ಲಿ ಶಿಬಿರ ನಡೆಯಲಿದೆ ಎಂದು ತಿಳಿಸಿದರು.

ಸಂಘವು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ವಿವಿಧ ರೋಗಗಳ ತಪಾಸಣೆ ಹಾಗೂ ತಜ್ಞ ವೈದ್ಯರ ಸಲಹೆಗಳನ್ನು ಶಿಬಿರದಲ್ಲಿ ಉಚಿತವಾಗಿ ನೀಡಲಾಗುತ್ತದೆ. ತಪಾಸಣೆಗೆ ಬರುವವರು ಬಿಪಿಎಲ್ ಪಡಿತರ ಚೀಟಿ, ಆಧಾರ್ ಕಾರ್ಡ್ ಹಾಗೂ ಹಳೆಯ ವೈದ್ಯರ ಚೀಟಿಗಳನ್ನು ತಂದಿರಬೇಕು ಎಂದರು.

0 ರಿಂದ 8 ವರ್ಷದ ಮಕ್ಕಳಲ್ಲಿ ಕಂಡುಬರುವ ಹೃದಯ ಸಂಬಂಧಿತ ಕಾಯಿಲೆಗಳಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಜೊತೆಗೆ ಎಕೋ, ಇಸಿಜಿ ಮತ್ತು ಕೆಲವು ಪ್ರಮುಖ ಪರೀಕ್ಷೆಗಳು ಹಾಗೂ ಅಗತ್ಯ ಔಷಧಿಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ : 9008393118 ಈ ಸಂದರ್ಭದಲ್ಲಿ ರಾಜ್ಯ ನೌಕರರ ಸಂಘ ಸದಸ್ಯ ಹರೀಶ್ ಇತರರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!